ರಿಚರ್ಡ್ ಮೊರಿಸ್ ಹೇಳಿದ್ದು… : ಅರಳಿಮರ Poster

moris

ಮೌಲ್ಯಗಳನ್ನು ಕೇವಲ ಬಾಯಿಪಾಠ ಮಾಡಿದರೆ ಸಾಲದು. ಅವುಗಳ ಪದಶಃ ಅರ್ಥ ತಿಳಿದುಕೊಂಡರೂ ಹೆಚ್ಚಿನ ಪ್ರಯೋಜನವೇನಿಲ್ಲ. ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರಷ್ಟೆ ಅವುಗಳಿಗೆ ನ್ಯಾಯ ಸಲ್ಲಿಸಿದಂತೆ. 

ಮತ್ತು, ಈ ಮೌಲ್ಯಗಳು ವಿಚಾರಪೂರ್ಣವಾಗಿರುವುದು ಅತ್ಯಗತ್ಯ. ತಲೆಬುಡವಿಲ್ಲದ, ಕೇವಲ ಸಾಂಪ್ರದಾಯಿಕ ಅಥವಾ ರೂಢಿಗತವಾದ ಮಾತ್ರಕ್ಕೆ ಮೌಲ್ಯಗಳು ಅರ್ಥಪಡೆಯುವುದಿಲ್ಲ. ಇಂಥಾ ಅರ್ಥಹೀನ ಮೌಲ್ಯಗಳನ್ನು ಅನುಸರಿಸುವುದು ಅಂಧಶ್ರದ್ಧೆಯಾಗುತ್ತದೆ. ನಮ್ಮ ಬುದ್ಧಿಗುರುಡುತನವಾಗುತ್ತದೆ. 

ಹಾಗೆಯೇ ಮೌಲ್ಯಗಳಲ್ಲಿ ಭಾವನೆ ಇರಬೇಕು. ಅವು ನಮ್ಮ ಅಂತಃಕರಣಕ್ಕೆ ತಾಕುವಂತಿರಬೇಕು. ಕೇವಲ ಕರ್ಮಠತನ ಮೌಲ್ಯಗಳಿಗೆ ಬಲ ತುಂಬಲಾರವು. ಅಲ್ಲಿ ಭಾವನೆಯೂ ಇದ್ದರಷ್ಟೆ ಅವು ಸಬಲ. ಇಲ್ಲವಾದರೆ, ದುರ್ಬಲ. 

ಎಲ್ಲಕ್ಕಿಂತ ಬಹುಮುಖ್ಯವಾಗಿ ಮೌಲ್ಯಗಳು ಕ್ರಿಯಾಶೀಲವಾಗಿರಬಾಗಿರಬೇಕು. ನಿಷ್ಕ್ರಿಯ ಮೌಲ್ಯಗಳು ಇದ್ದು ಕೂಡಾ ಪ್ರಯೋಜನವಿಲ್ಲ. ಅವನ್ನು ಅನ್ವಯಗೊಳಿಸಿಕೊಂಡು, ಪ್ರಾಯೋಗಿಕವಾಗಿ ಅನುಸರಿಸಿದರಷ್ಟೆ ಮೌಲ್ಯಕ್ಕೊಂದು ತೂಕ! 

Leave a Reply