ಬಾದಾಮಿ ಬೆಲೆ : Tea time story

Mullaಊರಿಗೆ ಹೋಗಿದ್ದ ಗೆಳೆಯನ ಅಂಗಡಿ ನೋಡಿಕೊಳ್ಳುವ ಜವಾಬ್ದಾರಿ ಮುಲ್ಲಾ ನಸ್ರುದ್ದೀನನ ಹೆಗಲಿಗೇರಿತ್ತು. ಅದೊಂದು ಡ್ರೈ ಫ್ರೂಟ್ಸ್ ಅಂಗಡಿ.

ಅಲ್ಲಿಗೆ ಒಬ್ಬ ಅಪರಿಚಿತ ಬಂದ. ಬಾದಾಮಿಯನ್ನು ಕೈಲಿ ಹಿಡಿದು, “ಒಂದು ಕೇಜಿಗೆ ಬೆಲೆ ಎಷ್ಟು?” ಕೇಳಿದ.
ನಸ್ರುದ್ದೀನ್ ಛಾವಣಿ ನೋಡುತ್ತಾ “ಹತ್ತು ಚಿನ್ನದ ನಾಣ್ಯ” ಅಂದ.

ಬಂದವನ ಪಿತ್ಥ ನೆತ್ತಿಗೇರಿತು. ಬಾದಾಮಿಯನ್ನು ವಾಪಸ್ ಜಾಡಿಗೆ ಎಸೆದ. “ಏನಯ್ಯಾ ನೀನು! ಯಾವನಿಗೆ ಬೇಕು ನಿನ್ನ ಬಾದಾಮಿ?” ಅಂದವನೇ ಉಸಿರು ನುಂಗಿ “ಸ್ವಲ್ಪವಾದ್ರೂ ಮನುಷ್ಯತ್ವ ಇದೆಯಾ!?” ಅಂತ ಕಿರುಚಾಡಿದ.

ನಸ್ರುದ್ದೀನ್ ತಣ್ಣಗೆ, “ಇಲ್ಲ…. ಈ ಅಂಗಡಿಯಲ್ಲಿ ಮನುಷ್ಯತ್ವವನ್ನು ಮಾರೋದಿಲ್ಲ” ಅನ್ನುತ್ತಾ ಜಾಡಿ ಮುಚ್ಚಳ ಮುಚ್ಚಿದ.

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

Leave a Reply