ಮಂತ್ರ ಶಕ್ತಿಯ ಮಹಿಮೆ

ವೇದಗಳು ಭಗವಂತನ ನಿಃಶ್ವಾಸದಿಂದ ಪ್ರಾಪ್ತವಾಗಿವೆ. ಆದ್ದರಿಂದ ಮಂತ್ರಗಳನ್ನು ದೇವತೆಗಳ ಶರೀರವೆಂದು ಹೇಳುವುದು.  ಮಂತ್ರಗಳಲ್ಲಿ ಉಕ್ತವಾದ ದೇವತೆಗಳಿಗೂ ಮತ್ತು ಛಂದಸ್ಸುಗಳಿಗೂ ಸಂಬಂಧವಿರುವುದನ್ನು ಋಗ್ವೇದದಲ್ಲಿ ಸ್ಪಷ್ಟಪಡಿಸಲಾಗಿದೆ. 
ಋಗ್ವೇದ 10-130:
“ಅಗ್ನೇಃ ಗಾಯತ್ರ್ಯ ಭವತ್ ಸಯುಗ್ವಾ ಉಷ್ನಿಹಯಾ ಸವಿತಾ ಸಂ ಬಭೂವ ಅನುಷ್ಟುಭಾ ಸೋಮ ಉಕ್ತೈಃ ಮಹಸ್ವಾನ್ ಬೃಹಸ್ಪತೇರ್ಬೃಹತೀ ವಾಚಮಾವತ್||4||
ವಿರಾಟ್ ಮಿತ್ರಾವರುಣಯೋರಭಿಶ್ರೀಃ ಇಂದ್ರಸ್ಯ ತ್ರಿಷ್ಟುಬಿಹ ಭಾಗೋ ಅಹ್ನಃ ವಿಶ್ವಾನ್ ದೇವಾಂಜಗತ್ಯಾ ವಿವೇಶ ತೇನ ಚಾಕ್ಲೃಪ್ರ ಋಷಯೋ ಮನುಷ್ಯಾಃ||5||”
ಗಾಯತ್ರಿ = ಅಗ್ನಿಗೆ;
ಬೃಹತೀ = ಬೃಹಸ್ಪತಿಗೆ;
ವಿರಾಟ್ = ಮಿತ್ರಾ, ವರುಣರಿಗೆ;
ತ್ರಿಷ್ಟುಪ್ = ಇಂದ್ರನಿಗೆ;
ಉಷ್ಣಿಕ್ = ಸವಿತೃ;
ಅನುಷ್ಟುಪ್ = ಸೋಮ;
ಜಗತೀ = ವಿಶ್ವೇದೇವತೆಗಳಿಗೆ ಉಪಯೋಗಿಸಲ್ಪಡುತ್ತದೆ. 
ದೇವತೆಗಳೂ ಆಯಾ ಮಂತ್ರಗಳ ಪ್ರತಿಪಾದ್ಯ ವಿಷಯಗಳಾಗಿರುವುದರಿಂದ ಛಂದಸ್ಸಿಗೂ ಅರ್ಥಕ್ಕೂ ಸಂಬಂಧವಿರುವುದು ವೇದ್ಯವಾಗುತ್ತದೆ. ಆದುದರಿಂದಲೇ ಛಂದೋಬದ್ಧವಾದ ವೇದ ಮಂತ್ರದಿಂದಲೇ ಪೂಜೆ, ಹವ್ಯ, ಕವ್ಯಗಳನ್ನು ಮಾಡಬೇಕು ಎಂದು ನಿಯಮವಿದೆ.
ದೇವತೆಗಳು ಮಂತ್ರಸ್ವರೂಪಿಗಳಾದುದರಿಂದ ವಿಹಿತಕರ್ಮಗಳನ್ನು ಮಾಡುವ ಸದಾಚಾರ ಸಂಪನ್ನನಿಗೆ ಮಂತ್ರಸಿದ್ಧಿ ಆಗುತ್ತದೆ. 
ಮಂತ್ರೋಚ್ಛಾರಣ ಮಾಡುವುದರಿಂದ ಮಂಗಲ ವಾತಾವರಣ ನಿರ್ಮಾಣವಾಗುತ್ತದೆ. 
ಸರಿಯಾಗಿ ಉಚ್ಛರಿಸಿದ ಒಂದೇ ಒಂದು ಮಂತ್ರವಾದರೂ ಕಾಮಧೇನುವಿನಂತೆ ಇಷ್ಟಫಲವನ್ನು ಕೊಡುತ್ತದೆಂದು ಹೇಳುತ್ತಾರೆ. 

“ಏಕಃ ಶಬ್ಧಃ ಸುಷ್ಠು ಪ್ರಯುಕ್ತಃ ಸ್ವರ್ಗೇ ಲೋಕೇ ಕಾಮಧುಗ್ಧಮತಿ”
ನಿತ್ಯಾಭ್ಯಾಸವುಳ್ಳವರು ಅಸ್ಖಲಿತವಾದ ಮಂತ್ರೋಚ್ಛಾರ ಮಾಡಿದರೆ, ಆ ಮಂತ್ರಸಿದ್ಧಿಯಿಂದ ಬೇಕಾದ್ದನ್ನು ಪಡೆಬಹುದು. 
ಆವಾಹಿತ ದೇವತೆಯ ಮಂತ್ರೋಚ್ಛಾರದಿಂದ ಆ ದೇವತೆಯ ಸಾನ್ನಿಧ್ಯವುಂಟಾಗುತ್ತದೆ. ಮಂತ್ರಶಕ್ತಿಯಿಂದ ಯಾವುದೇ ಕಾರ್ಯವನ್ನಾದರೂ ಕೈಗೂಡಿಸಬಹುದು ಎಂದು ಹೇಳಲಾಗಿದೆ. 

1 Comment

Leave a Reply