ಕಾರಣವಿರಲಿ, ಇಲ್ಲದಿರಲಿ, ನಗುತ್ತಿರಿ… ನಗುನಗುತ್ತಲೇ ಇರಿ!

ನಗುವುದಕ್ಕೆ ಕಾರಣ ಹುಡುಕಬೇಡಿˌ ಅಂತಹ ಕಾರಣ ನಿಮಗೆ ಎಂದು ಸಿಗುವುದಿಲ್ಲ. ಸುಮ್ಮನೆ ನಕ್ಕುಬಿಡಿˌ ಬೆಳಗ್ಗಾಗಿದೆ ಎಚ್ಚರವಾಗಿದೆ…ಜೀವಂತವಾಗಿ ಇರುವೆ..ಇದಕ್ಕಿಂತ ಅಚ್ಚರಿˌ ಕಾರಣಬೇಕೆ ನಗಲು…? ಹೀಗೆ ದಿನಪೂರ್ತಿ ಕಾರಣಗಳಿಲ್ಲದೆ ನಗುತ್ತಲೆ ಇರಿ | ಜಯದೇವ ಪೂಜಾರ್

ನಗು ಮನುಷ್ಯನನ್ನು ಹಗುರವಾಗಿಸುತ್ತದೆ. ನಗು ಮತ್ತು ಆಲೋಚನೆ ಎರಡು ಸೇರಿ ಇರಲಾರವು. ನಾವು ನಗುವಾಗ ಯಾವ ಆಲೋಚನೆಗಳಿರದ ಸ್ಥಿತಿಯದು. ಹೀಗಾಗಿ ನಗು ಶುದ್ದವಾದ ಆನಂದದ ಭಾವ. ಆಲೋಚನೆಗಳಿಂದ ಕಲ್ಮಶವಾಗದ ಭಾವ. ನಗುವಾಗ ಮನುಷ್ಯ ಸುಂದರ. ಅವನ ಸೌಂದರ್ಯವೆಲ್ಲ ನಗುವಿನಲ್ಲಿಯೆ ಇದೆ.

ಆದರೇˌ ಇತ್ತೀಚಿನ ನಮ್ಮ ಜೀವನಶೈಲಿಯಲ್ಲಿ ನಗುವೆಂಬುವದು ಅತಿ ದುಬಾರಿ. ನಾವು ನಗುವುದನ್ನ ಮರೆತಿದ್ದೇವೆ. ಹೀಗಾಗಿˌ ನಮ್ಮನ್ನು ನಗಿಸಲು ಗಂಗಾವತಿಯಿಂದ ಪ್ರಾಣೇಶ ಬರಬೇಕು. ಇಲ್ಲವಾದರೇ ನಮಗೆ ನಗು ಬರುವುದಿಲ್ಲ. ನಮ್ಮೊಳಗಿನ ಹಾಸ್ಯಪ್ರಜ್ಞೆ ಸತ್ತು ಹೋಗಿದೆ.

ಹಾಸ್ಯಪ್ರಜ್ಜೆಯಿರುವವನು ಸದಾ ಲವಲವಿಕೆಯಿಂದ ಕೂಡಿರುತ್ತಾನೆ. ತನ್ನ ಸುತ್ತಲಿನ ಪರಿಸರವನ್ನು ಆನಂದದಿಂದ ಇಟ್ಟಿರುತ್ತಾನೆ. ಮನುಷ್ಯನೊಳಗಿನ ಹಾಸ್ಯಪ್ರಜ್ಞೆ ಎಂತಹ ಗಂಭೀರ ಪರಿಸ್ಥಿತಿಯನ್ನು ತಿಳಿಯಾಗಿಸಬಲ್ಲದು. ಎಷ್ಟೇ ಕಷ್ಟದಲ್ಲಿದರೂ ಹಾಸ್ಯಪ್ರಜ್ಞೆಯುಳ್ಳವನು ಯಾವಗಲೂ ಶ್ರೀಮಂತನೇ ಆಗಿರುತ್ತಾನೆ.

ನಮ್ಮ ಸುತ್ತಲಿನ ಗೆಳೆಯರಲ್ಲಿ ಹಾಸ್ಯಪ್ರಜ್ಞೆಯುಳ್ಳವನೆ ನಮಗೆ ಪ್ರೀಯ. ಗಾಂಧೀಜಿಗೆ ಒಮ್ಮೆ ಪತ್ರಕರ್ತರು ಪ್ರಶ್ನೆ ಕೇಳಿದರುˌ ” ನೀವು ಸದಾ ಇಷ್ಟೊಂದು ಉಲ್ಲಾಸಿತರಾಗಿರಲು ಕಾರಣವೇನು?” ಅದಕ್ಕೆ ಗಾಂದೀಜಿ ಹೇಳಿದ್ದು ” ನನ್ನೊಳಗಿರುವ ಹಾಸ್ಯಪ್ರಜ್ಞೆ..”

ಗಾಂಧಿ ಬಹಳ ಹಾಸ್ಯಪ್ರಜ್ಞೆಯುಳ್ಳವರಾಗಿದ್ದರು. ಹೀಗಾಗಿ ಅವರು ಎಲ್ಲರಿಗೂ ಪ್ರೀಯವಾಗಿದ್ದರು. ಅವರ ವೈರಿಗಳು ಕೂಡ ಗಾಂಧಿ ಏದುರಿಗೆ ಅವರ ಹಾಸ್ಯಪ್ರಜ್ಞೆಯಿಂದ ಅವರನ್ನು ಅಷ್ಟೊಂದು ದ್ವೇಷಿಸಲು ಸಾಧ್ಯವಾಗುತ್ತಿರಲಿಲ್ಲ. ಬ್ರೀಟಿಷರು ಗಾಂಧಿಯೊಂದಿಗೆ ಮಾತುಕತೆಗೆ ಸದಾ ಸಿದ್ದವಾಗಿರುತ್ತಿದ್ದರು ಎಂದರೇˌ ಗಾಂಧಿ ಯಾವುದೇ ವಿಷಯವನ್ನು ಗಂಭೀರತೆಗೆ ಒಯ್ಯುತ್ತಿರಲಿಲ್ಲ. ಜಗಳ ˌ ಕದನಗಳನ್ನು ಅವರು ಸುಲಭವಾಗಿ ತಮ್ಮೊಳಗಿನ ಹಾಸ್ಯಪ್ರಜ್ಞೆಯಿಂದ ತಿಳಿಗೊಳಿಸಿ ಬೀಡುತ್ತಿದ್ದರು.

ಇದಕ್ಕಾಗಿ ಮನುಷ್ಯ ಸದಾ ಕಾಲ ತನ್ನೊಳಗೆಯೊಂದು ಮಗುವಿನಂತ ಹಾಸ್ಯ ಪ್ರಜ್ಞೆಯನ್ನು ಜೀವಂತವಾಗಿರಸಿಕೊಂಡಿರಬೇಕು. ಸದಾ ನಗುತ್ತಿರಲು ಹೀಗೆ ಮಾಡಿ ನೋಡಿ; ಬೆಳಗೆ ಎದ್ದ ತಕ್ಪಣ ಸುಮ್ಮನೆ ಐದು ನಿಮಿಷ ನಕ್ಕುಬಿಡಿ!

ನಗುವುದಕ್ಕೆ ಕಾರಣ ಹುಡುಕಬೇಡಿˌ ಅಂತಹ ಕಾರಣ ನಿಮಗೆ ಎಂದು ಸಿಗುವುದಿಲ್ಲ. ಸುಮ್ಮನೆ ನಕ್ಕುಬಿಡಿˌ ಬೆಳಗ್ಗಾಗಿದೆ ಎಚ್ಚರವಾಗಿದೆ…ಜೀವಂತವಾಗಿ ಇರುವೆ..ಇದಕ್ಕಿಂತ ಅಚ್ಚರಿˌ ಕಾರಣಬೇಕೆ ನಗಲು…? ಹೀಗೆ ದಿನಪೂರ್ತಿ ಕಾರಣಗಳಿಲ್ಲದೆ ನಗುತ್ತಲೆ ಇರಿ. ನೆನಪಾದಾಗಲೇಲ್ಲ ಅಥವ ಸಮಯ ಸಿಕ್ಕಾಗˌ ಬಿಡುವನಲ್ಲಿ ನಿಮ್ಮ ಮನಸ್ಸನ್ನ ಒಂದ ನಿಮಿಷ ನಿಲ್ಲಿಸಿˌ ಏನೂ ಮಾಡುತ್ತಿದ್ದೆ ˌ ಏನೂ ಆಲೋಚಿಸುತ್ತಿದ್ದೆ ಎಂದು ಅವಲೋಕಿಸಿ…ಮನಸ್ಸಿನ ಹುಚ್ಚಾಟ ತಿಳಿಯುವದು. ಆಗ ಆ ಹುಚ್ಚಾಟ ನೋಡಿ ನಕ್ಕು ಬಿಡಿ.

ನೀವು ಕೆಲಸದಲ್ಲಿ ಇರುವಿರಿˌ ಬೇಸರವಾಯಿತೇ?ˌ ಕೆಲಸ ನಿಲ್ಲಿಸಿ…ಒಂದೆರಡು ನಿಮಿಷ ನಕ್ಕುಬಿಡಿˌ ಹೀಗೆ ನಡೆಯುವಾಗˌ ಕೆಲಸ ಮಾಡುವಾಗˌ ಊಟ ಮಾಡುವಾಗˌ ಅಡುಗೆ ಮಾಡುವಾಗ… ಮಧ್ಯ ಮಧ್ಯ ಒಂದೇರಡು ನಿಮಿಷ ವಿರಾಮ ತಗೆದುಕೊಂಡು ನಕ್ಕುಬಿಡಿ… ಜೋರಾಗಿ ನಗಲು ಮುಜುಗುರವೆ? ನಿಮ್ಮ ಸುತ್ತಲು ಒಮ್ಮೆ ನೋಡಿˌ ಯಾರಿಲ್ಲವಾದ್ರೆ ಯಾವ ಮಜುಗುರವಿಲ್ಲದೆ ಜೋರಾಗಿ ನಗಿˌ ಯಾರಾದ್ರು ಸುತ್ತಲು ಇದ್ದರೆ ಮನದ ಒಳಗಡೆ ನಗುತ್ತ ಇರಿ.

ಇದೇ ಆನಂದದ ರಸಾಯನ. ಈ ರಸಾಯನವೆ ಆಧ್ಯಾತ್ಮ. ನಮ್ಮೊಳಗಿನ ಅದ್ಬುತವಾದ ಭಾವವೇ ಹಾಸ್ಯ. ಅದನ್ನು ಹರಿಯಲು ಬಿಡಿ. ಪ್ರತಿ ನಗುವಿನಲ್ಲಿಯು ಮಗುವಿದೆ. ಆ ಮಗುವಿನಲ್ಲಿ ಮುಗ್ದತೆಯಿದೆ. ಆ ಮುಗ್ದತೆಯ ಭಾವದಲ್ಲಿ ದೈವಿಕತೆಯಿದೆ… ನಗುವೊಂದೆ ಸಕಲ ರೋಗಗಳಿಗೂ ಇರುವ ದಿವ್ಯಾಔಷಧಿ.. ಸದಾ ನಗು ನಗುತ್ತಲೆ ಇರಿ.

Leave a Reply