ಸಂಪತ್ತು ಪಡೆಯಲು ಹಾವಿಗೆ ಮುತ್ತಿಡಲೇಬೇಕು ~ ರೂಮಿ ಪದ್ಯ

ಮಿಂಚುವ, ಪರಿಪಕ್ವವಾಗುವ ಆಸೆ
ಯಾವ ಗಂಡಿಗೆ ಅಥವಾ ಹೆಣ್ಣಿಗೆ
ಇರುವುದಿಲ್ಲ ಹೇಳಿ?
ಮತ್ತ್ಯಾಕೆ ಈ ತಗಾದೆ
ಕಠಿಣವಾಗಿ ನಡೆಸಿಕೊಂಡಿದ್ದರ ಬಗ್ಗೆ?

ಪ್ರೇಮ, ಕೋರ್ಟಿನಲ್ಲಿ ನಮೂದಾದ ದಾವೆ
ಎಲ್ಲದಕ್ಕೂ ಸಾಕ್ಷಿ ಬೇಕು
ವ್ಯಾಜ್ಯ ನಿರ್ಣಯ ಮಾಡಬೇಕಾದರೆ
ಜಡ್ಜ್ ಗೆ ಎಲ್ಲ ವಿವರ ಗೊತ್ತಾಗಲೇಬೇಕು.

ಗುಪ್ತ ನಿಧಿಯ ಸುತ್ತ
ಹಾವು ಓಡಾಡಿಕೊಂಡಿರುವ ಬಗ್ಗೆ
ನಿಮಗೂ ಗೊತ್ತಿರಬೇಕು.

ಸಂಪತ್ತು ಪಡೆಯಲು
ನೀವು ಹಾವಿಗೆ ಮುತ್ತಿಡಲೇಬೇಕು.

ಮೂಲ : ಜಲಾಲುದ್ದಿನ್ ರೂಮಿ | ಕನ್ನಡಕ್ಕೆ : ಚಿದಂಬರ ನರೇಂದ್ರ

Leave a Reply