ದುಃಖವೂ ಒಂದು ಅಗತ್ಯವಾಗಿದೆ! ~ ಓಶೋ ಹೇಳಿದ ಸೂಫಿ ಕಥೆಗಳು #1

“ನನ್ನ ಜೀವನದಲ್ಲಿ, ನನ್ನ ಈ ಯಾತ್ರೆಯಲ್ಲಿ, ನನ್ನ ಸಾಧನೆಯಲ್ಲಿ  ಈ ದಿನ ಹೀಗೆ ಹಸಿವಿನಿಂದಿರುವುದು ನನ್ನ ಅಗತ್ಯತೆಯಾಗಿದೆ. ಈ ಹಳ್ಳಿಯ ಜನರ ಅಸ್ವೀಕಾರ, ಹೀಗೆ ಮರೂಭೂಮಿಯಲ್ಲಿ ರಾತ್ರಿ ಚಳಿಗೆ ನಿರಾಶ್ರಿತನಾಗಿರುವುದು… ಇವೆಲ್ಲವೂ ಇಂದಿನ ನನ್ನ ಅಗತ್ಯತೆ ಆಗಿದೆ.” ಅಂದುಬಿಟ್ಟ ಸೂಫಿ ಫಕೀರ!  ~ ಓಶೋ  ರಜನೀಶ್| ಭಾವಾನುವಾದ: ಧ್ಯಾನ್‌ ಉನ್ಮುಖ್

ಸೂಫಿ ಸಂತರೊಬ್ಬರು ಭಗವಂತನಿಗೆ ಸದಾ ಕೃತಜ್ಞತೆ ಸಲ್ಲಿಸುತ್ತಿದ್ದರು. ʼನಾನೆಷ್ಟು ಭಾಗ್ಯಶಾಲಿ ಎಂದರೆ ನನ್ನೆಲ್ಲಾ ಅವಶ್ಯಕತೆಗಳುನೀನು ತಕ್ಷಣದಲ್ಲಿಯೇ ನೆರೆವೇರಿಸುತ್ತಿರುವೆʼ ಎಂದು.  ಅವರ ಶಿಷ್ಯನಿಗೆ ಇದು ಕಿರಿಕಿರಿಯ ಸಂಗತಿಯಾಗಿತ್ತು. ಕಾರಣ ಅವನ ಗುರು ತುಂಬಾ ಬಡವರಾಗಿದ್ದರು. ಇವರ ಯಾವ ಅವಶ್ಯಕತೆಗಳನ್ನು ಆ ಭಗವಂತ ನೆರೆವೇರಿಸುತ್ತಿದ್ದಾನೆ ? ಶಿಷ್ಯಂದಿರು ಹಸಿವಿನಿಂದ ಸಾಯುತ್ತಿದ್ದರು. ಇದಕ್ಕೆ ಯಾವುದೇ ಪರಿಹಾರ ಇರಲಿಲ್ಲ. ಆದರೆ ಇವರು ಮಾತ್ರ ದಿನ ಬೆಳಗಾದರೆ ಐದು ಬಾರಿ ನಮಾಜ್‌ ಮಾಡಿ ಭಗವಂತನಿಗೆ ಕೃತಜ್ಞತೆ ಸಲ್ಲಿಸಿ ಅಹೋಭಾವದಲ್ಲಿ ತೇಲುತ್ತಿದ್ದಾರೆ! ಶಿಷ್ಯನಿಗೆ ಇದೊಂದು ಯಕ್ಷಪ್ರಶ್ನೆಯಾಗಿತ್ತು.

ಒಂದು ದಿನ ಅವರು ಶಿಷ್ಯರೊಂದಿಗೆ ತೀರ್ಥಯಾತ್ರೆಗೆ ಹೊರಟಿದ್ದರು. ಮೂರು ದಿನಗಳಿಂದ ಊಟವಿಲ್ಲದೆ ಹಸಿವಿನಿಂದ ಬಳಲಿದ್ದರು. ಹಸಿವಿನಿಂದ ಬಳಲಿದ್ದ ಇವರು ಒಂದು ಹಳ್ಳಿಯನ್ನು ತಲುಪುತ್ತಾರೆ. ಆ ಹಳ್ಳಿಯ ಜನ ಇವರಿಗೆ ಆಶ್ರಯ ನೀಡಲು ನಿರಾಕರಿಸುತ್ತಾರೆ. ಹಸಿದ ಹೊಟ್ಟೆಗಳೊಂದಿಗೆ ಒಂದು ಮರದ ಕೆಳಗೆ ವಿಶ್ರಮಿಸುತ್ತಾರೆ .ಪ್ರಾರ್ಥನೆಯ ಸಮಯ ಬಂದೇ ಬಿಟ್ಟಿತು, ಯಾರು ಏಳಲಿಲ್ಲ. ಇನ್ನೇನು ಪ್ರಾರ್ಥಿಸುವುದು ? ಯಾರಿಗೆ ಪ್ರಾರ್ಥಿಸುವುದು ? ಯಾರಿಗೂ ಸಹ ಪ್ರಾರ್ಥನೆಯಲ್ಲಿ ಆಸಕ್ತಿಯಿರಲಿಲ್ಲ. ಆದರೆ ಮೇಲೆದ್ದು ಕುಳಿತ ಗುರುಗಳು , ಅದೇ ಅಹೋಭಾವದಲ್ಲಿ ಕೈ ಜೋಡಿಸಿ ಭಗವಂತನಿಗೆ ಕೃತಜ್ಞತೆ ಅರ್ಪಿಸಲು ಆರಂಭಿಸಿದರು. “ನಾನೆಷ್ಟು ಭಾಗ್ಯಶಾಲಿ ಎಂದರೆ ನನ್ನೆಲ್ಲಾ ಅವಶ್ಯಕತೆಗಳು ನೀವು ತಕ್ಷಣದಲ್ಲಿಯೇ ನೆರೆವೇರಿಸುತ್ತಿರುವೆʼ ಎಂದು.

ಇದನ್ನು ನೋಡಿದಶಿಷ್ಯನಿಗೆ ಸಹನೆಯ ಕಟ್ಟೆಯೊಡಿಯಿತು,  “ಈ ಅಸಂಬದ್ಧತೆಯನ್ನುನಿಲ್ಲಿಸಿʼಎಂದನು.ಇದನ್ನುನಾವುಸಾಕಷ್ಟುಬಾರಿ ಕೇಳಿದ್ದೇವೆ.ಈಗ ಇದು ಇಂದು ಸಂಪೂರ್ಣವಾಗಿ ಅಸಂಬದ್ಧವಾಗಿದೆ. ಈ ಮೂರು ದಿನಗಳಿಂದ ಹಸಿವಿನಿಂದ ಕಂಗಾಲಾಗಿದ್ದೇವೆ. ನೆತ್ತಿಯ ಮೇಲೀನ ಆಕಾಶವೇ ಸೂರಾಗಿದೆ, ಈ ನೀರವ ರಾತ್ರಿಯಲ್ಲಿ ಮರುಭೂಮಿಯಲ್ಲಿ ನಿರಾಶ್ರಿತರಾಗಿ ಹೊರಗೆ ಬಿದ್ದಿದ್ದೇವೆ, ಇಂತಹ ಸಂದರ್ಭದಲ್ಲಿ ಯಾವ ಸಂತೋಷಕ್ಕೆ ಕೃತಜ್ಞತೆ ಸಲ್ಲುಸುತ್ತಿದ್ದೀರಿ ?

ಆ ಫಕೀರ ಹೇಳಿದರು ಬಡತನ ಅದು ನನ್ನಇಂದಿನ ಅಗತ್ಯತೆ, ಹಸಿವುನನ್ನ ಇಂದಿನ ಅಗತ್ಯತೆ, ಅದನ್ನು ಅವನು ಪೂರ್ಣಗೊಳಿಸಿದ್ದಾನೆ. ಹೀಗೆ ಊರ ಹೊರಗೆ ನಿರಾಶ್ರಿತನಾಗಿರುವುದುನನ್ನ ಇಂದಿನ ಅಗತ್ಯತೆ, ಊರಿನ ಜನ ನನ್ನನ್ನು ಸ್ವೀಕರಿಸದೆ ಇರುವುದು ನನ್ನ ಇಂದಿನ ಅಗತ್ಯತೆ. ಇವತ್ತು ಈ ಕ್ಷಣ ನಾನು ಅವನಿಗ ಕೃತಜ್ಞತೆ ಸಲ್ಲಿಸದಿದ್ದರೆ, ಮತ್ತೆ ಇಂತಹ ಅವಕಾಶ ಸಿಗುವುದಿಲ್ಲ ನನ್ನೆಲ್ಲಾ ಪ್ರಾರ್ಥನೆಗಳು ನಿರರ್ಥಕ. ನಿಮ್ಮ ಮನಸ್ಸಿಗೆ ಅನಕೂಲವಾಗುವಂತಹ ಏನನ್ನಾದರೂ ನೀಡಿದಾಗ ಅವನಿಗೆ ಕೃತಜ್ಞತೆ ಅರ್ಪಿಸವ ಅಗತ್ಯವಾದರೂ ಏನು ? ಅದೇ ನಿಮ್ಮಮನಸ್ಸಿಗೆ ಸರಿಹೊಂದದ್ದನ್ನು ಅವನು ನಿಮಗೆ ನೀಡಿದಾಗ ಕೃತಜ್ಞತೆಗೆ ಸಲ್ಲಿಸಿದರೆ ಅದಕ್ಕೆ ಅರ್ಥವಿದೆ.

ಅವನು ಏನು ಅನುಗ್ರಹಿಸಿರುವನೋ ಅದು ನನ್ನ ಇಂದಿನ ಅವಶ್ಯಕತೆಯಾಗಿದೆ, ಇಲ್ಲದಿದ್ದರೆ ಏನಕ್ಕೆ ಕೊಡುತ್ತಾನೆ ? ನನ್ನ ಜೀವನದಲ್ಲಿ, ನನ್ನ ಈ ಯಾತ್ರೆಯಲ್ಲಿ, ನನ್ನ ಸಾಧನೆಯಲ್ಲಿ  ಈ ದಿನ ಹೀಗೆ ಹಸಿವಿನಿಂದಿರುವುದು ನನ್ನ ಅಗತ್ಯತೆಯಾಗಿದೆ. ಈ ಹಳ್ಳಿಯ ಜನರ ಅಸ್ವೀಕಾರ, ಹೀಗೆ ಮರೂಭೂಮಿಯಲ್ಲಿ ರಾತ್ರಿ ಚಳಿಗೆ ನಿರಾಶ್ರಿತನಾಗಿರುವುದು… ಇವೆಲ್ಲವೂ ಇಂದಿನ ನನ್ನ ಅಗತ್ಯತೆ ಆಗಿದೆ. ಇಂತಹ ಅಗತ್ಯತೆಯನನ್ನು ಪೂರ್ಣಗೊಳಿಸಿದ್ದಾನೆ ಇದಕ್ಕೆ ಕೃತಜ್ಞತೆ ಸಲ್ಲಿಸುವುದು ನನ್ನ ಕರ್ತವ್ಯ.

ಇಂತಹ ವ್ಯಕ್ತಿ ಮಾತ್ರ ದೈವಿಕತೆಯನ್ನು ಪಡೆಯಬಲ್ಲ. ಆದ್ದರಿಂದ ನೀವು ದುಃಖಿತರಾಗಿದ್ದಾಗ, ಇದು ನಿಮ್ಮ ಅಗತ್ಯ ಎಂದು ಅರ್ಥಮಾಡಿಕೊಳ್ಳಿ. ಇಂದು ದೇವರು ದುಃಖದಲ್ಲಿ ನೃತ್ಯ ಮಾಡಲು ಬಯಸಿದ್ದಾನೆ. ನೃತ್ಯ ನಿಲ್ಲಬಾರದು, ಕೃತಜ್ಞತೆಯೂ ನಿಲ್ಲಬಾರದು, ಸಂಭ್ರಮಾಚರಣೆ ಸದಾ ಜಾರಿಯಲ್ಲಿರಲಿ.

 

Leave a Reply