ಸುಖ ಬಂದಾಗ ಹೆಚ್ಚು ಹಿಗ್ಗದೇ, ಮತ್ತು ದುಃಖ ಬಂದಾಗ ಕುಗ್ಗಿ ಕುಸಿಯದೇ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಸ್ಥಿತಪ್ರಜ್ಞನ ಲಕ್ಷಣ. ಈ ಸ್ಥಿತಪ್ರಜ್ಞತೆಯೇ ಯಶಸ್ವೀ ಬದುಕಿಗೆ ಮುನ್ನುಡಿ. ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಸ್ಥಿತಪ್ರಜ್ಞತೆಯ ಲಕ್ಷಣಗಳನ್ನು ವಿವರಿಸಿದ್ದು, ಅವು ಈ ದಿನಮಾನಕ್ಕೆ ಅತ್ಯಂತ ಪ್ರಸ್ತುತವಾಗಿದೆ.
ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ |
ಸ್ಥಿತಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್ || 2:54 ||
ಅರ್ಥ : ಕೇಶವ, ಸ್ಥಿತಪ್ರಜ್ಞನ ಲಕ್ಷಣಗಳೇನು ? ಅವನು ಹೇಗೆ ಮಾತನಾಡುತ್ತಾನೆ ? ಹೇಗೆ ಕುಳಿತುಕೊಳ್ಳುತ್ತಾನೆ ? ಹೇಗೆ ನಡೆಯುತ್ತಾನೆ ? ಎಂದು ಅರ್ಜುನನು ಶ್ರೀಕೃಷ್ಣನನ್ನು ಕೇಳುತ್ತಾನೆ.
ಇದಕ್ಕೆ ಉತ್ತರವಾಗಿ ಗೀತಾಚಾರ್ಯ ನೀಡಿರುವ ಉತ್ತರಗಳು 55ನೇ ಶ್ಲೋಕದಿಂದ 79ನೇ ಶ್ಲೋಕದವರೆಗೂ ಹರಡಿಕೊಂಡಿದ್ದು, ಅವುಗಳಲ್ಲಿ ಮುಖ್ಯವಾದ 7 ಲಕ್ಷಣಗಳು ಹೀಗಿವೆ:
ಸಂತುಷ್ಟರಾಗಿರುವುದು

ಹಿಗ್ಗದೆ – ಕುಗ್ಗದೆ ಸಮಚಿತ್ತರಾಗಿರುವುದು

ಅನಾಸಕ್ತಿ ಸಾಧಿಸುವುದು

ಇಂದ್ರಿಯ ನಿಯಂತ್ರಣ

ಬುದ್ಧಿಯಲ್ಲಿ ಸ್ಥಿರತೆ

ಕೋಪವನ್ನು ತ್ಯಜಿಸುವುದು

ನಿಶ್ಚಿತ ಬುದ್ಧಿ ಮತ್ತು ಶಾಂತ ಮನಸ್ಕತೆ


