ಅಹಂ ಅನ್ನಂ ಅಹಮನ್ನಾದಃ ~ ಅನ್ನವೂ ನಾನು, ಅನ್ನ ತಿನ್ನುವವನೂ ನಾನೇ!

ನಾವು ಅಕ್ಕಿಯೆಂಬ ಧಾನ್ಯವೊಂದನ್ನೇ ಅನ್ನವೆಂದು ತಿಳಿದಿದ್ದೇವೆ ಆದರೆ ವೇದಾಂತ ಅನ್ನಕ್ಕೆ ವಿಶಾಲವಾದ ಅರ್ಥವನ್ನು ಕೊಟ್ಟಿದೆ. ವೇದಾಂತದ ಪ್ರಕಾರ ಅನ್ನವೆಂದರೆ ಯಾವುದು ಸೇವಿಸಲ್ಪಡುತ್ತದೋ ಅದು ”ಅನ್ನ” ~ ಅಪ್ರಮೇಯ ಅಸ್ತಿತ್ವ

ಅಹಂ ಅನ್ನಂ ಅಹಂ ಅನ್ನಂ ಅಹಂ ಅನ್ನಂ
ಅಹಮನ್ನಾದಃ ಅಹಮನ್ನಾದಃ ಅಹಮನ್ನಾದಃ |
[ ತೈತ್ತಿರೀಯ ಉಪನಿಷತ್ 3.10.6 ]

ನಾನು ಈ ಜಗತ್ತಿಗೆ ಅನ್ನವಾಗಿದ್ದೇನೆ,
ಈ ಜಗತ್ತು ನನಗೆ ಅನ್ನವಾಗಿದೆ
ನಾನೇ ಅನ್ನವೂ ಆಗಿದ್ದೇನೆ,
ಅನ್ನವನ್ನ ತಿನ್ನುವವನೂ ನಾನೇ ಆಗಿದ್ದೇನೆ ಎಂದು ಹೇಳುತ್ತದೆ ವೇದಾಂತ

ನಾವು ಅಕ್ಕಿಯೆಂಬ ಧಾನ್ಯವೊಂದನ್ನೇ ಅನ್ನವೆಂದು ತಿಳಿದಿದ್ದೇವೆ ಆದರೆ ವೇದಾಂತ ಅನ್ನಕ್ಕೆ ವಿಶಾಲವಾದ ಅರ್ಥವನ್ನು ಕೊಟ್ಟಿದೆ
ವೇದಾಂತದ ಪ್ರಕಾರ ಅನ್ನವೆಂದರೆ ಯಾವುದು ಸೇವಿಸಲ್ಪಡುತ್ತದೋ ಅದು ”ಅನ್ನ”
ಹೇಗೆಂದರೆ…….
ಸಸ್ಯಗಳು ಪ್ರಾಣಿಗಳಿಗೆ ಅನ್ನವಾಗಿದೆ
ಕೆಲವು ಪ್ರಾಣಿಗಳು ಇತರೆ ಪ್ರಾಣಿಗಳಿಗೆ ಅನ್ನವಾಗಿವೆ,
ಪ್ರಾಣಿಗಳೆಲ್ಲವೂ ಸತ್ತ ನಂತರ ಸಸ್ಯಗಳಿಗೆ ಅನ್ನವಾಗಿದೆ,
ಸಸ್ಯಗಳಾದಿಯಾದಿ ಈ ಜಗತ್ತೆಲ್ಲವನ್ನೂ ಪ್ರಲಯಕಾಲದಲ್ಲಿ (ಲಕ್ಷಣಾರ್ಥದಿಂದ) ಲಯಕರ್ತ ರುದ್ರನಾದ ನನಗೆ ಅನ್ನವಾಗಿದೆ.

|| ಅತ್ತಿ ಇತಿ ಅನ್ನಮ್ ||
ಎಲ್ಲವನ್ನೂ ತಿನ್ನುವವನೂ ಪ್ರಲಯ ಕಾಲದಲ್ಲಿ ಬ್ಲ್ಯಾಕ್ ಹೋಲ್’ನಂತೆ ಎಲ್ಲವನ್ನೂ ಭಕ್ಷಿಸುವವನು. ವೇದಾಂತ ಇದನ್ನು ಅನ್ನಮಯಕೋಶವೆಂದೇ ವಿವರಿಸುತ್ತದೆ.
ಇದು ಮೊದಲನೆಯ ಆಯಾಮದ್ದು ಉದ್ದ, ದಪ್ಪ, ಅಳ ಎನ್ನುವ ಮೂರು ಆಯಾಮಗಳೂ ಇದರಲ್ಲೇ ಬರುತ್ತವೆ, ಈ ಮೂರರ ಆಯಾಮದ ನಂತರದ್ದನ್ನು ಪ್ರಾಣಾಮಯ ಕೋಶ, ಮನೋಮಯ ಕೋಶಗಳೆಂದು ವಿವರಿಸುತ್ತದೆ ವೇದಾಂತ
ದೇಹೋsಯಮನ್ನಭವನೋsನ್ನಮಯಸ್ತು ಕೋಶಶ್ಚಾನ್ನೇನ ಜೀವತಿ ವಿನಶ್ಶತಿ ತದ್ವಿಹೀನಃ | : ಅಂದರೆ ನಾವು ನೀವೆಲ್ಲರೂ ಸೇವಿಸುವ ಅನ್ನವೇ ರೂಪಾಂತರ ಹೊಂದಿ ನಮ್ಮನಿಮ್ಮೆಲ್ಲರ ದೇಹವಾಗುತ್ತದೆ. ಇದು ಸಕಲ ಜೀವರಾಶಿಗಳಿಗೂ ಅನ್ವಯಿಸುವಂತಥದ್ದು.

ನಮ್ಮೆಲ್ಲರ ದೇಹದಲ್ಲೂ ಸೂಕ್ಷ್ಮಾತಿ ಸೂಕ್ಷ್ಮ ಜೀವಿಗಳು ವಾಸಿಸುತ್ತಿವೆ. ಅವಕ್ಕೆಲ್ಲ ನಮ್ಮ ದೇಹವೇ ಅನ್ನ. ಹಾಗಾಗಿ ಅವಕ್ಕೆಲ್ಲಾ ನಮ್ಮ ದೇಹವೇ ಜಗತ್ತು, ಇರುವೆ ಸೊಳ್ಳೆಗಳಂತಹ ಜೀವಿಗಳಿಗೂ ನಮ್ಮ ದೇಹ ಅನ್ನವಾಗಿದೆ.
ಇದನ್ನು ವೈಜ್ಞಾನಿಕವಾಗಿ ವಿವರಿಸುವುದಾದರೆ ಈ ಜಗತ್ತೇ ಒಂದು ಅಣುಗಳ ಮುದ್ದೆ. ನಾವು ಕುಡಿದು ವಿಸರ್ಜಿಸಿದ ಅಣುಗಳೇ ಆವಿಯಾಗಿ ಮೊಡಗಟ್ಟಿ ಮಳೆಯಾಗಿ ಭೂಮಿಗಿಳಿಯುತ್ತವೆ ಮತ್ತದೇ ಅಣುಗಳು ಅವಿಯಾಗುತ್ತವೆ ಮೊಡಗಟ್ಟಿ ಭೂಮಿಗಿಳಿಯುತ್ತವೆ. ನಾವು ತಿಂದು ವಿಸರ್ಜಿಸಿದ ಅಣುಗಳೇ ಗೊಬ್ಬರ ಗಿಡವಾಗಿ ಫಲವಾಗಿ ಮತ್ತದೇ ಅಣುಗಳನ್ನು ಸೇವಿಸುತ್ತೇವೆ. ಕೊನೆಗೆ ಈ ಅಣುಗಳನ್ನೆಲ್ಲಾ ಬ್ಲಾಕ್ ಹೋಲ್ (ರುದ್ರ) ಭಕ್ಷಿಸುತ್ತದೆಯಾದ್ದರಿಂದ ಇದು ಪರಮಾತ್ಮನಿಗೆ ಅನ್ನ. ಇದೊಂದು ವರ್ತುಲಾಕಾರದ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂದು ವಿವರಿಸುತ್ತದೆ ವೇದಾಂತ.

ಸತ್ತ ಹೆಣಗಳಿಗೆ ಅಲಂಕಾರ ಪೂಜೆಗಳೆಲ್ಲಾ ಏಕೆ ಎನ್ನುವುದು ಕೆಲವರ ಪ್ರೆಶ್ನೆ. ಅದಕ್ಕೆ ಇದೇ ಉತ್ತರ; ಸತ್ತ ಹೆಣವೂ ಇತರ ಜೀವಿಗಳಿಗೆ ಅನ್ನವಾಗಿರುವುದರಿಂದ ಆ ಅನ್ನವನ್ನು ಗೌರವಿಸಿಬೇಕು ಎಂದು ವೇದಾಂತದ ‘ವಾರುಣಿ ವಿದ್ಯೆ’ಯಲ್ಲಿ ಹೇಳಿದೆ ಆದ್ದರಿಂದಲೇ ಹೆಣಗಳಿಗೆ ಪೂಜೆ ಪುನಸ್ಕಾರಗಳು ಸಲ್ಲುತ್ತವೆ.
ಮತ್ತೆ ಕೆಲವರು ಸುಡುತ್ತಾರೆ. ಏಕೆಂದರೆ ಈ ಜೀವನವೇ ಒಂದು ಯಜ್ಞವಾಗಿದೆ. ಈ ಯಜ್ಞದಲ್ಲಿ ಅಗ್ನಿದೇವನಿಗೆ ಈ ದೇಹವನ್ನೇ ಹವಿಸ್ಸಾಗಿ ಅನ್ನವಾಗಿ ಅರ್ಪಿಸಲಾಗುತ್ತದೆ. ಹಾಗಾಗಿ ಅದು ಅಗ್ನಿ ದೇವನಿಗೆ ಅನ್ನ.

Leave a Reply