ಪ್ರಾಣಿಯನ್ನು ಗುರುತಿಸಿ, ನಿಮ್ಮ ವ್ಯಕ್ತಿತ್ವವನ್ನು ಅರಿಯಿರಿ! : Personality test

ಈ ಚಿತ್ರದಲ್ಲಿ ನಮ್ಮ ವ್ಯಕ್ತಿತ್ವವನ್ನು ತಿಳಿಸುವ 11 ಪ್ರಾಣಿಗಳಿವೆ. ನಿಮ್ಮ ಕಣ್ಣಿಗೆ ಮೊದಲು ಕಾಣುವ ಪ್ರಾಣಿ ಯಾವ ವ್ಯಕ್ತಿತ್ವವನ್ನು ಹೇಳುತ್ತದೆ? ವಿವರಣೆ ನೋಡುತ್ತಾ ಹೋಗಿ.

ಮೊದಲಿಗೆ ಈ ಚಿತ್ರವನ್ನು ಗಮನವಿಟ್ಟು ನೋಡಿ. ಇಲ್ಲಿ ಒಟ್ಟು 11 ಪ್ರಾಣಿಗಳಿವೆ. ನೋಡಿದ ಕೂಡಲೇ ನಿಮ್ಮ ಕಣ್ಣಿಗೆ ಮೊದಲು ಕಂಡ ಪ್ರಾಣಿ ಯಾವುದು? ತಿಳಿಸಿ.

original

ನಮ್ಮ ಆಲೋಚನೆಯಂತೆ ನಮ್ಮ ದೃಷ್ಟಿ ಇರುತ್ತದೆ, ಉದಾಹರಣೆಗೆ ಗುಲಾಬಿಗಿಡವನ್ನು ಇಬ್ಬರು ಒಟ್ಟಿಗೆ ನೋಡುತ್ತಾರೆ, ಒಬ್ಬರಿಗೆ ಮೊದಲು ಹೂ ಕಂಡರೆ. ಮತ್ತೊಬ್ಬರಿಗೆ ಮುಳ್ಳು ಕಾಣಿಸುತ್ತದೆ. ಯಾರಿಗೆ ಮೊದಲು ಏನು ಕಂಡಿತು ಅನ್ನುವುದರ ಮೇಲೆ ಅವರ ವ್ಯಕ್ತಿತ್ವ ಎಂಥದೆಂದು ಹೇಳಬಹುದು. ಈ ಚಿತ್ರದಲ್ಲಿ ನಮ್ಮ ವ್ಯಕ್ತಿತ್ವವನ್ನು ತಿಳಿಸುವ 11 ಪ್ರಾಣಿಗಳಿವೆ. ನಿಮ್ಮ ಕಣ್ಣಿಗೆ ಮೊದಲು ಕಾಣುವ ಪ್ರಾಣಿ ಯಾವ ವ್ಯಕ್ತಿತ್ವವನ್ನು ಹೇಳುತ್ತದೆ? ವಿವರಣೆ ನೋಡುತ್ತಾ ಹೋಗಿ.

ಝೀಬ್ರಾ

zebra

ನಿಮಗೆ ಮೊದಲು ಝೀಬ್ರಾ ಕಂಡಿತಾದರೆ :

ಸದಾ ಚಟುವಟಿಕೆಯಿಂದಿರುವ, ನಿರರ್ಗಳವಾಗಿ ಮಾತಾಡಬಲ್ಲ, ಪ್ರತಿಕ್ರಿಯಿಸಬಲ್ಲ ವ್ಯಕ್ತಿ.

ನಿಮ್ಮೊಡನೆ ಇರುವವರನ್ನೂ ನೀವು ಹುರಿದುಂಬಿಸುತ್ತೀರಿ. ಜನ ನಿಮ್ಮೊಡನಿರಲು ಹಾತೊರೆಯುತ್ತಾರೆ.

ಸೋಲು – ವಿಷಾದವನ್ನೂ ಎಂಜಾಯ್ ಮಾಡುವ ನೀವು, ಅವನ್ನೂ ಸೃಜನಶೀಲವಾಗಿ ಎದುರಿಸುತ್ತೀರಿ.

ಸದಾ ಚಟುವಟಿಕೆಯಿಂದಿರುವ ಕಾರಣ, ನಿಮಗೆ ದೀರ್ಘ ಕಾಲ ಒಂದೇ ಕೆಲಸದಲ್ಲಿ ತೊಡಗಿರಲು ಸಾಧ್ಯವಿಲ್ಲ. ಬಹಳ ಬೇಗ ಬೋರ್ ಆಗಿಬಿಡುತ್ತೀರಿ. ಆದ್ದರಿಂದ ಹೊಸ ಹೊಸ ಕೆಲಸ – ಚಟುವಟಿಕೆಗಳನ್ನು ಮಾಡುತ್ತಿರಿ.

ಬೆಕ್ಕು

The-cat

ನಿಮಗೆ ಮೊದಲು ಬೆಕ್ಕು ಕಂಡಿತಾದರೆ :

ನೀವು ಬೆಕ್ಕಿನ ಹಾಗೇ ಮುಗುಮ್ಮಾಗಿ ಕೆಲಸ ಮಾಡಿ ಮುಗಿಸುವಂಥವರು!

ಸುಖಾಸುಮ್ಮನೆ ಮತ್ತೊಬ್ಬರ ಕಣ್ಣಿಗೆ ಬೀಳುವುದು ನಿಮಗಿಷ್ಟವಿಲ್ಲ. ಆದರೆ, ಯಾರಾದರೂ ನಿಮ್ಮನ್ನು ಗಮನಿಸಬೇಕೆಂದು ನಿಮಗೆ ಅನಿಸಿದರೆ, ನೀವು ಸುಮ್ಮನೆ ಕೂರುವವರಲ್ಲ.

ನಿಮಗೆ ವಿರೀತ ಮಾತಾಡುವುದು, ಎಲ್ಲರೊಡನೆಯೂ ಮಾತಾಡುವುದು ಇಷ್ಟವಾಗುವುದಿಲ್ಲ. ನಿಮ್ಮ ಈ ಗುಣವನ್ನು ನಾಚಿಕೆ ಅಂದುಕೊಳ್ಳುವವರೇ ಹೆಚ್ಚು.

ಸಾಧ್ಯವಾದಷ್ಟೂ ಜನರನ್ನು, ಘಟನೆಗಳನ್ನು ದೂರದಿಂದಲೇ ಗಮನಿಸುತ್ತೀರಿ. ಯಾವುದರಲ್ಲೂ ಅತಿಯಾಗಿ ತೊಡಗಿಕೊಳ್ಳುವ ಸ್ವಭಾವ ನಿಮ್ಮದಲ್ಲ

ಬಾತುಕೋಳಿ

The-duck

ನಿಮಗೆ ಮೊದಲು ಬಾತುಕೋಳಿ ಕಂಡಿತಾದರೆ :

ಮಹಾನ್ ಆಶಾವಾದಿ. ನಿರಾಶೆ ಅನ್ನುವ ಪದದ ಅರ್ಥವೇ ನಿಮಗೆ ಗೊತ್ತಿಲ್ಲ.

ನೀವು ಕತ್ತಲು ಬಿದ್ದರೆ ಬೇಸರಪಡುವ ಬದಲು, ಕಣ್ಮುಚ್ಚಿ ನಿದ್ದೆ ಮಾಡುವ ಅವಕಾಶವಾದಿಯೂ ಹೌದು.

ನಿಮ್ಮ ಪಾಲಿಗೆ ಅವಕಾಶದ ಬಟ್ಟಲು ಸದಾ ತುಂಬಿಹರಿಯುತ್ತಿರುವಂತೆ ಕಾಣುತ್ತದೆ. ಏಲ್ಲಾದರೂ ಏನಾದರೊಂದನ್ನು ನೀವು ಹುಡುಕಿಕೊಂಡೇ ಬಿಡುತ್ತೀರಿ!
ಸದಾ ವರ್ತಮಾನದಲ್ಲೆ ಬದುಕುವ ನೀವು, ಅನೂಹ್ಯವಾದುದನ್ನು ಖುಷಿಯಿಂದ ಎದುರುಗೊಳ್ಳುವ ಸಾಹಸಿಯೂ ಹೌದು.

ಕೋಲಾ

The-koala

ನಿಮಗೆ ಮೊದಲು ಕೋಲಾ ಕಂಡಿತಾದರೆ :

ಅತ್ಯಂತ ಸಮಾಧಾನಿ ವ್ಯಕ್ತಿ. ನಿಮ್ಮಲ್ಲಿ ಗೋಜಲುಗಳಿಗೆ ಅವಕಾಶವೇ ಕಡಿಮೆ.

ಪ್ರತಿಯೊಂದನ್ನೂ ಅಳೆದು ತೂಗಿ ನಿರ್ಧರಿಸುತ್ತೀರಿ. ಹಾಗೆಂದು ಈ ಸ್ವಭಾವ ನಿಮ್ಮನ್ನು ಸ್ವಾರ್ಥಿಯಾಗಿಸುವುದಿಲ್ಲ.

ನಿಮ್ಮ ಜೊತೆಗಿನ ಜನರ ಬಗ್ಗೆ ಅತೀವ ಕಾಳಜಿ ತೋರುತ್ತೀರಿ. ಯಾವ ಸಂದರ್ಭದಲ್ಲೂ ಅವರ ಕೈ ಬಿಡುವುದಿಲ್ಲ.

ಹೊರಗೆ ಸುತ್ತಾಡುವುದನ್ನು ಅಷ್ಟಾಗಿ ಇಷ್ಟಪಡದ ನೀವು, ಮನೆಯನ್ನೇ ಛತ್ರ ಮಾಡಿ ಗೆಳೆಯರನ್ನು ಗುಡ್ಡೆ ಹಾಕಿಕೊಳ್ಳುತ್ತೀರಿ!

ಆನೆ

The-elephant

ನಿಮಗೆ ಮೊದಲು ಆನೆ ಕಂಡಿತಾದರೆ :

ಅತ್ಯಂತ ಜವಾಬ್ದಾರಿ ವ್ಯಕ್ತಿ. ನಿಮ್ಮ ಕರ್ತವ್ಯವನ್ನು ಅಚ್ಚಕಟ್ಟಾಗಿ ನಿಭಾಯಿಸುತ್ತೀರಿ.

ನಿಮ್ಮ ಸುತ್ತಲಿನ ಜನರ ಬಗ್ಗೆ ಅತೀವ ಕಾಳಜಿ ತೋರುತ್ತೀರಿ. ನಿಮ್ಮ ಬಗ್ಗೆ ಯೋಚಿಸುವುದಕ್ಕಿಂತ ಅವರ ಯೋಚನೆಯೇ ನಿಮಗೆ ಹೆಚ್ಚು.

ಪ್ರಾಮಾಣಿಕತೆ, ಕರುಣೆ ಮತ್ತು ಘನತೆಯ ಪ್ರತಿರೂಪವೆಂಬ ಮೆಚ್ಚುಗೆಗೆ ಪಾತ್ರರಾಗಿರುತ್ತೀರಿ.

ಎಲ್ಲೂ ಪರಿಹಾರ ಸಿಗದ ಜನರು ನಿಮ್ಮಲ್ಲಿ ಸಮಸ್ಯೆ ತರುತ್ತಾರೆ. ನಿಮ್ಮಲ್ಲಿ ಅದಕ್ಕೆ ಏನಾದರೊಂದು ಪರಿಹಾರ ಸಿಕ್ಕೇ ಸಿಗುತ್ತದೆ.

ಕರಡಿ

The-bear

ನಿಮಗೆ ಮೊದಲು ಕರಡಿ ಕಂಡಿತಾದರೆ :

ಸಂಪ್ರದಾಯಗಳಿಗೆ ಹೆಚ್ಚು ಮನ್ನಣೆ ಕೊಡುವವರು.

ಬುದ್ಧಿವಂತರಾದ ನೀವು, ನಿಮ್ಮ ವಯಸಿಗಿಂತ ಹೆಚ್ಚು ತಿಳಿದುಕೊಂಡಿರುತ್ತೀರಿ.

ನಿಮ್ಮಲ್ಲಿ ನೈತಿಕ ಪ್ರಜ್ಞೆ ಅತ್ಯುನ್ನತ ಮಟ್ಟದಲ್ಲಿರುತ್ತದೆ. ಆದರೆ ನೀವು ಅದನ್ನು ಯಾರ ಮೇಲೂ ಹೇರಲು ಹೋಗುವುದಿಲ್ಲ.

ನಿಮ್ಮಲ್ಲಿ ಲವಲವಿಕೆಯ ಕೊರತೆ ಕಂಡರೂ ಪರಿಶ್ರಮ ಮತ್ತು ಬದ್ಧತೆಯಿಂದಾಗಿ ಎಲ್ಲರಿಗೂ ಇಷ್ಟವಾಗುತ್ತೀರಿ.

ಜಿರಾಫೆ

The-giraffe

ನಿಮಗೆ ಮೊದಲು ಜಿರಾಫೆ ಕಂಡಿತಾದರೆ :

ನೀವು ಸಹಜವಾಗಿ ಸಾಮಾಜಿಕ ಜೀವಿ. ಜನರೊಡನೆ ಬೆರೆಯುವುದೆಂದರೆ ನಿಮಗೆ ಎಲ್ಲಿಲ್ಲದ ಖುಷಿ.

ಎಲ್ಲರೊಡನೆಯೂ ಕಲೆತು ಮಾತಾಡುವುದು ನಿಮಗೆ ಬಹಳ ಇಷ್ಟ. ನಿಮ್ಮಲ್ಲಿ ಉತ್ತಮ ವಾಕ್ಚಾತುರ್ಯವೂ ಇದೆ.

ಹೊರಜಗತ್ತಿಗೆ ನೀವು ಸದಾ ಆನಂದದಿಂದ ಇರುವಂತೆ ಕಂಡರೂ ಅಂತರಂಗದಲ್ಲಿ ನೀವು ಬಹಳ ಸೂಕ್ಷ್ಮ. ಚಿಕ್ಕ ಸಂಗತಿಗೂ ನೊಂದುಕೊಳ್ಳುತ್ತೀರಿ.

ನಿಮಗೆ ಏಕತಾನತೆಯ ಬದುಕು ಚೂರೂ ಇಷ್ಟವಾಗುವುದಿಲ್ಲ. ಸದಾ ಬದಲಾವಣೆಗೆ ತುಡಿಯುವ ವ್ಯಕ್ತಿತ್ವ ನಿಮ್ಮದು.

ಹಂದಿ

The-pig

ನಿಮಗೆ ಮೊದಲು ಹಂದಿ ಕಂಡಿತಾದರೆ :

ನೀವು ಯಾರ ಸಹಾಯವನ್ನೂ ಬಯಸದ ಸ್ವತಂತ್ರ ಜೀವಿ.

ಗುಂಪಿನೊಡನೆ ಬೆರೆಯಲು ನಿಮಗಿಷ್ಟವಿಲ್ಲ. ಒಬ್ಬರೇ ಇರುವುದೇ ನಿಮಗೆ ಹೆಚ್ಚು ಖುಷಿ.

ನಿಮ್ಮ ಜ್ಞಾಪಕ ಶಕ್ತಿ ಅದ್ಭುತವಾಗಿದೆ. ಯಾಔ ಕೆಲಸ ಮಾಡಿದರೂ ಕುಸುರಿ ಮಾಡಿದಂತೆ ಚಿಕ್ಕ ಚಿಕ್ಕ ವಿವರವನ್ನೂ ಪರಿಪೂರ್ಣವಾಗಿ ಮಾಡುತ್ತೀರಿ.

ನಿಮ್ಮ ಅಂತರ್ಮುಖಿ ಸ್ವಭಾವದ ಕಾರಣ ಯಾರೂ ನಿಮ್ಮೊಡನೆ ಬೆರೆಯಲು ಹೆಚ್ಚು ಇಷ್ಟಪಡುವುದಿಲ್ಲ.

ಮೊಲ

The-rabbit

ನಿಮಗೆ ಮೊದಲು ಮೊಲ ಕಂಡಿತಾದರೆ :

ಉತ್ಸಾಹಕ್ಕೆ ಮತ್ತೊಂದು ಹೆಸರೇ ನೀವು. ಸೃಜನಶೀಲತೆ ನಿಮಗೆ ಸಹಜವಾಗಿ ಒಲಿದ ವರ.

ಇತರರನ್ನು ನಗಿಸುವುದೆಂದರೆ ನಿಮಗೆ ಪ್ರೀತಿ. ನಿಮ್ಮೆದುರು ಯಾರೂ ಮುಖ ಬಾಡಿಸಿಕೊಂಡು ಕೂರಲು ಬಿಡುವುದಿಲ್ಲ.

ಪ್ರತಿಯೊಂದನ್ನೂ ಸಹಾನುಭೂತಿಯಿಂದ ನೋಡುವ ನೀವು ಅತ್ಯಂತ ಭಾವುಕರು.

ಆದರೆ, ಸದಾ ಜಿಗಿದಾಡುತ್ತಲೇ ಇರುವ ನಿಮಗೆ ವಿಶ್ರಾಂತಿಯ ಅಗತ್ಯವಿದೆ ಅನ್ನುವುದನ್ನೇ ಮರೆತುಬಿಡುತ್ತೀರಿ. ಅದರ ಕಡೆಗೂ ಗಮನವಿರಲಿ.

ಸಿಂಹ

The-lion

ನಿಮಗೆ ಮೊದಲು ಸಿಂಹ ಕಂಡಿತಾದರೆ :

ನಿಮ್ಮಲ್ಲಿ ಸಹಜ ನಾಯಕತ್ವದ ಗುಣವಿದೆ. ನಿಮ್ಮ ಸುತ್ತಲಿನವರು ನಿಮ್ಮ ಮಾತು ಕೇಳುತ್ತಾರೆ.

ಇತರರನ್ನು ನೀವು ಸುಲಭವಾಗಿ ಕನ್ವಿನ್ಸ್ ಮಾಡಬಲ್ಲಿರಿ.

ಕೆಲವು ಬಾರಿ ಇತರರ ಮೇಲೆ ನಿಮ್ಮ ಅಭಿಪ್ರಾಯ ಹೇರುವುದೂ ಇದೆ. ಆದರೆ ಜನ ಇದನ್ನೂ ಸಮಾಧಾನದಿಂದಲೇ ಸ್ವೀಕರಿಸುತ್ತಾರೆ.

ನಿಮ್ಮ ಕೈಲಿ ಸಾಧ್ಯವಾಗುವುದಿಲ್ಲ ಅನ್ನುವಂಥ ಸವಾಲೇ ಯಾವುದೂ ಇಲ್ಲ! ಅಂಥಾ ಆತ್ಮವಿಶ್ವಾಸ ನಿಮ್ಮದು. ನೀವು ಏನನ್ನು ಬೇಕಾದರೂ ಸಾಧಿಸಬಲ್ಲಿರೆಂದು ಸಾಬೀತುಪಡಿಸುವ ಯಾವ ಅವಕಾಶವನ್ನೂ ಬಿಟ್ಟುಕೊಡುವುದಿಲ್ಲ.

ಗೂಬೆ

The-owl

ನಿಮಗೆ ಮೊದಲು ಗೂಬೆ ಕಂಡಿತಾದರೆ :

ನಿಮ್ಮದು ವಿಶ್ಲೇಷಣಾತ್ಮಕ ಸ್ವಭಾವ. ಯಾವುದೇ ವಿಷಯದ ಆಳಕ್ಕಿಳಿದು ಆಲೋಚಿಸುವುದು ನಿಮ್ಮ ವೈಶಿಷ್ಟ್ಯ.

 ಸಾಮಾಜಿಕವಾಗಿ ಹೆಚ್ಚು ಜನರೊಡನೆ ಬೆರೆಯಲು ನೀವು ಇಷ್ಟಪಡುವುದಿಲ್ಲ.

ಎಂಥಾ ಕೆಲಸವನ್ನಾದರೂ ಒಬ್ಬರೇ ಮಾಡಿ ಮುಗಿಸುವ ಆತ್ಮವಿಶ್ವಾಸ ಮತ್ತು ಸಾಮರ್ಥ್ಯ ನಿಮ್ಮಲ್ಲಿದೆ.

ನಿಮ್ಮ ಚಾಣಾಕ್ಷತೆ ಮತ್ತು ಬುದ್ಧಿವಂತಿಕೆಯಿಂದಾಗಿ ಜನ ನಿಮ್ಮೊಡನಾಡಲು ಇಷ್ಟಪಡುತ್ತಾರೆ.

 

 

 

 

 

 

 

 

 

 

 

 

 

 

Leave a Reply