ನಾನು ಜೀವವೂ ಪರಬ್ರಹ್ಮವೂ ಜಗತ್ತೂ ಎಲ್ಲ ಜಗತ್ತುಗಳ ರೂಪವೂ ಆಗಿದ್ದೇನೆ ಎನ್ನುವ ಮೈತ್ರೇಯಿಯ ದರ್ಶನ ಅತ್ಯಂತ ಮಹತ್ವದ್ದು. ಇದು ಅದ್ವೈತವನ್ನು ಪ್ರತಿಪಾದಿಸುವ ಅದ್ಭುತ ದರ್ಶನ ~ ಅಪ್ರಮೇಯ
ಅಹಮ್ ಅಸ್ಮಿ ಪರಃ ಚ ಅಸ್ಮಿ ಬ್ರಹ್ಮಾ ಅಸ್ಮಿ ಪ್ರಭವಃ ಅಸ್ಮಿ ಅಹಮ್ |
ಸರ್ವಲೋಕಗುರುಃ ಚ ಅಸ್ಮಿ ಸರ್ವಲೋಕೇ ಅಸ್ಮಿ ಸಃ ಅಸ್ಮಿ ಅಹಮ್ |ಮೈತ್ರೇಯಿ ಉಪನಿಷತ್||
ಅರ್ಥ: ನಾನು ಜೀವವಾಗಿದ್ದೇನೆ, ಪರಬ್ರಹ್ಮವೂ ಆಗಿದ್ದೇನೆ, ಈ ಜಗತ್ತೂ ಆಗಿದ್ದೇನೆ, ಎಲ್ಲ ಲೋಕಗಳಿಗೆ ಗುರುವೂ ಆಗಿದ್ದೇನೆ, ಎಲ್ಲ ಲೋಕಗಳ ರೂಪವೂ ಆಗಿದ್ದೇನೆ, ಆತತ್ವರೂಪವೂ ಆಗಿದ್ದೇನೆ….
ವೇದಕಾಲದ ಋಷಿಕೆಯರ ಸಾಲಿನಲ್ಲಿ ಮೈತ್ರೇಯಿ ಪ್ರಮುಖಳಾಗಿ ನಿಲ್ಲುತ್ತಾಳೆ. ಈಕೆ ರಚಿಸಿರುವ ಉಪನಿಷತ್ತು “ಮೈತ್ರೇಯಿ ಉಪನಿಷತ್” ಎಂದೇ ಹೆಸರು ಪಡೆದಿದೆ. ತನ್ನ ತಪಶ್ಚರಣೆಯಿಂದ ಮೈತ್ರೇಯಿ ಕಂಡುಕೊಂಡ ದರ್ಶನ, ವೇದಕಾಲದ ಋಷಿಗಳೆಲ್ಲರ ದರ್ಶನವೂ ಆಗಿದೆ. ಅಧ್ಯಾತ್ಮ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಯನ್ನು ಪ್ರತ್ಯೇಕಿಸಿ ಹೇಳುವ ಅಗತ್ಯವಿಲ್ಲ. ಸಾಧನೆಗೆ ಲಿಂಗಭೇದವಿಲ್ಲ. ಆದರೂ ಈ ನಿಟ್ಟಿನಲ್ಲಿ ಮಹಿಳೆಯರನ್ನು ಕಡಿಮೆ ಎಂದು ಅಳೆಯುವವರು ಮೈತ್ರೇಯಿ ಸೇರಿದಂತೆ ವೇದಕಾಲೀನ (ಮತ್ತು ಅನಂತರದ ಕೂಡಾ) ಸಾಧಕಿಯರ ಕಾಣ್ಕೆಗಳನ್ನು ಗಮನಿಸುವ ಅಗತ್ಯವಿದೆ.
ನಾನು ಜೀವವೂ ಪರಬ್ರಹ್ಮವೂ ಜಗತ್ತೂ ಎಲ್ಲ ಜಗತ್ತುಗಳ ರೂಪವೂ ಆಗಿದ್ದೇನೆ ಎನ್ನುವ ಮೈತ್ರೇಯಿಯ ದರ್ಶನ ಅತ್ಯಂತ ಮಹತ್ವದ್ದು. ಇದು ಅದ್ವೈತವನ್ನು ಪ್ರತಿಪಾದಿಸುವ ಅದ್ಭುತ ದರ್ಶನ.