ಪ್ರೇಮ ಬಲು ಸಮೃದ್ಧ : ಬಾವುಲ್ ಸಂಗೀತದ ತಿರುಳು

ಬಾವುಲ್ ಒಂದು ಆಧ್ಯಾತ್ಮಿಕ ಪಂಥ. ಬಂಗಾಳ ಮತ್ತು ಒರಿಸ್ಸಾ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಂಡುಬರುವಂತದ್ದು. ಈ ಪಂಥದ ಮುಖ್ಯ ಲಕ್ಷಣ ‘ಗಾಯನ’. ಪ್ರೇಮ ತುಂಬಿದ ಗೀತೆಗಳನ್ನು ಹಾಡುವುದೇ ಇವರ ಧರ್ಮಾಚರಣೆಯ ವಿಧಾನ. ಬಾವುಲ್ ಸಮುದಾಯದ ಗೀತೆಯೊಂದರ ತಿರುಳು ಇಲ್ಲಿದೆ…

maa

ಈ ಚಿತ್ರಿಕೆಯ ಕೊನೆಯ ಚರಣವನ್ನು ಗಮನಿಸಿ. ‘ಪ್ರೇಮವು ವಜ್ರದಂತೆ ಬಹಳಷ್ಟು ಮುಖಗಳನ್ನು ಹೊಂದಿದೆ’ ಎನ್ನಲಾಗಿದೆ. ಇದು ಪ್ರೇಮದ ಬಹುಮುಖಿ ಆಯಾಮವನ್ನು ಸೂಚಿಸುತ್ತದೆ. ತಾಯ್ತಂದೆಯರು ಮಕ್ಕಳೆಡೆಗೆ ಮತ್ತು ಮಕ್ಕಳು ತಾಯ್ತಂದರೆಯರೆಡೆಗೆ ಹೊಂದಿರುವ ಪ್ರೇಮ, ಬಂಧುಗಳ ಪರಸ್ಪರ ಪ್ರೇಮ, ಸ್ನೇಹಿತರ ಪ್ರೇಮ, ಗುರು – ಶಿಷ್ಯರ ಪ್ರೇಮ ಮತ್ತು ಗಂಡು  ಹೆಣ್ಣಿನ ನಡುವೆ ಆಕರ್ಷಣೆಯಿಂದ ುಂಟಾಗುವ ಪ್ರೇಮ – ಹೀಗೆ ಹಲವು ಬಗೆಯ ಪ್ರೇಮಗಳಿವೆ. ಮತ್ತು ಈ ಪ್ರತಿಯೊಂದು ಆಯಾಮದಲ್ಲಿ ಮತ್ತಷ್ಟು ಒಳ ಆಯಾಮಗಳೂ ಇವೆ.

ಯಾರೇ ಆದರೂ ಒಬ್ಬರನ್ನು ಪ್ರೀತಿಸಿದಂತೆ ಇನ್ನೊಬ್ಬರನ್ನು ಪ್ರೀತಿಸಲು ಬರುವುದಿಲ್ಲ. ಆದ್ದರಿಂದ ನಮ್ಮ ಪ್ರೀತಿಪಾತ್ರರು ಮತ್ತೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎಂದರೆ, ಅವರು ನಮ್ಮ ಮೇಲಿನ ಪ್ರೇಮವನ್ನು ಇತರರೊಡನೆ ಹಂಚಿಕೊಳ್ಳುತ್ತಿದ್ದಾರೆಂದು ಭಾವಿಸಬೇಕಿಲ್ಲ. ಪ್ರೇಮ ಸಮೃದ್ಧವಾದುದು. ಮೊಗೆದು ಕೊಟ್ಟಷ್ಟೂ ತುಂಬಿಕೊಳ್ಳುವಂಥದ್ದು. 

ಆದ್ದರಿಂದ, ಪ್ರೇಮಿಸಿ! ಪ್ರೇಮ, ಭಗವಂತನನ್ನು ಪಡೆಯುವ ಅತ್ಯಂತ ಸುಂದರ ಹಾದಿ. 

Leave a Reply