ಇದು, ಇದು ಬೇಕಾಗಿತ್ತು ನನಗೆ! : ಝೆನ್ ಕಥೆ

ಒಂದು ಮುಂಜಾನೆ ಝೆನ್ ಮಾಸ್ಟರ್ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಹೊಲದ ನಡುವಿನ ಕಾಲುದಾರಿಯಲ್ಲಿ ಮುಂಜಾನೆಯ ಧ್ಯಾನಕ್ಕೆ ಅವನ ಶಿಷ್ಯರು ಒಬ್ಬರಾದ ಮೇಲೆ ಹೋಗುತ್ತಿದ್ದರು.

ಪ್ರತೀ ಶಿಷ್ಯ ಕಂಡಾಗಲೂ ಮಾಸ್ಟರ್
“ ಗುಡ್ ಮಾರ್ನಿಂಗ್, ಹೇಗಿದ್ದೀಯಾ?” ಎಂದು ಕೂಗಿ ಕೇಳುತ್ತಿದ್ದ.
ಪ್ರತೀ ಬಾರಿ ಶಿಷ್ಯ
“ ಚೆನ್ನಾಗಿದಿನಿ ಮಾಸ್ಟರ್”
ಎಂದು ಉತ್ತರ ಕೊಟ್ಟಾಗ
ಮಾಸ್ಟರ್, ನಿಟ್ಟುಸಿರು ಬಿಟ್ಟು ತಲೆ ಕೊಡವಿಕೊಳ್ಳುತ್ತಿದ್ದ.

ಕೊನೆಗೆ ಒಬ್ಬ ಶಿಷ್ಯ ಕಾಣಿಸಿಕೊಂಡ. ಆಗಲೂ ಮಾಸ್ಟರ್, ಅದೇ ಪ್ರಶ್ನೆ ಕೇಳಿದ.
ಆದರೆ ಈ ಶಿಷ್ಯ, ತನ್ನ ತಲೆ ಮೇಲಿನ ಹ್ಯಾಟ್ ತೆಗೆದು ಮೇಲೆ ಕೆಳಗೆ ಅಲ್ಲಾಡಿಸಿದ. ತನ್ನ ಮೈಯನ್ನೆಲ್ಲ ಒಮ್ಮೆ ಕುಣಿಸಿದ.

“ ಇದು ಇದು. ಇದು ಬೇಕಾಗಿತ್ತು ನನಗೆ. ಎಲ್ಲ ಸರಿಯಾಗಿದೆ ಈಗ” ಮಾಸ್ಟರ್ ಮುಖದಲ್ಲಿ ನಗೆಯರಳಿತು.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply