ಮಾತು ಮತ್ತು ಮೌನ : ಒಂದು ಸೂಫೀ ಪದ್ಯ

ಮೂಲ : ನಜತ್ ಸೂಫೀ | ಕನ್ನಡಕ್ಕೆ : ಚಿದಂಬರ ನರೇಂದ್ರ

ನನ್ನ ಹತ್ತಿರ ಕೂತಿರುವ ಈ ಮನುಷ್ಯ
ಎಷ್ಟು ಮಾತನಾಡುತ್ತಾನೆ ?
ಇವನ ಬಾಯಿ ಮುಚ್ಚಿಸಬೇಕಲ್ಲ…

ಬಹುತೇಕರಿಗೆ ಮೌನ, ದಿಗಿಲು
ತಪ್ಪಿಸಿಕೊಳ್ಳಲು, ಇಲ್ಲದುದರ ಬಗ್ಗೆಯೂ ವ್ಯಾಖ್ಯಾನ.

ಧ್ವನಿಯ ಬಗ್ಗೆ ಅಕ್ಕರೆ ಏನಿಲ್ಲ
ಮೌನದ ಬಗ್ಗೆ ಮಾತ್ರ ಆತಂಕ.

ಕಾರಣ?
ಅದೇ, ಮೌನದ ಸಲಿಗೆ.
ಸಲಿಗೆ ಎಂದರೆ ಎಂಥೆಂಥವರೂ ತಬ್ಬಿಬ್ಬು

ಮಾತು ಬಟ್ಚೆ, ಮೌನ ಬೆತ್ತಲು
ಪ್ರಾರ್ಥನೆಯಲ್ಲಿ ಎಂಥ ಸಂಕೋಚ?
ಕಳಚಿ, ಶರಣಾಗಿ.

 

Leave a Reply