ದಶನಾಮಿ ಪದ್ಧತಿ| ಸನಾತನ ಸಾಹಿತ್ಯ ~ ಮೂಲಪಾಠಗಳು #45

ಸನ್ಯಾಸದಲ್ಲಿ ನಾಲ್ಕು ವಿಧಗಳು. ಕುಟಿಚಕ, ಬಹುಚಕ, ಹಂಸ ಮತ್ತು ಪರಮಹಂಸ. ಶಂಕರಾಚಾರ್ಯರು ದಶನಾಮಿ ಪದ್ಧತಿಯನ್ನು ಪರಿಚಯಿಸಿದರು.

Sanyasi1.ತೀರ್ಥ  2.ಆಶ್ರಮ  3.ವನ  4.ಅರಣ್ಯ  5. ಗಿರಿ 6.ಪರ್ವತ 7ಸಾಗರ 8.ಸರಸ್ವತಿ 9.ಭಾರತೀ ಮತ್ತು 10. ಪುರೀ – ಇವು ಸಂನ್ಯಾಸ ಪರಂಪರೆಯ ಹತ್ತು ಉಪಾಧಿಗಳು. 

ಈ ದಶನಾಮಗಳನ್ನು ಯಾರಿಗೆ ನೀಡಲಾಗುತ್ತದೆ ಅನ್ನುವ ಕಿರು ವಿವರ ಮುಂದಿದೆ :

ಭಾರತೀ ನಾಮ ವಿದ್ಯಾಭಾರೇಣ ಸಂಪೂರ್ಣಃ ಸರ್ವಭಾರಂ ಪರಿತ್ಯಜೇತ್ |
ದುಃಖ ಭಾರಂ ನ ಜಾನತಿ ಭಾರತೀ ಪರಿಕೀರ್ತಿತಃ ||

ಯಾವ ವ್ಯಕ್ತಿಯು ವಿದ್ಯೆಯ ಭಾರದಿಂದ ಪರಿಪೂರ್ಣನಾಗಿ, ಪ್ರಪಂಚದ ಸಮಸ್ತ ಭಾರಗಳನ್ನೂ ತ್ಯಜಿಸುತ್ತಾರೋ; ಮತ್ತು ದುಃಖದ ಭಾರವನ್ನು ತಿಳಿದಿರುವುದಿಲ್ಲವೋ ಅವರಿಗೆ ‘ಭಾರತೀ’ ಎಂಬ ಉಪಾಧಿ ನೀಡಲಾಗುತ್ತದೆ.

ಸರಸ್ವತೀ ನಾಮ ಸ್ವರಜ್ಞಾನ ವಶೋ ನಿತ್ಯಂ ಸ್ವರವಾದೀ ಕಿವೀಶ್ವರಃ |
ಸಂಸಾರ ಸಾಗರೇ ಸಾರಾಭಿಜ್ಞೋ ಯಃ ಸಃ ಸರಸ್ವತೀ ||

ಯಾರು ಸ್ವರದ ಜ್ಞಾನ ಹೊಂದಿದ್ದು, ಸಕಲ ವೇದಗಳ ಸ್ವರಗಳನ್ನು ಸಂಪೂರ್ಣವಾಗಿ ತಿಳಿದಿರುತ್ತಾರೋ; ಮತ್ತು ಸಂಸಾರದ ಸತ್ವ ಪರೀಕ್ಷೆಯನ್ನು ಮಾಡುತ್ತಾರೋ ಅವರ ಪದವಿಯನ್ನು ‘ಸರಸ್ವತೀ’ ಎಂದು ಕರೆಯುತ್ತಾರೆ.

ತೀರ್ಥ ನಾಮ ತ್ರಿವೇಣೀ ಸಂಗಮೇ ತೀರ್ಥೇ ತತ್ವಮಸ್ಯಾದಿ ಲಕ್ಷಣೇ|
ಸ್ನಾಯತ್ ತತ್ವಾರ್ಥ ಭಾವೇನ ತೀರ್ಥ ನಾಮಾ ಸ ಉಚ್ಯತೇ||

ತತ್ವಮಸಿ, ಪ್ರಜ್ಞಾನಂ ಬ್ರಹ್ಮ, ಶಿವೋಹಮ್ ಜ್ಞಾನಗಳ ತ್ರಿವೇಣೀ ಸಂಗಮ. ಆ ಸಂಗಮರೂಪವಾದ ತೀರ್ಥದಲ್ಲಿ ತತ್ತ್ವಾರ್ಥವನ್ನು ತಿಳಿಯಬೇಕೆಂಬ ಅಪೆಕ್ಷೇಯಿಂದ ಯಾವ ವ್ಯಕ್ತಿಯು ಸ್ನಾನ ಮಾಡುತ್ತಾರೋ ಅವರು ತೀರ್ಥ ಎಂಬ ಹೆಸರಿಂದ ಕರೆಯಲ್ಪಡುತ್ತಾರೆ.

ಆಶ್ರಮ ನಾಮ ಆಶ್ರಮ ಗ್ರಹಣೀ ಪ್ರೌಢಃ ಆಶಾಪಾಶ ವಿವರ್ಜಿತಃ |
ಯಾತಾಯಾತ ವಿನಿರ್ಮುಕ್ತ ಏತದಾಶ್ರಮ ಲಕ್ಷಣ ||

ಯಾವ ವ್ಯಕ್ತಿಯು ಹೃದಯದಿಂದ ಆಸೆ, ಮಮತೆ, ಮೋಹ… ಇತ್ಯಾದಿ ಬಂಧನಗಳು ಸಂಪೂರ್ಣವಾಗಿ ನಾಶವಾಗಿರುತ್ತವೋ, ಆಶ್ರಮದ ನಿಯಮಗಳನ್ನು ಧರಿಸಲು ದೃಢಮನಸ್ಕನಾಗಿರುತ್ತಾರೋ ಮತ್ತು ಸಂಪೂರ್ಣ ವಿರಕ್ತನಾಗಿರುತ್ತಾರೋ ಅವರಿಗೆ ‘ಆಶ್ರಮ’ ಎಂಬ ಉಪಾಧಿ.

ವನ ನಾಮ ದೀಕ್ಷೆ ಸುರಮ್ಯನಿರ್ಜನೇದೇಶೇ ವಾಸಂ ನಿತ್ಯಂ ಕರೋತಿ ಯಃ|
ಆಶಾಪಾಶ ವಿನಿರ್ಮುಕ್ತೋ ವನ ನಾಮ ಸ ಉಚ್ಯತೇ||

ಯಾವ ಮನುಷ್ಯನು ಸುಂದರವಾದ, ಶಾಂತವಾದ ಮತ್ತು ನಿರ್ಜನವಾದ ವನದಲ್ಲಿ ವಾಸ ಮಾಡುತ್ತಾ, ಪ್ರಪಂಚದ ಬಂಧನಗಳಿಂದ ಸಂಪೂರ್ಣವಾಗಿ ವಿಮುಕ್ತರಾಗಿರುತ್ತಾನೋ ಅವರ ಹೆಸರು ‘ವನ’ ಎಂದು.

ಅರಣ್ಯ ನಾಮ ಅರಣ್ಯೇ ಸಂಸ್ಥಿತೋ ನಿತ್ಯ ಆನಂದಂ ನಂದನೇವನೇ|
ತ್ವಕ್ತಾ ಸರ್ವಮಿದಂ ವಿಶ್ವಂ ಅರಣ್ಯಂ ಲಕ್ಷಣಂ ಕಿಲ ||

ಯಾರು ಪ್ರಪಂಚವನ್ನು ತ್ಯಜಿಸಿ ಅರಣ್ಯದಲ್ಲಿ ವಾಸಮಾಡುತ್ತಾ (ನಂದನವನದಲ್ಲಿ ವಾಸಮಾಡುತ್ತಾ) ಆನಂದವನ್ನು ಸರ್ವದಾ ಅನುಭವಿಸುತ್ತಲಿರುತ್ತಾರೋ ಅವರಿಗೆ ‘ಅರಣ್ಯ’ ಎಂದು ಹೆಸರು.

ಗಿರಿ ನಾಮ ವಾಸೋ ಗಿರಿವರೇ ನಿತ್ಯಂ ಗೀತಾಭ್ಯಾಸೇ ಹಿ ತತ್ಪರಃ |
ಗಂಭೀರಾಚಲ ಬುದ್ಧೆಶ್ಚ ಗಿರಿ ನಾಮ ಸ ಉಚ್ಯತೇ ||

ಯಾರು ಗೀತಾಭ್ಯಾಸದಲ್ಲಿ ತತ್ಪರರಾಗಿ, ಎತ್ತರವಾದ ಪರ್ವತಗಳ ಶಿಖರಗಳ ಮೇಲೆ ವಾಸಮಾಡುತ್ತಾ, ಗಂಭೀರವಾದ ಮತ್ತು ನಿಶ್ಚಿತವಾದ ಬುದ್ಧಿಯನ್ನು ಹೊಂದಿರುತ್ತಾರೋ ಅವರಿಗೆ ‘ಗಿರಿ’ ಎಂದು ಹೆಸರು.

ಪರ್ವತ ನಾಮ ವಸೇತ್ಪರ್ವತ ಮೂಲೇಷು ಪ್ರೌಢೋ ಯೋ ಧ್ಯಾನತತ್ಪರಃ |
ಸಾರಾಸಾರಂ ವಿಚಾನಾತಿ ಪರ್ವತಃ ಪರಿಕೀರ್ತೀತಃ ||

ಸಮಾಧಿಸ್ಥರಾಗಿ ಯಾರು ಪರ್ವತಗಳ ತಪ್ಪಲು ಪ್ರದೇಸಗಳಲ್ಲಿ ವಾಸಮಾಡುತ್ತಾ, ಸತ್ಯಾಸತ್ಯಗಳ ಜ್ಞಾನ ಹೊಂದಿರುತ್ತಾರೋ ಅವರಿಗೆ ‘ಪರ್ವತ’ ಎಂದು ಹೆಸರು.

ಸಾಗರ ನಾಮ ವಸೇತ್ಸಾಗರ ಗಂಭಿರೇ ಘನ ರತ್ನ ಪರಿಗ್ರಹಃ |
ಮರ್ಯಾದದಶ್ಚಾನ ಲಂಘ್ಯೇತ ಸ ಸಾಗರಃ ಪರಿಕೀರ್ತಿತಃ ||

ಸಮುದ್ರದ ಸಮೀಪದಲ್ಲಿ ವಾಸ ಮಾಡುತ್ತಾ ಯಾರು ಅಧ್ಯಾತ್ಮ ಶಾಸ್ತ್ರದ ಉಪದೇಶ ಗ್ರಹಣ ಮಾಡುತ್ತಾರೋ ಮತ್ತು ಆಶ್ರಮ ನಿಯಮಗಳನ್ನು ಸ್ವಲ್ಪವೂ ಉಲ್ಲಂಘಿಸುವುದಿಲ್ಲವೋ ಅವರು ಸಮುದ್ರಕ್ಕೆ ಸಮಾನರಾದುದರಿಂದ ‘ಸಾಗರ’ ಎಂದು ಕರೆಯಲ್ಪಡುತ್ತಾರೆ.

ಪುರೀ ನಾಮ ಜ್ಞಾನ ತತ್ತ್ವೇನ ಸಂಪೂರ್ಣಃ ಪೂರ್ಣ ತತ್ತ್ವೇ ಪದೇ ಸ್ಥಿತಃ |
ಪರಬ್ರಹ್ಮರತೋ ನಿತ್ಯಂ ಪುರೀ ನಾಮ ಸ ಉಚ್ಯತೇ ||

‘ಪುರೀ’ ಎಂದರೆ ತತ್ವಜ್ಞಾನದಿಂದ ಪೂರ್ಣನಾಗಿರುವುದು, ಪೂರ್ಣಪದಗಳಲ್ಲಿ ಸ್ಥಿತನಾಗಿರುವುದು, ಪರಬ್ರಹ್ಮ ಚಿಂತನೆಯಲ್ಲಿ ನಿರತನಾಗಿರುವುದು. ಈ ರೀತಿ ನಿರತರಾಗಿರುವ ಸನ್ಯಾಸಿಗಳು ‘ಪುರೀ’ ಎಂಬ ಪದವಿಗೆ ಅಧಿಕಾರಿಯಾಗುತ್ತಾರೆ.

Advertisements

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.