ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ಬದುಕು
ನಮಗೆ ನೀಡಲಾಗಿರುವ
ತಾತ್ಕಾಲಿಕ ಸಾಲ ಮಾತ್ರ,
ಸತ್ಯದ ಒಂದು ಕಚ್ಚಾ ನಕಲು ಪ್ರತಿ.
ಮಕ್ಕಳಿಗೆ ಮಾತ್ರ
ನಿಜದಂತೆ ಕಾಣುತ್ತವೆ ಆಟಿಗೆಗಳು.
ಆದರೂ ಕೆಲವರಿಗೆ ಆಟಿಗೆಗಳೆಂದರೆ ಮೋಹ
ಇನ್ನೂ ಕೆಲವರಿಗೆ ತಾತ್ಸಾರ
ಎಸೆಯುತ್ತಾರೆ,
ಮುರಿದು ಹಾಕಿಬಿಡುತ್ತಾರೆ.
ಈ ಬದುಕಿನಲ್ಲಿ
ಎಲ್ಲ ಅತಿಗಳಿಂದಲೂ ದೂರವಿರಿ,
ಇಲ್ಲವಾದರೆ ಒಳಗಿನ ಸಮತೋಲನಕ್ಕೆ ಧಕ್ಕೆ.
ಕಣ್ಣು ಮುಚ್ಚಿ ತೆಗೆಯುವುದರಲ್ಲಿ
ಒಂದು ಅತಿ ಇನ್ನೊಂದಾಗುತ್ತದೆ.
ಸೂಫಿಗಳು
ಸದಾ ಮಧ್ಯಮ ಸ್ಥಿತಿಯಲ್ಲಿ
ನಿರ್ಲಿಪ್ತರು, ಸಮಾಧಾನಿಗಳು
ಮತ್ತು ಪ್ರೇಮದಲ್ಲಿ ನಿರತರು.
11ನೇ ನಿಯಮ ಇಲ್ಲಿ ನೋಡಿ : https://aralimara.com/2019/12/10/sufi-59/