ಸಪ್ತಪದಿಯ ಏಳು ಹೆಜ್ಜೆಗಳು ಏನು ಹೇಳುತ್ತವೆ?

ವಿವಾಹ ಕಾಲದಲ್ಲಿ ನಡೆಸಲಾಗುವ ಸಪ್ತಪದಿ ಆಚರಣೆಯಲ್ಲಿ ವರನು ವಧುವಿಗೆ 7 ಕೋರಿಕೆಗಳನ್ನು ಮುಂದಿಡುತ್ತಾನೆ. ಪ್ರತಿಯೊಂದು ಕೋರಿಕೆಯನ್ನೂ ಒಂದು ಹೆಜ್ಜೆ ಮುಂದಿಡುವ ಮೂಲಕ ನೀಡಲಾಗುವ ಈ ಪ್ರಕ್ರಿಯೆಯನ್ನು ಸಪ್ತಪದಿ ಎಂದೇ ಕರೆಯಲಾಗಿದೆ.

ಸಪ್ತಪದಿಯ 7 ಹೆಜ್ಜೆಗಳು ಸೂಚಿಸುವ ಈ ಕೋರಿಕೆಗಳೇನು, ನೋಡೋಣ….

ಮೊದಲನೆ ಹೆಜ್ಜೆ

 ಓ ನನ್ನ ಹೃದಯ ಕದ್ದವಳೆ ನೀನು ಒಂದು ಹೆಜ್ಜೆ ಮುಂದಿಡು. ನೀನು ಕಾಲಿಟ್ಟ ಸ್ತಳದಲ್ಲೆಲ್ಲ ಅನ್ನ ಸಮೃದ್ದಿಯಾಗುವಂತೆಮಾಡು. ನನ್ನ ಸುಖದುಃಖಗಳಲ್ಲಿ ಜೊತೆಯಾಗಿ, ನನಗೆ ಅನುಕೂಲಕರ ಪತ್ನಿಯಾಗು. ನಮ್ಮ ಮುಂದಿನ ಬಾಳು ಹಸನಾಗುವಂತಾಗಲಿ.

ಎರಡನೆ ಹೆಜ್ಜೆ

ನಿನ್ನ ನುಣುಪಾದ ಹೆಜ್ಜೆ ಇಟ್ಟ ಸ್ಥಳದಲ್ಲೆಲ್ಲ ಬಲ ಸಂವರ್ಧನೆ ಆಗಲಿ. ನಮ್ಮ ಭಾಂಧವ್ಯ ಜೇನಿನಂತಾಗಲಿ.  ನಿನ್ನ ಶಕ್ತಿಯಿಂದ ನನ್ನ ಬಾಹುವಿನಲ್ಲಿ ಬಲವನ್ನು ತುಂಬುವಂಥವಳಾಗು.

ಮೂರನೆ ಹೆಜ್ಜೆ

ನಿನ್ನ ಮೂರನೆ ಹೆಜ್ಜೆಯನ್ನು ನಿನ್ನ ನೂತನ ಗೃಹದಲ್ಲಿಟ್ಟು ಅಲ್ಲಿ ಧನ- ಧಾನ್ಯ-ಸಂಪತ್ತು ವೃದ್ದಿಯಾಗುವಂತೆ ಮಾಡು. ನಿನ್ನ ಕಾಲ್ಗುಣದಿಂದ ಸಂಪತ್ತು ವೃದ್ಧಿಯಾಗುವಂತಾಗಲಿ. ನಮ್ಮ ಸಂಸಾರ ಸಾಗರವು ನಿರಾಂತಕವಾಗಿ ಸಾಗುವಂತೆ ಮಾಡು.

ನಾಲ್ಕನೆ ಹೆಜ್ಜೆ

ನಿನ್ನ ನಾಲ್ಕನೆ ಹೆಜ್ಜೆ ಯನ್ನು ಗೃಹದಲ್ಲಿಟ್ಟ ನಂತರ ಸುಖ-ಶಾಂತಿ- ಸೌಕರ್ಯಗಳು ನಮ್ಮ ಬಾಳಿನಲ್ಲಿ ಉಕ್ಕಿ ಹರಿಯುವಂತಾಗಲಿ.

ಐದನೆ ಹೆಜ್ಜೆ

ಮುಂದಿನ ದಿನಗಳಲ್ಲಿ ನನ್ನ ನಿನ್ನ ಸಮ್ಮಿಲನದಿಂದ ಉತ್ತಮ ಸಂತಾನ ಪ್ರಾಪ್ತವಾಗಲಿ. ನಮ್ಮ ಮಕ್ಕಳು ಸತ್ಪ್ರಜೆಗಳಾಗಿ ಬಾಳಲಿ.

ಆರನೇ ಹೆಜ್ಜೆ

ನಿನ್ನ ಆರನೆ ಹೆಜ್ಜೆ ಯಿಂದ ನಮ್ಮ ಮನೆಯಲ್ಲಿ ಮಂದಮಾರುತವು ಬೀಸಲಿ. ಹಾಸ್ಯ ಪ್ರೇಮ ಆನಂದ ಸಾಗರ ದಲ್ಲಿ ನಾವು ತೇಲಾಡುವಂತಾಗಲಿ. ಯಾವುದೇ ಕಾರಣಕ್ಕೂ ನಮ್ಮ ನಡುವೆ ಮನಸ್ತಾಪ ಉಂಟಾಗದಿರಲಿ.

ಏಳನೆ ಹೆಜ್ಜೆ

ನಮ್ಮ ಎರಡೂ ಕುಟುಂಬಗಳ ಬಂದು ಭಾಂಧವರಲ್ಲಿ ಉತ್ತಮ ಸಂಬಂಧ ವೃದ್ದಿಯಾಗಲಿ. ನೀನು ನನ್ನ ಉತ್ತಮ ಮಡದಿಯಾಗಿ , ನಮ್ಮ ಮಕ್ಕಳಿಗೆ ಮಾತೆಯಾಗಿ ನಮ್ಮ ಮನೆಯನ್ನು ನಂದನ ವನವಾಗುವಂತೆ ಮಾಡು. ನಮ್ಮ ಮಕ್ಕಳು ಉತ್ತಮ ಆಯಸ್ಸು ಪಡೆದು ಧರ್ಮದ ಹಾದಿಯಲ್ಲಿ ನಡೆಯುತ್ತಾ ದೀರ್ಘಾಯುಗಳಾಗಿ ಬಾಳುವಂತಾಗಲಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.