ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #5

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಸೂಲಗಿತ್ತಿಗೆ ಚೆನ್ನಾಗಿ ಗೊತ್ತು.
ಹೆರಿಗೆ ಬೇನೆ ಶುರುವಾಗದ ಹೊರತು
ಮಗು ಹೊರ ಬರುವ ದಾರಿ
ಪೂರ್ತಿಯಾಗಿ ತೆರೆದುಕೊಳ್ಳುವುದಿಲ್ಲ
ಮತ್ತು ತಾಯಿ, ಮಗುವಿಗೆ ಜನ್ಮ ನೀಡುವುದು
ಸಾಧ್ಯವಾಗುವುದಿಲ್ಲ.

ಪ್ರತೀ ಹೊಸ ಹುಟ್ಟಿನ ದಾರಿ
ಯಾತನೆ ಮತ್ತು ಸಂಕಷ್ಟಗಳ ಮೂಲಕವೇ;
ಹೇಗೆ ಗಟ್ಟಿಯಾಗಲು ಮಡಿಕೆ
ಬೆಂಕಿಯ ಶಾಖ ಹಾಯ್ದು ಬರಬೇಕೋ, ಹಾಗೆ.

ನೋವು ಮಾತ್ರ
ಪ್ರೇಮವನ್ನು ಪರಿಪೂರ್ಣವಾಗಿಸಬಲ್ಲದು.

4ನೇ ನಿಯಮ ಇಲ್ಲಿ ನೋಡಿ :  https://aralimara.com/2019/11/24/sufi-51/

1 Comment

Leave a Reply