ಶ್ರೀರಾಮ ಸೂಕ್ತಿ : ಬೆಳಗಿನ ಹೊಳಹು

ಶ್ರೀರಾಮನು ಭಕ್ತಶ್ರೇಷ್ಠನಾದ ಹನುಮನಿಗೆ ನೀಡಿದ ಉಪದೇಶಗಳು ‘ಶ್ರೀ ರಾಮ ಸೂಕ್ತಿ’ಯಲ್ಲಿ ಸಂಕಲನಗೊಂಡಿದೆ. ಅದರಿಂದ ಕೆಲವು ಹೊಳಹುಗಳು, ನಿಮಗಾಗಿ…

ram“ಪರಮಾತ್ಮನ  ನೆರಳೇ  ಎಲ್ಲ ಜೀವಿಗಳಲ್ಲಿ ಜೀವಾತ್ಮನಾಗಿ ಪ್ರತಿಬಿಂಬಿತವಾಗಿದೆ. ವಿಶಾಲವಾದ ಆಕಾಶವೇ ಎಲ್ಲ ನದಿ, ಸರೋವರಗಳಲ್ಲಿ ಪ್ರತಿಬಿಂಬಿಸುತ್ತದೆ”

~

ಶುದ್ಧವಾದ ಜ್ಞಾನವು ಎಲ್ಲ ಆಸೆ ಮತ್ತು ಆಸಕ್ತಿಗಳನ್ನು ಕೊಲ್ಲುತ್ದೆ. ಸಕಾಮಕರ್ಮ ಯಾವುದೇ ಆಗಿರಲಿ, ಅದನ್ನು ಬಿಡಬೇಕು. ಅದು ವ್ಯಕ್ತಿಯನ್ನು ಜನನ – ಮರಣದ ಸಂಕೋಲೆಯಲ್ಲಿ ಬಂಧಿಸುತ್ತದೆ.  ನಿಜವಾದ ಜ್ಞಾನವನ್ನು ಹೊಂದಲು ಅದು ಅಡ್ಡಿಯಾಗುವುದು.

~

ಪಂಚಭೂತಗಳಿಂದ, ಅತ್ಯಂತ ಸೀಮಿತವೂ ನಾಶವುಳ್ಳದ್ದೂ ಆದ  ದೇಹವು ಆತ್ಮನಿಗಿಂತ ಭಿನ್ನವಾಗಿದೆ. ಆತ್ಮವು ಆದ್ಯಂತರಹಿತವೂ, ಅವಿನಾಶಿಯೂ ಆಗಿದೆ. ಅದು  ದೇಹವನ್ನು ಸೃಷ್ಟಿಸಿಕೊಳ್ಳುವುದು. ಇದನ್ನು ಚೆನ್ನಾಗಿ ಮನನ ಮಾಡಿಕೊಂಡು, ಆತ್ಮವನ್ನು ಅರಿಯಲೆತ್ನಿಸಬೇಕು.

~

ಸೂರ್ಯೋದಯವಾದಾಗ ಜನರು ತಾವು  ದುಡಿದು ಸಂಪಾದಿಸಬಹುದೆಂದು ಉತ್ಸಾಹ ತಾಳುತ್ತಾರೆ. ಸೂರ್ಯಾಸ್ತದ ವೇಳೆಯಲ್ಲೂ ಅವರು ಆನಂದದಿಂದಲೇ ಇರುತ್ತಾರೆ. “ಅರೆ! ನನ್ನ ಜೀವನ ಮುಳುಗುತ್ತಿದೆ!!” ಎಂದು ಅವರು ಚಿಂತಾಕುಲರಾಗುವುದಿಲ್ಲ.

ಆಕರ : ಶ್ರೀರಾಮ ಸೂಕ್ತಿ | ಶ್ರೀರಾಮ ಹನುಮನಿಗೆ ನೀಡಿದ ಉಪದೇಶಗಳ ಸಂಗ್ರಹ

Leave a Reply