ಸ್ವಸ್ಥ ಪರಿಸರಕ್ಕಾಗಿ ಬೆಳಗಿನ ಪ್ರಾರ್ಥನೆಗಳು

ಓಂ ದ್ಯೌಃ ಶಾಂತಿರಂತರಿಕ್ಷಂ ಶಾತಿಃ ಪೃಥಿವೀ ಶಾಂತಿ –
ರಾಪಃ ಶಾಂತಿರೋಷಧಯಃ ಶಾಂತಿಃ |
ವನಸ್ಪತಯಃ ಶಾಂತಿರ್ವಿಶ್ವೇ ದೇವಾಃ ಶಾಂತಿರ್ಬ್ರಹ್ಮ
ಶಾಂತಿಃ ಶಾಂತಿಃ ಶಾಂತಿಃ ಶಾಂತಿರೇವ ಶಾಂತಿಃ ||

ಸೂರ್ಯ – ಚಂದ್ರ – ತಾರಾವಳಿಗಳು ಶಾಂತಿಯಿಂದ ಕೂಡಿರಲಿ (ಅವುಗಳ ವಿಕೋಪಕ್ಕೆ ನಾವು ಒಳಗಾಗದೆ ಇರಲಿ), ಅಂತರಿಕ್ಷದಲ್ಲಿ ಶಾಂತಿ ಇರಲಿ (ವಾತಾವರಣವು ಶುದ್ಧವೂ ಆರೋಗ್ಯಕರವೂ ಆಗಿರಲಿ), ಭೂಮಿಯಲ್ಲಿ ಶಾಂತಿ ಇರಲಿ (ಭೂಕಂಪಾದಿಗಳು ಇಲ್ಲದಿರಲಿ), ನೀರಿನಲ್ಲಿ ಶಾಂತಿಯಿರಲಿ (ಅದು ಶುದ್ಧವಾಗಿರಲಿ, ಅತಿವೃಷ್ಟಿ – ಅನಾವೃಷ್ಟಿಗಳು ಇಲ್ಲದಿರಲಿ), ಗಿಡಮರಗಳು ಶಾಂತಿಯಿಂದಿರಲಿ (ಅವು ಸಮೃದ್ಧವಾಗಿ ಬೆಳೆಯಲಿ), ದೇವತೆಗಳು ಶಾಂತಿಯಿಂದಿರಲಿ (ಪ್ರಕೃತಿಯು ಅನುಕೂಲಕರವಾಗಿರಲಿ) ಬ್ರಹ್ಮನಲ್ಲೂ ಶಾಂತಿಯಿರಲಿ (ಭಗವಂತನ ಅನುಗ್ರಹ ನಮ್ಮ ಮೇಲಿರಲಿ), ಎಲ್ಲವೂ ಶಾಂತಿಯಿಂದಿರಲಿ.

ಮಧು ವಾತಾ ಋತಾಯತೇ ಮಧುಕ್ಷರನ್ತಿ ಸಿಂಧವಃ |
ಮಾರ್ಧ್ವೀರ್ನಃ ಸಂತ್ವೋಷಧೀಃ ಮಧು ನಕ್ತಮುತೋಷಸಿ||
ಮಧುಮತ್ ಪಾರ್ಥಿವಂ ರಜಃ ಮಧು ದ್ಯೌರಸ್ತು ನಃ ಪಿತಾ |
ಮಶುಮಾನ್ನೋ ವನಸ್ಪತಿಃ ಮಧುಮಾನಸ್ತು ಸೂರ್ಯಃ |
ಮಾಧ್ವೀರ್ಗಾವೋ ಭವನ್ತು ನಃ ||

ಗಾಳಿಯು ನಮಗೆ ಸುಖವಾಗಿ ಬೀಸಲಿ, ನದಿಗಳು ನಮಗೆ ಸುಖಕರವಾಗಿರಲಿ, ಗಿಡಮೂಲಿಕೆಗಳು ನಮಗೆ ಸುಖವನ್ನು ಉಂಟುಮಾಡಲಿ, ದಿನರಾತ್ರಿಗಳು ನಮಗೆ ಸುಖಪ್ರದವಾಗಿರಲಿ, ಪೃಥ್ವಿಯ ಧೂಳೂ ನಮಗೆ ಸುಖವನ್ನೀಯಲಿ, ಗ್ರಹನಕ್ಷತ್ರಗಳು ನಮಗೆ ಸುಖದಾಯಕವಾಗಿರಲಿ, ವೃಕ್ಷಗಳು ನಮಗೆ ಸುಖವನ್ನೇ ನೀಡುಂತಾಗಲಿ, ಸೂರ್ಯನು ನಮಗೆ ಸುಖವನ್ನೇ ವರ್ಷಿಸಲಿ, ಹಸು (ಮುಂತಾದ ಪ್ರಾಣಿಗಳು) ನಮಗೆ ಸುಖದಾಯಕವಾಗಿರಲಿ.
ನಮ್ಮ ಸುತ್ತಲಿನ ಪರಿಸರ, ಮಾಲಿನ್ಯರಹಿತವಾಗಿ ಜೀವಪೋಷಕವಾಗಿರಲಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.