ಈ ವರ್ತಮಾನ ಮತ್ತೆಲ್ಲೋ ಇಲ್ಲ. ಅದು ಎಲ್ಲೆಡೆಯಲ್ಲೂ ಇದೆ. ನೀನು ಚಲಿಸದೆ ಶಾಂತವಾಗಿ ಕುಳಿತಿದ್ದರೆ ಸಾಕು, ಅದನ್ನು ನೀನು ಪಡೆಯುವೆ. ಹಾಗೆ ವರ್ತಮಾನದ ಅರಿವು ಪಡೆಯಲು ಶಾಂತವಾಗಿ ಕುಳಿತುಕೊಳ್ಳುವುದೇ ಧ್ಯಾನ.
ವರ್ತಮಾನದಲ್ಲಿ ಜೀವಿಸು; ಅಷ್ಟು ಸಾಕು.
ಮತ್ತು ವರ್ತಮಾನದಲ್ಲಿ ನಿನ್ನ ಇರುವು ನಿನಗೆ ದಕ್ಕುವುದು.
ವರ್ತಮಾನದಲ್ಲಿ ನೀನು ಏನಾಗಿದ್ದೀಯೋ ಅದನ್ನು ಕಂಡುಕೊಳ್ಳುವೆ.
ಮತ್ತು,
ನೀನು ಏನಾಗಿದ್ದೀಯೆಂದು ಯೋಚಿಸುತ್ತಿದ್ದೆಯೋ, ಊಹಿಸುತ್ತಿದ್ದೆಯೋ, ಅನುಭವಿಸುತ್ತಿದ್ದೆಯೋ, ಬಲ್ಲೆನೆಂದು ಚಿತ್ರಿಸಿಕೊಂಡಿದ್ದೆಯೋ, ಅವು ಯಾವುದೂ ಅಲ್ಲವೆಂದು ನೀನು ಅರಿಯುಕೊಳ್ಳುವೆ.
ಈ ವರ್ತಮಾನ ಮತ್ತೆಲ್ಲೋ ಇಲ್ಲ. ಅದು ಎಲ್ಲೆಡೆಯಲ್ಲೂ ಇದೆ.
ನೀನು ಚಲಿಸದೆ ಶಾಂತವಾಗಿ ಕುಳಿತಿದ್ದರೆ ಸಾಕು,
ಅದನ್ನು ನೀನು ಪಡೆಯುವೆ.
ಹಾಗೆ ವರ್ತಮಾನದ ಅರಿವು ಪಡೆಯಲು ಶಾಂತವಾಗಿ ಕುಳಿತುಕೊಳ್ಳುವುದೇ ಧ್ಯಾನ.
ಪ್ರಜ್ಞೆ ಅನ್ನುವುದು ಅದೆಂಥಾ ಸತ್ವಶಾಲಿ ತತ್ತ್ವವೆಂದರೆ, ಅದು ಸದಾ ಶಕ್ತಿಸ್ರೋತವಾಗಿ ಪ್ರವಹಿಸುತ್ತಲೇ ಇರುತ್ತದೆ. ಅದು ನಿಲುಗಡೆ ಎಂಬುದನ್ನು ಅರಿಯದು.
ಆದರೆ ಒಮ್ಮೆ ಅದು ಹಿಂದಿರುಗಿ ನೋಡಿದರೆ, ಅಚ್ಚರಿಯೆಂಬಂತೆ ನಿಶ್ಚಲಗೊಳ್ಳುವುದು.
ಪ್ರಜ್ಞೆಯು ತನ್ನ ಪ್ರಜ್ಞೆಯನ್ನು ಕಂಡುಕೊಂಡಾಗ ಅದು ಅಚಲವಾಗುವುದು.
ಆ ನಿಶ್ಚಲತೆಯೇ ಶಾಂತಿ.
ಅದುವೇ ಸೌಹಾರ್ದ.
ಅದುವೇ ಸಂತಸ,
ಅದುವೇ ಮೋಕ್ಷ
ಮತ್ತು
ಅದುವೇ ಜಾಗೃತಿ