ನಿಮ್ಮ ನೋಟವನ್ನು ಕಂಡುಕೊಳ್ಳುವ ಎರಡು fun testಗಳನ್ನು ಇಲ್ಲಿ ನೀಡುತ್ತಿದ್ದೇವೆ. ಚಿತ್ರಗಳನ್ನು ಗಮನಿಸಿ. ನೋಡಿದ ಕೂಡಲೇ ಮೊದಲು ಏನು ಕಂಡಿತೋ ಅದನ್ನು ಮಾತ್ರ ಪರಿಗಣಿಸಿ. ಅದರ ವಿಶ್ಲೇಷಣೆಯನ್ನು ಓದಿಕೊಳ್ಳಿ. ನಿಮ್ಮ ಅಂತರಂಗದೊಳಗೆ ಹಣಕುವ ಚಿಕ್ಕ ಮನರಂಜನೆ ಇದು.
“ನೋಡು, ಅದು ಕಾಣುತ್ತದೆ” ಅನ್ನುತ್ತಾನೆ ಪ್ರಾಚೀನ ಗ್ರೀಕ್ ತತ್ತ್ವಜ್ಞಾನಿ ಸಫೋಕ್ಲಿಸ್.
ಯಾವುದು ಕಾಣುತ್ತದೆ? ನಾವೇನು ನೋಡುತ್ತಿದ್ದೇವೋ ಅದು! ನಾವೇನು ನೋಡುತ್ತೇವೆ? ನಾವು ಏನನ್ನು ನೋಡಲು ಬಯಸುತ್ತಿದ್ದೇವೋ ಅದನ್ನೇ!
“ಮನಸಿನಂತೆ ಮಹಾದೇವ” ಅನ್ನುತ್ತಾರಲ್ಲವೆ? ಹಾಗೆಯೇ ಇದೂ. ಯಾವ ವಸ್ತುವನ್ನೇ ನೋಡಿದರೂ ಅದು ಕಾಣುವುದು ನಮಗೆ ಬೇಕಾದಂತೆಯೇ. ಪ್ರತಿಯೊಂದು ನೋಟ ನಮ್ಮ ಅಂತರಂಗದ ಪ್ರತಿಬಿಂಬ. ನಮಗೆ ಯಾವುದು ಹೇಗೆ ಕಾಣುತ್ತದೆ ಅನ್ನುವುದು ನಮ್ಮ ಆಲೋಚನೆ ಹೇಗಿದೆ ಅನ್ನುವುದನ್ನು ತೋರಿಸುತ್ತದೆ.
ಈ ನಿಟ್ಟಿನಲ್ಲಿ ನಿಮ್ಮ ನೋಟವನ್ನು ಕಂಡುಕೊಳ್ಳುವ ಎರಡೇ ಎರಡು fun testಗಳನ್ನು ಇಲ್ಲಿ ನೀಡುತ್ತಿದ್ದೇವೆ.
ಈ ಕೆಳಗಿನ ಚಿತ್ರಗಳನ್ನು ಗಮನಿಸಿ. ನೋಡಿದ ಕೂಡಲೇ ಮೊದಲು ಏನು ಕಂಡಿತೋ ಅದನ್ನು ಮಾತ್ರ ಪರಿಗಣಿಸಿ. ಅದರ ವಿಶ್ಲೇಷಣೆಯನ್ನು ಓದಿಕೊಳ್ಳಿ. ನಿಮ್ಮ ಅಂತರಂಗದೊಳಗೆ ಹಣಕುವ ಚಿಕ್ಕ ಮನರಂಜನೆ ಇದು.
ಚಿತ್ರ 1
ನಿಮಗೆ ಮೊದಲು ಕಾರ್ ಕಾಣಿಸಿದರೆ;
ನೀವು ಸ್ವತಂತ್ರ ಪ್ರವೃತ್ತಿಯವರು, ಸದಾ ಏನಾದರೊಂದನ್ನು ಮಾಡುತ್ತಲೇ ಇರುವ ತುಡಿತ ಉಳ್ಳವರು.
ಹೊಸ ಜನರನ್ನು ಭೇಟಿ ಮಾಡಲು, ಹೊಸ ಸ್ಥಳಗಳನ್ನು ಹುಡುಕಿಕೊಂಡು ಹೋಗಲು ನೀವು ಇಷ್ಟಪಡುತ್ತೀರಿ. ಹೊಸ ಅನುಭವಗಳು ಮತ್ತು ಸಂಬಂಧಗಳು ನಿಮಗೆ ಆಪ್ತವಾಗುತ್ತವೆ. ಸದಾ ನಿಮ್ಮ ಬದುಕನ್ನು ಹೊಸ ಆಯಾಮಗಳಿಗೆ ಒಡ್ಡಿಕೊಳ್ಳುತ್ತೀರಿ. ನಿಮ್ಮ ಬದುಕನ್ನು ಸಹಜವಾಗಿ ನಡೆಸಿಕೊಂಡು ಹೋಗುತ್ತೀರಿ.
ಬೈನಾಕ್ಯುಲರ್
ನಿಮಗೆ ಮೊದಲು ಬೈನಾಕ್ಯುಲರ್ ಕಾಣಿಸಿದರೆ;
ನೀವು ಹೆಚ್ಚು ವಿಶ್ಲೇಷಣಾ ಪ್ರವೃತ್ತಿಯವರಾಗಿದ್ದೀರಿ ಎಂದರ್ಥ. ಪ್ರತಿಯೊಂದು ಸಂಗತಿಯನ್ನೂ ಕೂಲಂಕಷವಾಗಿ ಪರಿಶೀಲಿಸಿಯೇ ಹೆಜ್ಜೆ ಮುಂದಿಡುವ ಜನ ನೀವು.
ದೂರದ ದೊಡ್ಡ ವಸ್ತು / ಸಂಗತಿಗಳ ಮೇಲೇ ನಿಮ್ಮ ಗಮನ. ಈ ಭರದಲ್ಲಿ ಸಮೀಪದ ಚಿಕ್ಕಚಿಕ್ಕ ಸಂಗತಿಗಳನ್ನು ಕಳೆದುಕೊಂಡುಬಿಡುತ್ತೀರಿ,
ನಿಮಗೆ ಮೊದಲು A ಅಕ್ಷರ ಕಾಣಿಸಿದರೆ;
ನಿಜಕ್ಕೂ ನಿಮ್ಮ ಕಣ್ಣು ಹದ್ದಿನ ಕಣ್ಣು. ಏಕೆಂದರೆ, ಈ ಚಿತ್ರದಲ್ಲಿ ಮೊದಲು A ಅಕ್ಷರವನ್ನು ನೋಡುವವರು ಅಪರೂಪ. ಹಾಗೆಯೇ ನೀವು ಕೂಡಾ ಅಪರೂಪದ ವ್ಯಕ್ತಿ.
ಯಾವುದೇ ವಸ್ತು/ವಿಷಯದಲ್ಲಾದರೂ ನೀವು ಮೊದಲು ನೋಡುವುದು ಅದರ ಚಿಕ್ಕ ಪುಟ್ಟ ವಿವರಗಳನ್ನು. ನೀವು ಮೊದಲ ನೋಟಕ್ಕೆ ಕಾರ್ ಮತ್ತು ಬೈನಾಕ್ಯುಲರ್ ಕಾಣುವ ಜನರಿಗಿಂತ ಹೆಚ್ಚು ಸೂಕ್ಷ್ಮ
ಚಿತ್ರ 2
ನಿಮಗೆ ಮೊದಲು ಮೊಸಳೆ ಮೂತಿ ಕಾಣಿಸಿದರೆ;
ನೀವು ಯಾವಾಗಲೂ ದೊಡ್ಡ ಗುರಿಯತ್ತ ಗಮನ ನೀಡುವವರು. ದೊಡ್ಡ ಸಂಗತಿಗಳನ್ನೇ ಕುರಿತು ಆಲೋಚಿಸುತ್ತಾ ಇರುವಂಥವರು. ಈ ಧಾವಂತದಲ್ಲಿ ನಿಮ್ಮ ಸಮೀಪದಲ್ಲೇ ಇರುವ ಸಂಗತಿಗಳನ್ನು ನೀವು ನೋಡದೇ ಉಳಿಯುವಿರಿ. ಅವು ಮುಖ್ಯವಲ್ಲ ಎಂದು ಭಾವಿಸುತ್ತೀರಿ. ಇದರಿಂದ ನೀವು ಕೆಲವು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವುದುಂಟು.
ಆದರೆ ನೀವು ತುಂಬಾ ಪ್ರಾಕ್ಟಿಕಲ್ ವ್ಯಕ್ತಿ. ಸುಖಾಸುಮ್ಮನೆ ರಿಸ್ಕ್ ತೆಗೆದುಕೊಳ್ಳುವ ಜನ ಅಲ್ಲ. ಹಾಗೆಯೇ ಅಪರಿಚಿತ ಹೊಸ ಸಂಗತಿಗಳಿಗೆ ನಿಮ್ಮಲ್ಲಿ ಹೆಚ್ಚು ಆಸ್ಪದವಿಲ್ಲ.
ನಿಮಗೆ ಮೊದಲು ದೋಣಿ ಕಾಣಿಸಿದರೆ;
ನೀವು ಪ್ರತಿಯೊಂದರಲ್ಲೂ ಚಿಕ್ಕ ಚಿಕ್ಕ ವಿವರಗಳನ್ನು ಗಮನಿಸುವಲ್ಲಿ ಹೆಚ್ಚು ಆಸಕ್ತರು. ಆದ್ದರಿಂದ ನಿಮಗೆ ಸಂಬಂಧಪಟ್ಟ ಯಾವ ಸಂಗತಿಯೂ ನಿಮ್ಮ ಕಣ್ಣಿಂದ ತಪ್ಪಿಸಿಕೊಳ್ಳಲಾರವು. ಅವಕಾಶಗಳನ್ನು ಬಳಸಿಕೊಳ್ಳುವ ಕಲೆಯೂ ನಿಮಗೆ ಚೆನ್ನಾಗಿ ಗೊತ್ತಿದೆ.
ನೀವು ಸೃಜನಶೀಲ ಪ್ರವೃತ್ತಿಯವರು. ಆದರೆ ಚಿಕ್ಕ ವಿವರಗಳಲ್ಲೇ ಕಳೆದುಹೋಗದಂತೆ ಎಚ್ಚರವಹಿಸಿ. ಇದರಿಂದ ದೊಡ್ಡ ಸಂಗತಿಗಳು ಕೈತಪ್ಪುವ ಅಪಾಯವಿರುತ್ತದೆ.
ಆಸಕ್ತಿದಾಯಕವಾಗಿದೆ.
ಊಹಿಸಲಸಾಧ್ಯವಾದುದು.
ಆಸಕ್ತಿದಾಯಕವಾಗಿದೆ