ದೇವರು ಸತ್ತ ಸುದ್ದಿ ಕೇಳಿಲ್ಲವೆ? : ನೀಷೆ ಹೇಳಿದ ಝರಾತುಷ್ಟ್ರನ ಕಥೆ

ಫ್ರೆಡ್ರಿಕ್ ನೀಷೆ ಬರೆದಿರುವ ‘ದಸ್ ಸ್ಪೇಕ್ ಝರಾತುಷ್ಟ್ರ’ ಕೃತಿಯಲ್ಲಿ ಒಂದು ಸನ್ನಿವೇಶ ಹೀಗಿದೆ:

ಝರಾತುಷ್ಟ್ರ ಬೆಟ್ಟದಿಂದ ಇಳಿದುಬರುತ್ತಾನೆ, ಮತ್ತು ದೇವರನ್ನು ಪ್ರಾರ್ಥಿಸುತ್ತಿದ್ದ ಆಶ್ರಮವಾಸಿಗಳ ಮುಂದೆ ನಿಲ್ಲುತ್ತಾನೆ.

ಅವರನ್ನು ನೋಡಿ ನಗುತ್ತಾ ಝರಾತುಷ್ಟ್ರ ಹೇಳುತ್ತಾನೆ, “ಯಾರಲ್ಲಿ ನೀವು ಪ್ರಾರ್ಥಿಸುತ್ತಿದ್ದೀರಿ!? ನಿಮಗಿನ್ನೂ ಸುದ್ದಿ ಬಂದಿಲ್ಲವೇನು? ನಿಮ್ಮನ್ನು ನೋಡಿ ನನಗೆ ಅಚ್ಚರಿಯಾಗುತ್ತಿದೆ. ದೇವರು ಸತ್ತುಹೋದ ಸುದ್ದಿ ನಿಮಗಿನ್ನೂ ತಲುಪಿಲ್ಲವೆ?”

ಈಗ ಅಚ್ಚರಿಗೊಳ್ಳುವ ಸರದಿ ಆಶ್ರಮವಾಸಿಗಳದ್ದು. ಈ ಮನುಷ್ಯ ಇದೇನು ಅಸಂಬದ್ಧ ಮಾತಾಡುತ್ತಿದ್ದಾನೆಂದು ತಮ್ಮತಮ್ಮಲ್ಲೆ ಚರ್ಚೆಗೆ ಇಳಿಯುತ್ತಾರೆ.

ಝರಾತುಷ್ಟ್ರ ಅವರ ಗಲಿಬಿಲಿ ನೋಡಿ ಹೇಳುತ್ತಾನೆ, “ಓಹ್! ಬಹುಶಃ ನಾನು ಸುದ್ದಿಗಿಂತ ಮುಂಚಿತವಾಗಿ ಬಂದಿರಬೇಕು…! ಅಚ್ಚರಿಯಲ್ಲಿ ಅಚ್ಚರಿ ಅಂದರೆ, ದೇವರನ್ನು ಕೊಂದಿದ್ದು ನೀವುಗಳೇ… ಆದರೂ ಸುದ್ದಿ ಇನ್ನೂ ನಿಮ್ಮನ್ನು ತಲುಪಿಲ್ಲ!! ಮನುಷ್ಯ ದೇವರನ್ನು ಕೊಂದಿದ್ದಾನೆ, ಸುದ್ದಿ ಇನ್ನೂ ಬಂದಿಲ್ಲ. ಸ್ವಲ್ಪ ಸಮಯ ಹಿಡಿಯುತ್ತದೆ….”

(ಸಂಗ್ರಹ ಮತ್ತು ಅನುವಾದ: ಅಲಾವಿಕಾ)

Leave a Reply