ಶಿವಭಕ್ತೆ ಲಲ್ಲಾಳನ್ನು ಕಶ್ಮೀರದ ಹಿಂದೂಗಳು ಲಲ್ಲೇಶ್ವರಿ ಎಂದು ಆರಾಧಿಸಿದರೆ, ದೇವಧ್ಯಾನದಲ್ಲಿ ಸದಾ ಮತ್ತಳಾಗಿರುತ್ತದ್ದ ಅವಳನ್ನು ಮುಸ್ಲಿಮರು ಲಲ್ಲಾ ಅರೀಫಾ ಎಂದು ಆದರಿಸಿದರು. ಸೂಫಿ ಸಂತ ಬಬಾ ದಾವೂದ್ ಮಿಶ್ಕಾತಿ ಅವಳನ್ನು ಮಜನೂ – ಇ ಅಕೀಲಾ ಎಂದು ಕರೆದ ~ ಅಲಾವಿಕಾ

ಆಧ್ಯಾತ್ಮಿಕ ಜಗತ್ತಿನಲ್ಲಿ ಹೊಳೆದ ತಾರೆಗಳ ಲೆಕ್ಕ ಇಟ್ಟವರಿಲ್ಲ. ಹಾಗೆ ಲೆಕ್ಕವಿಟ್ಟು ಎಷ್ಟು ಹೆಸರಲ್ಲಿ ಕರೆದರೂ ಆ ಎಲ್ಲ ತಾರೆಗಳ ಬೆಳಕು ಒಂದೇ. ಅಪರಿಮಿತಿ ಜ್ಞಾನ, ಅಮೃತೋಪಮ ಪ್ರೇಮ.
ಇಂಥಾ ತಾರೆಗಳಲ್ಲಿ ಒಬ್ಬಳು ಕಶ್ಮೀರದ ಲಲ್ಲಾ. ಕಶ್ಮೀರದಲ್ಲಿ, 14ನೇ ಶತಮಾನದಲ್ಲಿ ಜೀವಿಸಿದ್ದ ಇವಳು ನಮ್ಮ ಅಕ್ಕ ಮಹಾದೇವಿಯನ್ನು ನೆನಪಿಸುವ ಜೀವ. ಸ್ವಾಭಿಮಾನ, ಅರಿವು, ಅನುಭಾವ, ಶಿವಪ್ರೇಮಗಳೆಲ್ಲವೂ ಅಕ್ಕಳ ನೆನಪನ್ನೇ ತರುತ್ತವೆ. ಇಬ್ಬರ ನಡುವೆ ಎಷ್ಟು ಸಾಮ್ಯವೆಂದರೆ, ಅಕ್ಕಳ ಹಾಗೆ ಲಲ್ಲಾ ಕೂಡಾ ನಿರ್ವಾಣದಲ್ಲಿ ಓಡಾಡುತ್ತಿದ್ದಳೆಂದು ಕೆಲವು ಪಠ್ಯಗಳು ಹೇಳುತ್ತವೆ. ಮಹಾದೇವಿ ವಚನಗಳನ್ನು ರಚಿಸಿದರೆ, ಲಲ್ಲೇಶ್ವರಿ ವಾಕ್ಕುಗಳನ್ನು ರಚಿಸಿದಳು. ನಾವು ಮಹಾದೇವಿಯನ್ನು ಅಕ್ಕ ಎಂದು ಕರೆದ ಹಾಗೆ, ಅಲ್ಲಿಯ ಜನ ಅವಳನ್ನು ಲಾಲ್ ದೀದಿ ಎಂದು ಕರೆದರು. ಅಷ್ಟು ಮಾತ್ರವಲ್ಲ, ಲಲ್ಲಾ ವೂಜ್ (ಅಮ್ಮ), ಲಾಲ್ ದ್’ಯದ್ ಅಥವಾ ಲಾಲ್ ಡೇಡ್ (ಅಜ್ಜಿ), ಲಲ್ಲಾ ದೇವಿ ಎಂದೂ ಅವಳು ಕರೆಯಲ್ಪಟ್ಟಳು.
ಶಿವಭಕ್ತೆ ಲಲ್ಲಾಳನ್ನು ಕಶ್ಮೀರದ ಹಿಂದೂಗಳು ಲಲ್ಲೇಶ್ವರಿ ಎಂದು ಆರಾಧಿಸಿದರೆ, ದೇವಧ್ಯಾನದಲ್ಲಿ ಸದಾ ಮತ್ತಳಾಗಿರುತ್ತದ್ದ ಅವಳನ್ನು ಮುಸ್ಲಿಮರು ಲಲ್ಲಾ ಅರೀಫಾ ಎಂದು ಆದರಿಸಿದರು. ಸೂಫಿ ಸಂತ ಬಬಾ ದಾವೂದ್ ಮಿಶ್ಕಾತಿ ಅವಳ ಸೂಫೀಯತೆಯನ್ನು ಗುರುತಿಸಿ ಮಜನೂ – ಇ ಅಕೀಲಾ ಎಂದು ಕರೆದನು. ಹಾಗೆಂದರೆ, ಭಗವಂತನ ಪ್ರೇಮದಲ್ಲಿ ಉನ್ಮತ್ತಳು ಎಂದು.
[…] ಮನಸ್ಸಿನ ಕನ್ನಡಿ ಶುದ್ಧವಾಗಿದ್ದರೆ ಅದರಲ್ಲಿನ ಪ್ರತಿಬಿಂಬವೂ ಸ್ಪಷ್ಟವಾಗಿ ಗೋಚರಿಸುತ್ತದೆ. ಜಗತ್ತು ಭಗವಂತನ ಕನ್ನಡಿಯಾದರೆ, ಅದರಲ್ಲಿ ಮೂಡುವ ಪ್ರತಿಬಿಂಬ ಸ್ವತಃ ಭಗವಂತನೇ. ನಾವು ಕೂಡಾ ಜಗತ್ತಿನ ಭಾಗವೇ ಆಗಿರುವುದರಿಂದ, ನಮ್ಮ ಮನಸ್ಸು ಕೂಡಾ ಭಗವಂತನ ಕನ್ನಡಿಯೇ. ಮತ್ತು ಅದರಲ್ಲಿ ಕಾಣುವ ಬಿಂಬ, ಸ್ವಯಂ ಭಗವಂತನದು! ನಮ್ಮ ನಮ್ಮ ಬಿಂಬ ನಮಗೆ ಸ್ಪಷ್ಟವಾಗಿ ಕಂಡರೆ, ಆ ಬಿಂಬ ಭಗವಂತನೇ ಆಗಿರುವುದು – ಇದು ಲಲ್ಲಾ ಮಾತಿನ ಅರ್ಥ. ಎಲ್ಲಿಯವರೆಗೆ ನಾನು, ನನ್ನದು ಎಂಬ ಭಾವ ಇರುವುದೋ, ಅಲ್ಲಿಯವರೆಗೆ ಕಷ್ಟ – ಸಂಕಟಗಳು ತಪ್ಪುವುದಿಲ್ಲ. “ಎಲ್ಲವೂ ಭಗವಂತನೇ, ನಾನು ಕೂಡಾ…” ಎನ್ನುವ ಅರಿವು ನಮ್ಮನ್ನು ನಿರುಮ್ಮಳವಾಗಿ ಇಡಬಲ್ಲದು. – ಇದು ಲಲ್ಲಾ ಮಾತಿನ ವಿಸ್ತೃತಾರ್ಥ. ಲಲ್ಲೇಶ್ವರಿ, ಲಾಲ್ ಡೇಡ್ ಎಂದೆಲ್ಲ ಕರೆಸಿಕೊಳ್ಳುವ ಲಲ್ಲಾ, ಒಬ್ಬ ಕಾಶ್ಮೀರಿ ಅನುಭಾವಿ. ಈಕೆಯ ಕುರಿತು ಹೆಚ್ಚಿನ ಓದಿಗೆ ಇಲ್ಲಿ ನೋಡಿ : https://aralimara.com/2019/03/08/lalla/ […]
[…] ಲಲ್ಲೇಶ್ವರಿ, ಲಾಲ್ ಡೇಡ್ ಎಂದೆಲ್ಲ ಕರೆಸಿಕೊಳ್ಳುವ ಲಲ್ಲಾ, ಒಬ್ಬ ಕಾಶ್ಮೀರಿ ಅನುಭಾವಿ. ಈಕೆಯ ಕುರಿತು ಹೆಚ್ಚಿನ ಓದಿಗೆ ಇಲ್ಲಿ ನೋಡಿ : https://aralimara.com/2018/07/12/lalla/ […]