“ನಮ್ಮನ್ನು ನಾವು ಮರೆಯುವುದೆಂದರೆ,
ನಮ್ಮನ್ನು ನಾವು ಕಂಡುಕೊಳ್ಳೋದು” ಅನ್ನುತ್ತಾನೆ ಡೋಜೆನ್ ಜೆಂಜಿ.
ನಮ್ಮನ್ನು ನಾವು ಒಂದು ಗುರುತಿಗೆ ಸೀಮಿತಗೊಳಿಸಿಕೊಂಡರೆ ಮತ್ತೊಂದು ಗುರುತು, ಈಗಿನದನ್ನೂ ಮೀರಿಸುವ, ಮತ್ತಷ್ಟು ವಿಕಸನಗೊಂಡ, ನಮ್ಮ ನಿಜಸತ್ವವನ್ನು ಹೊರದೋರಬಲ್ಲ ಮತ್ತೊಂದು ಗುರುತನ್ನು ಹೊಂದಲು ಸಾಧ್ಯವಾಗುವುದಿಲ್ಲ. ನಿಜವಾಗಿಯೂ ನಾವೇನಿದ್ದೇವೋ, ನಾವು ಏನಾಗಬಲ್ಲೆವೋ ಅದಾಗಲು ಸಾಧ್ಯವಿಲ್ಲ.
ಆದ್ದರಿಂದ, ಡೋಜೆನ್ ಹೇಳುತ್ತಾನೆ,
“ನಮ್ಮನ್ನು ನಾವು ಮರೆಯಬೇಕು” ನಮ್ಮ ಗುರುತು, ಚಹರೆ, ಸವಲತ್ತುಗಳು, ಕಂಫರ್ಟ್ ಝೋನ್ ಎಲ್ಲವನ್ನೂ ಬಿಟ್ಟುಕೊಡಬೇಕು. ಆಗಮಾತ್ರ “ನಮ್ಮನ್ನು ನಾವು ಕಂಡುಕೊಳ್ಳಲು” ಸಾಧ್ಯವಾಗೋದು.