ನಿಮ್ಮ ಆಧ್ಯಾತ್ಮಿಕ ಅರಿವು ಯಾವ ಮಟ್ಟದಲ್ಲಿದೆ? : 10 ಪ್ರಶ್ನೆಗಳಿಗೆ ಉತ್ತರಿಸಿ, ನಿಮ್ಮ SQ ಕಂಡುಕೊಳ್ಳಿ!

ನಿಮ್ಮ ಆಧ್ಯಾತ್ಮಿಕ ಅರಿವು ಅಥವಾ ಸ್ಪಿರಿಚುವಲ್ ಕೋಶೆಂಟ್ ಯಾವ ಹಂತದಲ್ಲಿದೆ ಕಂಡುಕೊಳ್ಳಬೇಕೇ? ಹಾಗಾದರೆ ಈ ಹತ್ತು ಪ್ರಶ್ನೆಗಳಿಗೆ ಉತ್ತರಿಸಿ. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಗುರುತು ಮಾಡಿಕೊಂಡ ನಂತರ ಫಲಿತಾಂಶದೊಡನೆ ತಾಳೆ ಹಾಕಿ. ನಿಮ್ಮ SQ ಉತ್ತಮ, ಮಧ್ಯಮ ಸಾಧಾರಣ ಅತವಾ ನಿರಾಶಾದಾಯಕ – ಇವುಗಳಲ್ಲಿ ಯಾವಹಂತದಲ್ಲಿದೆ ಎಂದು ತಿಳಿದುಕೊಳ್ಳಿ.

1. ಎಲ್ಲ ಘಟನೆಗಳೂ
a. ಉದ್ದೇಶಪೂರ್ವಕವಾಗಿ ಘಟಿಸುತ್ತದೆ
b. ಕೇವಲ ಆಕಸ್ಮಿಕ

2. ಇವುಗಳಲ್ಲಿ ನಿಮ್ಮ ಸ್ವಭಾವ ಯಾವುದು?
a. ಶಾಂತ ಸ್ವಭಾವ
b. ಶಕ್ತಿಶಾಲಿ, ಅಷ್ಟೇ ಭಾವುಕ
c. ನಾಚಿಕೆ ಸ್ವಭಾವ
d. ಸಿನಿಕತನ ಮತ್ತು ಬುದ್ಧಿವಂತಿಕೆ

3. ನಿಮಗೆ ದೇವರಲ್ಲಿ ನಂಬಿಕೆ ಇದೆಯೇ?
a. ಇದೆ
b. ಇಲ್ಲ
c. ಪರಮಶಕ್ತಿಯೊಂದಿದೆ ಅನ್ನುವ ನಂಬಿಕೆಯಂತೂ ಇದೆ.

4. ಮತ್ತೊಂದು ಜನ್ಮವಿದ್ದರೆ ನೀವು ಏನಾಗಿ ಹುಟ್ಟಲುಬಯಸುವಿರಿ?
a. ಯಾವುದಾದರೋ ಹಕ್ಕಿ ಅಥವಾ ಪ್ರಾಣಿಯಾಗಿ.
b. ದೊಡ್ಡ ಶ್ರೀಮಂತರ ಮನೆಯ ಏಕೈಕ ವಾರಸುದಾರರಾಗಿ
c. ಪರೋಪಕಾರ ಬುದ್ಧಿಯವರಾಗಿ
d. ಪುನರ್ಜನ್ಮದಲ್ಲಿ ನಂಬಿಕೆ ಇಲ್ಲ
e. ನಂಬಿಕೆ ಇದೆ, ಆದರೆ ಗೊತ್ತಿಲ್ಲ

5. ನಿಮ್ಮ ಜನ್ಮಕ್ಕೊಂದು ಉದ್ದೇಶವಿದೆ ಎಂದು ನಿಮಗೆ ಎಂದಾದರೂ ಅನ್ನಿಸಿದೆಯೇ?
a. ಹೌದು.
b. ಇಲ್ಲ.
c. ಈ ಪ್ರಶ್ನೆ ಅರ್ಥವಾಗುತ್ತಿಲ್ಲ.

6. ಈ ಕೆಳಗಿನವುಗಳಲ್ಲಿ ಯಾವುದು ಮುಖ್ಯವೆಂದು ಭಾವಿಸುತ್ತೀರಿ?
a. ಪ್ರಾಮಾಣಿಕತೆ
b. ಕ್ಷಮೆ
c. ದಯೆ
d. ಧೈರ್ಯ
e. ಧಾರ್ಮಿಕತೆ

7. ನಿಮ್ಮ ಪ್ರಕಾರ ಕರ್ಮ ಎಂದರೇನು?
a. ನಾವು ಮಾಡುವ ಪ್ರತಿಯೊಂದೂ ಕಾರ್ಯಕಾರಣ ಸಂಬಂಧ ಹೊಂದಿದೆ
b. ನನಗೆ ಕರ್ಮಸಿದ್ಧಾಂತದಲ್ಲಿ ನಂಬಿಕೆ ಇಲ್ಲ

8. ನಿಮಗೆ ವಿಧಿಯಲ್ಲಿ ನಂಬಿಕೆ ಇದೆಯೇ?
a. ಖಂಡಿತವಾಗಿಯೂ
b. ಇಲ್ಲ. ಪ್ರತಿಯೊಬ್ಬರೂ ತಮ್ಮ ಬದುಕಿಗೆ ತಾವೇ ಜವಾಬ್ದಾರರು.

9. ನಿಮ್ಮ ಪ್ರಕಾರ ಸಾವಿನ ನಂತರ ಏನಾಗುತ್ತದೆ?
a. ಇದನ್ನು ಬಲ್ಲವರು ಯಾರೂ ಇಲ್ಲ
b. ನಾವು ಮತ್ತೆ ಹುಟ್ಟಿ ಬರುತ್ತೇವೆ. ಇದೊಂದು ನಿರಂತರ ಚಕ್ರ
c. ನಾನು ಸ್ವರ್ಗಕ್ಕೆ ಹೋಗಬಹುದು!
d. ಸಾವಿನ ನಂತರ ಏನೂ ಇರುವುದಿಲ್ಲ.

10. ಈ ಹೊತ್ತು ನೀವು ಎಲ್ಲಿರಲು ಬಯಸುತ್ತೀರಿ?
a. ಸಿನೆಮಾ ನೋಡಲು
b. ತಣ್ಣಗಿನ ಪ್ರದೇಶದಲ್ಲಿ ವಿರಮಿಸಲು
c. ಗೆಳೆಯರೊಡನೆ ಇರಲು
d. ಮನೆಯಲ್ಲಿ ಸುಮ್ಮನೆ ಆರಾಮಾಗಿ ಕೂರಲು

ಈ ಕೆಳಗಿನ ಉತ್ತರಗಳೊಡನೆ ತಾಳೆ ಹಾಕಿ, ನೀವು ಎಷ್ಟು ಅಂಕ ಪಡೆದಿರುವಿರೋ ನೋಡಿ:
1.a | 2.a | 3.c | 4.e | 5.a | 6.d | 7.a | 8.b | 9.a | 10.d

ನಿಮ್ಮ SQ ಮಾಪನ ಮಾಡಿಕೊಳ್ಳಿ 
10 ಅಂಕಗಳನ್ನು ಪಡೆದಿದ್ದರೆ : ಅತ್ಯುತ್ತಮ
9 ರಿಂದ 7 ಅಂಕಗಳನ್ನು ಪಡೆದಿದ್ದರೆ : ಉತ್ತಮ
6ರಿಂದ 3 ಅಂಕಗಳನ್ನು ಪಡೆದಿದ್ದರೆ : ಮಧ್ಯಮ
3ರಿಂದ 1 ಅಂಕಗಳನ್ನು ಪಡೆದಿದ್ದರೆ : ಸಾಧಾರಣ
0 ಆದರೆ : ನಿರಾಶಾದಾಯಕ

Leave a Reply