ಬುದ್ಧ ಅನುಸತಿ : ಹಾಗೆಂದರೇನು?

ಬೌದ್ಧರಲ್ಲಿ 40 ಬಗೆಯ ಧ್ಯಾನಗಳಿವೆ, ಅವರವರ ಪ್ರಚ್ಚನ್ನತೆಗೆ ತಕ್ಕಂತೆ ಧ್ಯಾನ ಮಾರ್ಗಗಳಿವೆ. ಅವುಗಳಲ್ಲಿ 10 ಬಗೆಯ ಅನುಸ್ಮೃತಿ ಇದೆ. (ಚಿಂತನೆ). ಅದರಲ್ಲಿ ಮೊದಲನೆಯದೇ ಬುದ್ಧಾನುಸತಿ. ಇದು ಭಾವುಕರಿಗೆ, ಶುದ್ಧ ಭಕ್ತಿಯುಳ್ಳವರಿಗೆ ಸಹಕಾರಿಯಾಗಿದೆ । ಅನೀಶ್ ಬೋಧ್

“ಒಂದು ಅದ್ವಿತೀಯ ಜೀವಿ, ಒಬ್ಬ ಅಸಮಾನ್ಯ ಮಾನವರು ಈ ಜಗತ್ತಿನಲ್ಲಿ ಉದಯಿಸುತ್ತಾರೆ. ಅವರು ಜಗತ್ತಿನ ಸರ್ವಹಿತಕ್ಕಾಗಿ ಸರ್ವರ ಸುಖಕ್ಕಾಗಿ, ಜಗತ್ತಿನ ಮೇಲಿರುವ ಅನುಕಂಪದಿಂದಾಗಿ ಉದಯಿಸುವರು. ಒಳ್ಳೆಯದಕ್ಕಾಗಿ ದೇವ, ಮನುಷ್ಯರ ಹಿತಸುಖಕ್ಕಾಗಿ ಹುಟ್ಟುವಂತಹ ಆ ಅದ್ವಿತೀಯ ಜೀವಿ ಯಾರು?”

” ಅವರೇ ತಥಾಗತರು, ಅರಹಂತರೂ, ಆಗಿರುವಂತಹ ಸಮ್ಮ ಸಂಬುದ್ಧರು.”

ಬೌದ್ಧರಲ್ಲಿ 40 ಬಗೆಯ ಧ್ಯಾನಗಳಿವೆ, ಅವರವರ ಪ್ರಚ್ಚನ್ನತೆಗೆ ತಕ್ಕಂತೆ ಧ್ಯಾನ ಮಾರ್ಗಗಳಿವೆ. ಅವುಗಳಲ್ಲಿ 10 ಬಗೆಯ ಅನುಸ್ಮೃತಿ ಇದೆ. (ಚಿಂತನೆ). ಅದರಲ್ಲಿ ಮೊದಲನೆಯದೇ ಬುದ್ಧಾನುಸತಿ. ಇದು ಭಾವುಕರಿಗೆ, ಶುದ್ಧ ಭಕ್ತಿಯುಳ್ಳವರಿಗೆ ಸಹಕಾರಿಯಾಗಿದೆ.

ಬೌದ್ಧರಲ್ಲಿ ಭಕ್ತಿಯು ಸಹ ಜ್ಞಾನ ಮಿಶ್ರಿತವಾಗಿದೆ. ಬುದ್ಧರಂತೂ ಎಂದಿಗೂ ತಮ್ಮನ್ನು ಪೂಜಿಸಿ ಎಂದು ಹೇಳಿಲ್ಲ. ಅವರಲ್ಲಿ ಅಂತಹ, ಸ್ವಾರ್ಥ ಇರಲಿಲ್ಲ. ಬೌದ್ಧರ ಬುದ್ಧ ಧ್ಯಾನವು ಅಂಧವಿಶ್ವಾಸ ಮೂಡಿಸದೆ ನಿಬ್ಬಾಣಕ್ಕೆ ಸಹಕಾರಿಯಾಗಿದೆ. ಒಮ್ಮೆ ವಕ್ಕಲಿ ಎಂಬ ಭಿಕ್ಷು ಬುದ್ಧರ ಬಾಹ್ಯ ಸೌಂದರ್ಯಕ್ಕೆ ಮನಸೋತು ಅವರ ವಿನಹ ಕ್ಷಣಕ್ಷಣವೂ ಪರಿತಪಿಸುತ್ತಿದ್ದ ಕೊನೆಗೆ ಅವರನ್ನು ಕಾಣಲು ಆತ್ಮಹತ್ಯೆಗೂ ಸಿದ್ಧನಾಗಿದ್ದ. ಆಗ ಭಗವಾನರು ಪ್ರತ್ಯಕ್ಷರಾಗಿ ಆತನಿಗೆ ಹೀಗೆ ಹೇಳಿದರು ಓ ವಕ್ಕಲಿ, ಈ ಅಸಹ್ಯಕಾರಿಯಾದ ದೇಹವನ್ನು ನೋಡುವುದರಿಂದ ಏನು ಪ್ರಯೋಜನ? ಯಾರು ಧಮ್ಮವನ್ನು ಕಾಣುವರೋ ಅವರು ಬುದ್ಧರನ್ನು ಕಾಣುತ್ತಾರೆ. ಯಾರು ಬುದ್ಧರನ್ನು ಕಾಣುತ್ತಾರೋ ಅವರು ಧಮ್ಮವನ್ನು ಕಾಣುತ್ತಾರೆ.
ಆದ್ದರಿಂದ ವಕ್ಕಲಿ ಧಮ್ಮವನ್ನು ಅರಿತರೆ, ನನ್ನನ್ನು ಕಂಡಂತೆಯೇ ನನ್ನನ್ನು ನೋಡಿದರೆ ಧಮ್ಮವನ್ನು ನೋಡಿದಂತೆ ಎಂದು ತಿದ್ದುತ್ತಾರೆ. ಅದರಂತೆಯೇ ಬೌದ್ಧರಲ್ಲಿ ಬುದ್ಧರ ನಾಮಾಜಪಕ್ಕಿಂತ, ಬುದ್ಧರ ಅನುಪಮ ಸೌಂದರ್ಯ ರೂಪ ಕಲ್ಪನೆಯ ಧ್ಯಾನಕ್ಕಿಂತ ಹೆಚ್ಚು ಮಹತ್ವ ಅವರ ಮಹಾನ್ ಮನಸ್ಸು ಅರಿಯಲು ಒತ್ತುಕೂಡುತ್ತಾರೆ. ಏಕೆಂದರೆ ಮನಸ್ಸು ಅವರ ಅನುಪಮ, ಸದ್ಗುಣ ಒಳಗೊಂಡಿದೆ. ಅವರ ಅಪಾರ ಅನುಕಂಪಶೀಲತೆ ಹಾಗೂ ಅನುಪಮ ಜ್ಞಾನವನ್ನು ಒಳಗೊಂಡಿದೆ. ಮುಂದೆ ಬುದ್ಧರ ಸ್ವರೂಪವಾದ ನಿಬ್ಬಾಣವನ್ನು ಧ್ಯಾನಿಸಬಹುದು.
ಸಾಧಕ ಮೊದಲು ನಿಶಬ್ಬ ನಿರ್ಜನ ವಾತಾವರಣದಲ್ಲಿ ಪದ್ಮ ಅಥವಾ ಸುಖಾಸನದಲ್ಲಿ ಆಸೀನನಾಗಿ ಬೆನ್ನು ಕತ್ತು ನೇರವಾಗಿಸಿ, ಭಗವಾನರ ಒಂದೊಂದು ಗುಣವನ್ನು ಭಗವಾನರು ಹೀಗಿದ್ದರು… ಆದ್ದರಿಂದ ಅವರಿಗೆ ಹೀಗೆ ಕರೆಯುತ್ತಾರೆ ಎಂದು ನಿರಂತರ ಧ್ಯಾನಿಸುತ್ತಾರೆ. ಹೇಗೆಂದರೆ ಭಗವಾನರು ಹೀಗಿರುವರು, ಅವರು ಅರಹಂತರು, ಸಮ್ಮ ಸಂಬುದ್ಧರು ವಿಜ್ಜಾಚರಣ ಸಂಪನ್ನರು, ಸುಗತರು, ಅನುತ್ತರ ಪುರುಷ ದಮ್ಮಸಾರಥಿ, ದೇವ ಮನುಷ್ಯರಿಗೆ ಗುರುವು ಹಾಗೂ ಭಗವಾನರಾಗಿದ್ದಾರೆ.
ಈಗ ವಿವರಗಳೊಂದಿಗೆ :

1. ಅರಹಂತರು :
(ಮುನಿವರ್ಯರು) ಕಲ್ಮಶಗಳಿಂದ ದೂರವಾಗಿದ್ದಾರೆ. ಅರ ಅರಿ, (ಶತ್ರು)ಗಳನ್ನು ಹತಮಾಡಿದ್ದಾರೆ.
ಭವ ಚಕ್ರದ ಅರಗಳನ್ನು (ಕಡ್ಡಿ) ನಾಶ ಮಾಡಿದ್ದಾರೆ.
ದಾನ ಆತಿಥ್ಯಕ್ಕೆ ಅರ್ಹರಾಗಿದ್ದಾರೆ.
ರಹಸ್ಯವಾಗಿಯೂ ಯಾವ ಪಾಪಮಾಡದೆ ಇದ್ದಾರೆ.
ಅದರಿಂದ ಅವರು ಅರಹಂತರು.
ಹೇಗೆ ಕಮಲವೂ ಸುಂದರವೂ, ಸುಗಂಧಿತವು ಆಗಿದ್ದು, ನೀರಿನಲ್ಲಿದ್ದು ಅದಕ್ಕೆ ಅಂಟಿಕೊಳ್ಳದೇ ಇರುವುದೋ ಹಾಗೆಯೇ ಅರಹಂತರು ರಾಗದ್ದೇಶ: ಮೋಹ, ದುಃಖ, ಅಹಂ ಮತ್ತು ಜನ್ಮಗಳಿಂದ ಮುಕ್ತರಾಗಿರುತ್ತಾರೆ.

2. ಸಮ್ಮಸಂಬುದ್ಧರು :
ಅವರು ಎಲ್ಲವನ್ನು (ಸಮ್ಮ) ತಾವೇ (ಸಂ)ಪೂರ್ಣವಾಗಿ ಸಂಶೋದಿಸಿ ಅರಿತಿದ್ದರೆ (ಸಂಬುದ್ಧ) ಹೇಗೆಂದರೆ:
ಯಾವುದನ್ನು ನೇರವಾಗಿ ಅರಿಯಬಹುದು, ಅವೆಲ್ಲಾ ಅರಿತಿದ್ದಾಗಿದೆ. ಯಾವುದನ್ನು ಪೂರ್ಣಗೊಳಿಸಬೇಕು, ಅದನ್ನು ಪರಿಪೂರ್ಣಗೊಳಿಸಿದ್ದಾಗಿದೆ. ಮತ್ತು ಯಾವುದನ್ನು ತ್ಯಜಿಸಬೇಕು ಅದನ್ನು ತ್ಯಜಿಸಲಾಗಿದೆ. ಆದ್ದರಿಂದ ನಾನು ಬುದ್ಧ ಎಂದು ಒಮ್ಮೆ ಹೇಳಿದ್ದಾರೆ. ಅವರ ಸಂಬೋಧಿಗೆ ಆಚಾರ್ಯರು ಯಾರು ಇಲ್ಲ. ತಾವೇ ತಮ್ಮ ತೀಕ್ಷ್ಣ ಪ್ರಜ್ಞಾಶೀಲತೆಯಿಂದ ಅರಿತಿದ್ದರು. ಅವರನ್ನು ಸಬ್ಬನ್ಯೂ, ಸರ್ವಜ್ಞ ಎಂದು ಕರೆಯುತ್ತಾರೆ. ಅವರ ಇಡೀ ಜೀವನ ಆಶ್ಚರ್ಯಪ್ರಾಯವಾಗಿದೆ. ಅವರು ಅಸಮಾನರು ಹೋಲಿಕೆಗೆ ನಿಲುಕದವರು, ಆಗಿದ್ದಾರೆ. ಅಸಮಾನ ಭಿಕ್ಷುವಂತರು, ಮಹಾನ್ ಜ್ಞಾನದ ಬೆಳಕನ್ನು ಹೊಂದಿದ್ದ ದಿವ್ಯತೇಜಸ್ವಿಗಳಾಗಿದ್ದಾರೆ. ಪರಹಿತಕ್ಕಾಗಿ ಕೋಟ್ಯಾಂತರ ಜನ್ಮ ಪಡೆಯುತ್ತಾ ಸದಾ ಧ್ಯಾನದಲ್ಲಿ ತಲ್ಲೀನರಾಗಿದ್ದು, ಶೀಲದ ಸುಂಗಧ ಹರಡುತ್ತಾ, ಪರರಿಗೆ ತ್ಯಾಗ ಮಾಡುತ್ತಾ ಪರರಿಗೋಸ್ಕರ ನಿರಂತರ ಕಠಿಣ ಪರಿಶ್ರಮಪಡುತ್ತಾ, ಸರ್ವರ ತಪ್ಪುಗಳನ್ನು ಸಹಿಸಿ ಕ್ಷಮಾಶೀಲರಾಗಿ, ನುಡಿದಂತೆ ನಡೆದು, ನಡೆದಂತೆ ನುಡಿಯುವ ತಥಾಗತರಾಗಿ, ವಜ್ರಕ್ಕಿಂತಲೂ ದೃಢವಾದ ನಿಧರ್ಾರವನ್ನು ಸಿದ್ಧಿಸಿ, ಪರಮಶಾಂತತೆಯನ್ನು ಪ್ರಾಪ್ತಿಮಾಡಿ, ಹೀಗೆ ಪಾರಮಿಗಳನ್ನು ಪೂರ್ಣಗೊಳಿಸಿ, ಪ್ರಜ್ಞಾ ಮತ್ತು ಕರುಣೆಯ ಸಂಗಮದ ಸಾಕ್ಷಾತ್ ಜ್ಞಾನದಯ ಸಾಗರ ಆಗಿದ್ದಾರೆ.
ಅವರು ಅನೇಕ ಬಗೆಯ ದಿವ್ಯ ಜ್ಞಾನಗಳಲ್ಲಿ ಹೊಂದಿದ್ದರು. ಅವರ ಜ್ಞಾನ ಅಗಾಧವಾಗಿತ್ತು. ಸೀಮಾತೀತವಾಗಿತ್ತು. ಮಾನಸಿಕವಾಗಿ ಬಲಿಷ್ಠತೆ, ಪ್ರಬುತ್ವತೆ ಸಾಧಿಸಿ, ಮಹಾಬಲದಾರಿಗಳಾಗಿದ್ದರು. ಆದ್ದರಿಂದ ಅವರನ್ನು ನಮ್ಮ ಸಂಬುದ್ಧರೆನ್ನುತ್ತಾರೆ. ಅವರು ತಮ್ಮ ಜ್ಞಾನವನ್ನು ಸರ್ವರಲ್ಲಿ ಹರಡಿ ಸರ್ವರನ್ನು ದುಃಖ ವಿಮುಕ್ತರು, ಜನ್ಮರಹಿತರನ್ನಾಗಿ ಮಾಡಿದ್ದಾರೆ.

3. ವಿಜ್ಜಾಚರಣ ಸಂಪನ್ನರು :
ಜ್ಞಾನದಯೆ ಸಂಗಮರಾಗಿದ್ದ ಅವರಿಗೆ ವಿಜ್ಜಾಚರಣ ಸಂಪನ್ನ ಎನ್ನುತ್ತಾರೆ. ಅವರ ಜ್ಞಾನವು ಬೋಧಿಯಾಗಿ, ಅವರ ಕರುಣೆಯು ಶೀಲವಾಗಿ, ಸೇವೆಯಾಗಿ ಪರಿವತರ್ಿತವಾಗಿವೆ. ಅವರಲ್ಲಿದ್ದ ವಿದ್ಯೆ ಯಾವುದೆಂದರೇ?
1. ಮಹಾನ್ 4 ಆರ್ಯಸತ್ಯಗಳು 2. ಪಟಿಚ್ಚ ಸಮಪ್ಪಾದ 3. ಅನಿತ್ಯ 4. ಅನಾತ್ಮ 5. ಅನಿಶ್ವೀರವಾದ 6. ಅಶುಭ 7. ಕರ್ಮಫಲ ಸಿದ್ಧಾಂತ 8. ಮನಸ್ಸಿನ ವಿಶ್ಲೇಷಣೆ 9. ಅದ್ಭುತ ಮಾನಸಿಕ ಶಕ್ತಿಗಳ ಜ್ಞಾನ 10. ಪೂರ್ವಪುನಃ ಜನ್ಮಸಿದ್ಧಾಂತ 11. ಮಧ್ಯಮ ಮಾರ್ಗ ಇತ್ಯಾದಿ…
ಅವರಲ್ಲಿದ್ದ ಶೀಲಾಚರಣೆ ಹೇಗಿತ್ತೆಂದರೆ :
1. ದಶಶೀಲ 2. ಇಂದ್ರಿಯ ಸಂಯಮ 3. ಮಿತಹಾರ 4. ಪ್ರಸನ್ನಚಿತ್ತತೆ 5. ಪಾಪಲಜ್ಜೆ 6. ಪಾಪಭಯ 7. ಶ್ರದ್ಧೆ 8. ಜ್ಞಾನದ ಅನ್ವೇಷಣೆ 9. ಎಚ್ಚರಿಕೆ 10. ಪ್ರಯತ್ನಶೀಲತೆ 11. ಸಮಾಧಿ 12. ಕ್ಷಮಾಶೀಲತೆ 13. ಸಹನೆ 14. ಮೈತ್ರಿ 14. ಮುದಿತ 15. ಅನುಕಂಪ 16. ಶಾಂತಚಿತ್ತತೆ 17. ದೃಢನಿಧರ್ಾರ ಇತ್ಯಾದಿ.

4. ಸುಗತರು (ಸುಶ್ರೇಷ್ಠರು)

ಪುರುಷ ಶ್ರೇಷ್ಠರನ್ನು ಕಾಣುವುದು ದುರ್ಲಬ…
ಬುದ್ಧರ ಹುಟ್ಟುವಿಕೆ ಮಂಗಳಕರ…
ಬುದ್ಧರ ದರ್ಶನ ದುರ್ಲಭ…
ಅವರು ಹಗಲು ರಾತ್ರಿ, ತಮ್ಮ ದಿವ್ಯ ತೇಜಸ್ಸಿನಿಂದ ಪ್ರಕಾಶಿಸುತ್ತಾರೆ.
ಅವರು ವಿಜಯಿ, ಸರ್ವದಶರ್ಿಗಳು, ಬಂಧನರಹಿತರು, ಅಸಮಾನರು, ಆಗಿದ್ದಾರೆ. ಹಿಂದೆ ಅವರಂತಹರವರು ಇರಲಿಲ್ಲ. ಅವರಂತೆ ಯಾರೂ ಜೀವಿಸಿಲ್ಲ. ಅವರು ಪರಮಶ್ರೇಷ್ಠರು, ಪರಮಶಾಂತರು, ಸರ್ವಸಿದ್ಧರು. ನಿಬ್ಬಾಣ ಸ್ವಪ್ರಾಪ್ತರು, ಶ್ರೇಷ್ಠರಲ್ಲಿ ಶ್ರೇಷ್ಠರು, ಮುಕ್ತರಲ್ಲಿ ಮುಕ್ತರು, ಅರಹಂತದಲ್ಲಿ ಅರಹಂತರು ಆಗಿದ್ದಾರೆ.
ಅವರು ಶೋಭನರಾಯರವಾಗಿ ಗಮನಿಸಿದ್ದಾರೆ (ಹೋಗಿದ್ದಾರೆ) ಸುಂದರ (ನಿಬ್ಬಾಣ) ಸ್ಥಾನವನ್ನು ಗಮ್ಮಿಸಿದ್ದಾರೆ (ಹೋಗಿ ಮುಟ್ಟಿದ್ದಾರೆ) ಸ್ವನಿಮರ್ಿತ ಸಮ್ಯಕ ಹಾದಿಯಲ್ಲಿ ಗತರಾಗಿದ್ದಾರೆ (ನಡೆದಿದ್ದಾರೆ) ಮತ್ತು ಸುಶ್ರೇಷ್ಟ ಸಮ್ಯಕ್ನ್ನು ಬೋಧಿಸಿದ್ದಾರೆ. ಆದ್ದರಿಂದ ಅವರನ್ನು ಸುಗತ ಎನ್ನುತ್ತಾರೆ.
5.ಲೋಕವಿದೂ
ಅವರು ತಮ್ಮ ದಿವ್ಯಚಕ್ಷುವಿನಿಂದ ಸರ್ವಲೋಕಗಳನ್ನು ಅರಿತಿದ್ದಾರೆ. ಸಶರೀರರಾಗಿ ಲೋಕಗಳನ್ನು ಸಂಚರಿಸಿದ್ದಾರೆ. ಪಾಪಿಗಳ ದುರ್ಗತಿ, ಶೀಲವಂತರ ಸುಗತಿ, ದಾನಿಗಳ ಸ್ವರ್ಗ, ಧ್ಯಾನಿಗಳ ಬ್ರಹ್ಮಲೋಕ, ಜ್ಞಾನಿಗಳ ನಿಬ್ಬಾಣ ಎಲ್ಲವನ್ನು ಕಾರಣ ಪರಿಹಾರ ಸಮೇತ ವಿವರಿಸಿದ್ದಾರೆ.
ಆದ್ದರಿಂದ ಅಂತಹ ನಿಬ್ಬಾಣ ಮಾರ್ಗದರ್ಶಕರನ್ನು ಲೋಕವಿದೂ ಎನ್ನುತ್ತಾರೆ.

6. ಅನುತ್ತರ ಪುರುಷದಮ್ಮ ಸಾರಥಿ 

ಬುದ್ಧರನ್ನು ಯಾರೊಂದಿಗೂ ಹೋಲಿಸಲು ಅಸಾಧ್ಯ. ಏಕೆಂದರೆ ಶೀಲದಲ್ಲಾಗಲೀ, ಸಮಾಧಿಯಲ್ಲಾಗಲೀ, ಪ್ರಜ್ಞಯಲ್ಲಾಗಲೀ, ಅಭಿಜ್ಞಾದಲ್ಲಾ ಗಲೀ, ಸತ್ಯನಿಷ್ಟತೆಯಲ್ಲಾಗಲೀ, ಮಹಾಕರುಣೆಯಲ್ಲಿ ಆಗಲೀ, ವಿಮುಕ್ತಿಯಲ್ಲಾ ಗಲೀ ಯಾವುದರಲ್ಲೆ ಆಗಲೀ ಯಾರು ಅವರ ಸಮಾನ ಇಲ್ಲ. ಕೇವಲ ಮತ್ತೊಬ್ಬ ಬುದ್ಧರು ಮಾತ್ರ ಬುದ್ಧರಿಗೆ ಸಮಾನರು. ಅನ್ಯ ಯಾವ ಮಾನವ, ದೇವ, ಬ್ರಹ್ಮ, ಯಾರೇ ಆಗಲಿ, ಬುದ್ಧರಂತಹ ಪರಿಶುದ್ಧರು ಪರಿಪೂರ್ಣರಿಲ್ಲ.
ಆದ್ದರಿಂದ ಅವರಿಗೆ ಅನುತ್ತರರು ಎನ್ನುತ್ತೇವೆ. ಬುದ್ಧರು ತಮ್ಮ ಸುಬೋಧನೆಯಿಂದ ಮಾನವರಿಗೆ ದಮಿಸುತ್ತಿದ್ದರು. (ನಿಗ್ರಹಿಸುತ್ತಿದ್ದರು, ಶಾಂತಗೊಳಿಸುತ್ತಿದ್ದರು). ಧಮಿಸಲ್ಪಟ್ಟವರು ಇನ್ನಷ್ಟು ಧಮಿಸಿ ಪೂರ್ಣ ಶಾಂತರಾಗಿ ವಿಕಾರರಹಿತರಾಗುತ್ತಿದ್ದರು. ಅದರ ಬೋಧನೆ ಕೇಳುತ್ತಿದ್ದಂತೆಯೇ ಅವರ ರಾಗ, ದ್ವೇಷ, ಮೋಹಗಳು, ಕಳಚಿ ಬೀಳುತ್ತಿದ್ದವು. ಆದ್ದರಿಂದ ಅವರನ್ನು ಅನುತ್ತರ ಪುರಿಸದಮ್ಮ ಸಾರಥಿ ಎಂದು ಕರೆಯುತ್ತಾರೆ.

7. ಶಾಸ್ತ ದೇವ ಮನುಷ್ಯನಂ 
ಅವರು ನಿಬ್ಬಾಣದ ದಾತರು, ಶ್ರೇಷ್ಠ ಧರ್ಮದ ಜ್ಞಾತರು, ಶ್ರೇಷ್ಠ ಆರ್ಯ ಅಷ್ಟಾಂಗ ಮಾರ್ಗದ ನಿದರ್ೆಶಕರು, ಲೋಕೋತ್ತರ ಮಾರ್ಗದ ಮಾರ್ಗದಶರ್ಿಗಳು ಸರ್ವವನ್ನು ತಾವೇ ಅರಿತಂತಹವರು. ಅವರಂತಹ ಶಾಸ್ತ ಬೇರಿಲ್ಲ. ಅವರಂತಹ ಮಹಾನ್ ಆಚಾರ್ಯರು ಬೇರಿಲ್ಲ. ಏಕೆಂದರೆ ಅವರು ಮಹಾ ಅನುಕಂಪ ಸಂಪನ್ನರು, ಮೃದುಭಾಷೆಯವರು, ಸುಮಧುರ ಕಂಠಸ್ಥರು ಬೇರೆ ಇಲ್ಲ. ಯಾರಿಗೆ ಯಾವ ಬೋಧನೆ ಎಷ್ಟು ಯಾವ ರೀತಿಯಲ್ಲಿ ಹೇಳಿದರೆ ಅದು ಫಲಕ್ಕಾಗಿ ಎಂದು ಸ್ಪಷ್ಟವಾಗಿ ತಿಳಿದಿದ್ದರು. ಅದರಂತೆಯೇ ಅವರು ಮುಕ್ತಗೊಳಿಸುತ್ತಿದ್ದರು. ಅವರು ಅಸಮಾನ್ಯ ಭವವೈದ್ಯರು ಆಗಿದ್ದರು. ಸರ್ವಲೋಕಗಳ ಬಗ್ಗೆ ಮತ್ತು ಲೋಕೋತ್ತರದ ಬಗ್ಗೆ ಶ್ರೇಷ್ಠ ಪರಿಣಿತ ರಾಗಿದ್ದರು. ಅವರು ಸತ್ಯವನ್ನು ಗುರಿಗಮನವಿರಿಸಿ ಪರರಿಗೆ, ಪ್ರಿಯವಾಗಿ ಒಪ್ಪುವಂತೆ ಸರಿಯದ ಕಾಲದಲ್ಲಿ ಹಿತವಾಗುವಂತೆ ಬೋಧಿಸುತ್ತಿದ್ದರು.

ಅವರು ಮಹಾನ್, ಸಂತ್ವಾನಕಾರರು ಆಗಿದ್ದರು. ಕಿಸಾಗೋತಮಿ, ಪಟಚಾರ, ಮುಂತಾದ ದುಃಖಿತರಿಗೆ ನಿತ್ಯಶಾಂತಿಯನ್ನು ಪ್ರಸಾದಿಸಿದರು. ಅವರು ಪ್ರಾಣಿಬಲಿಗೆ ತಡೆಯುಂಟು ಮಾಡಿ ತನ್ನಂತೆ ಪರರು ಎಂದು ತೋರಿಸಿದವರು. ಅವರು ಮದ್ಯಪಾನ ಅತಿ ಅನರ್ಥಕಾರಿ ಎಂದು ಜಗತ್ತಿಗೆ ಮೊದಲು ತಿಳಿಸಿದರು. ದಲಿತರಿಗೆ, ಸ್ಥಾನಮಾನ ಕೊಟ್ಟ ಪ್ರಥಮರು. ಸ್ತ್ರೀಯರು ಅತ್ಯುನ್ನತ ಜ್ಞಾನ ಪಡೆಯಬಲ್ಲರು ಎಂದು ತೋರಿದವರು. ಕ್ರೂರ ಡಕಾಯಿತ ಅಂಗಲಿಮಾಲಾನನ್ನು ಕರುಣಭರಿತ ಸಂತನನ್ನಾಗಿ ಮಾಡಿದವರು. ನರ್ತಕಿ ಅಮ್ರಪಾಲಿಗೆ ಶಾಂತತೆಯನ್ನು ನೀಡಿದವರು. ಈ ರೀತಿ ಸರ್ವರಿಗೂ ಅವರು ಮಹಾನ್ ಧರ್ಮಮಿತ್ರರಾಗಿದ್ದರು. ಅಷ್ಟೇ ಅಲ್ಲ, ರೋಗಿತಿಸ್ಸಗೆ ಸೇವೆ ಮಾಡಿದರು. ಬಡ ರಜ್ಜುಮಾಲಾ ಸೋಪಕರಿಗೆ ಮೇಲೆತ್ತಿದವರು. ನೀರಿಗಾಗಿ ರಕ್ತ ಚೆಲ್ಲುತ್ತಿದ್ದ ಎರಡು ರಾಜ್ಯಗಳಿಗೆ ಒಂದುಗೂಡಿಸಿದರು. ಮತ್ತು ಐಕ್ಯತೆಯನ್ನು ಉಂಟು ಮಾಡಿದರು. ದುರ್ಬಲರನ್ನು ಬಲಷ್ಠರನ್ನಾಗಿ ಮಾಡಿದರು. ದುಶ್ಶೀಲರಿಗೆ ಶೀಲವಂತನಾಗಿ ಮಾಡಿದರು. ದಡ್ಡರಿಗೆ ಜ್ಞಾನ ದೀಪ್ತಿ ನೀಡಿದರು. ರಹಸ್ಯ ಅನ್ವೇಷಕರಿಗೆ ಸಂಶಯ ಪರಿಹಾರ ಮಾಡಿದರು. ಭೋಗಿಗಳಿಗೆ, ತ್ಯಾಗಿಗಳನ್ನಾಗಿಸಿದರು. ಮದವೆತ್ತ ಆನೆಗೆ ಶಾಂತಗೊಳಿಸಿದರು. ಅಳವಕನೆಂಬ ನರಭಕ್ಷಕನಿಗೆ ಸಾಧು ಮಾಡಿದರು. ವಿದ್ವಾಂಸರಿಗೆ ಜ್ಞಾನ ದರ್ಶನ ನೀಡಿದರು. ವರ್ಣವ್ಯವಸ್ಥೆಯನ್ನು ನಿಲ್ಲಿಸಿದರು. ಹೀಗೆ ಸರ್ವರಿಗೂ ಭೇದಭಾವವಿಲ್ಲದೆ ಮೈತ್ರಿಯಿಂದ ಕೂಡಿ, ತಮ್ಮ ಜ್ಞಾನವನ್ನು ಸರ್ವರಿಗೂ ನೀಡಿದ್ದಾರೆ. ಹಾಗೆಯೇ ಅರ್ಥಶಾಸ್ತ್ರ ಮತ್ತು ರಾಜಕೀಯದಲ್ಲೂ ಹಿತಸಲಹೆ ನೀಡಿದ್ದಾರೆ.
ಆದ್ದರಿಂದ ಅವರನ್ನು ಅನುಪಮ ಶಾಸ್ತ ಎನ್ನುತ್ತಾರೆ. ಮಾನವ ಮಾತ್ರರಿಗೆ ಅಲ್ಲದೆ ರಾತ್ರಿ ವೇಳೆಗೆ ಬರುತ್ತಿದ್ದ ದೇವಗಣಕ್ಕೂ ಅವರು ಬೋಧಿಸಿದ್ದಾರೆ. ಆದ್ದರಿಂದ ಅವರನ್ನು ಶಾಸ್ತ್ರ ದೇವಮನುಸ್ಸಾನಂ ಎನ್ನುತ್ತಾರೆ.

8. ಬುದ್ಧರು 
ಯಾವ ಜ್ಞಾನದಿಂದ ವಿಶುದ್ಧಿಯು, ವಿಮುಕ್ತಿಯು ಲಭಿಸುವುದೋ ಪರರಿಗೆ ಜಾಗ್ರತೆಯುಂಟಾಗಿ ಸರ್ವಹಿತಕಾರಿಯಾಗುವುದೋ ಅಂತಹ ಆರ್ಯಸತ್ಯಗಳನ್ನು ತಾವಾಗಿಯೇ ಸಂಶೋಧಿಸಿ, ಸಿದ್ಧಿಸಿ, ಜಾಗೃತವಾಗಿ ಜ್ಞಾತರಾದವರೇ ಬುದ್ಧರು. ಅವರ ಬೋಧನೆಯು ಸರಳವಾಗಿತ್ತು.
ಕೇವಲ ಒಂದು ವಿಷಯ ಮಾತ್ರ ನಾನು ಬೋಧಿಸುವೆ, ಅದೆಂದರೆ: ದುಃಖಕ್ಕೆ ಕಾರಣ, ಮತ್ತು ದುಃಖ ನಿರೋಧ ಮಾರ್ಗ.
ಯಾವ ಪಾಪವನ್ನು ಮಾಡದಿರುವುದು, ಕುಶಲವನ್ನು ಮಾಡುವುದು, ಮತ್ತು ಚಿತ್ತವನ್ನು ಪರಿಶುದ್ಧಗೊಳಿಸುವುದು ಇದೇ ಬುದ್ಧರ ಶಾಸನವಾಗಿತ್ತು. ಜಗತ್ತಿಗೆ ಮೊದಲಬಾರಿಗೆ ಸ್ವವಲಂಬನೆ ಪಾಠ ತಿಳಿಸಿದವರು ಅವರೇ. ನಿಮಗೆ ನೀವೇ ಶರಣಾಗತರಾಗಿ ಅನ್ಯಶರಣ ಬೇಡ ಎಂದು ಹೇಳಿದರು.
ಅವರ ಅಂತಿಮ ನುಡಿಯು ಈ ರೀತಿಯದ್ದಾಗಿತ್ತು ಸಂಸ್ಕಾರಗಳೆಲ್ಲವೂ ಕ್ಷೀಣಿಸುತ್ತದೆ, ಎಚ್ಚರಿಕೆಯಿಂದ ನಿಮ್ಮ ನಿಬ್ಬಾಣ ಸಂಪಾದಿಸಿ ಹೀಗೆ ಸರ್ವ ಸದ್ಗುಣಗಳಿಗೆ ಆದರ್ಶರಾಗಿ ಬುದ್ಧರು ಇದ್ದರು.

9. ಭಗವಂತರು

ಈ ಎಲ್ಲಾ ಬಗೆಯಲ್ಲೂ ಪೂಜ್ಯರ್ಹರಾಗಿ, ಭಕ್ತಿಗೆ ಅರ್ಹರಾಗಿರುವ ಬುದ್ಧರಿಗೆ ಭಗವಾನರು ಎನ್ನುತ್ತಾರೆ. ಏಕೆಂದರೆ ಭಗವಾ ಇದು ಪದಗಳಲ್ಲಿ ಶ್ರೇಷ್ಠವಾದದ್ದು, ಅತಿ ಸುಮಧುರವಾದದ್ದು.
ಏಕೆಂದರೆ ಲೋಕದಲ್ಲಾಗಲೀ, ಪರಲೋಕದಲ್ಲಾಗಲೀ ಎಷ್ಟು ಬಗೆಯ ಧನಗಳು ಇವೆಯೋ, ಅಥವಾ ಸ್ವರ್ಗದಲ್ಲಿ ಉತ್ಕೃಷ್ಟ ರತ್ನಾಗಳೇ ಆಗಲೀ, ಅಥವಾ ಯಾವ ಜೀವಿಯಾಗಲೀ ಯಾವುದು ಬುದ್ಧರ ಸಮಾನವಿಲ್ಲ. ಇದು ಬುದ್ಧರಲ್ಲಿರುವ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಕಲ್ಯಾಣವಾಗಲಿ.
ಅವರು ರಾಗ, ದ್ವೇಷ ಮೋಹಗಳನ್ನು ಭಂಗಿಸಿದವರು. ಸರ್ವಭಾಗ್ಯ ವನ್ನು ನೀಡುವಂತಹವರು. ದುಃಖದಲ್ಲಿ ಭಾಗಿಯಾಗಿ ಸುಖದ ಭಾಗ ಹಂಚಿದವರು. ಸತ್ಯಗಳನ್ನು ಭಾಗಿಸಿ, ಪ್ರತಿ ಭಾಗಿಸಿ, ವಗರ್ಿಕರಿಸಿ ವಿಭಜಿಸಿ ದವರು. ಭವದ ಅಂತ್ಯ ಮಾಡಿದವರು, ಭಕ್ತಿಗೆ ಅರ್ಹರು. ಆದ್ದರಿಂದ ಅವರು ಭಗವಾನ್ ಆಗಿದ್ದಾರೆ.
ಈ ರೀತಿಯಾಗಿ ಧ್ಯಾನಿಸುತ್ತಿದ್ದಾಗ ಸಾಧಕರಲ್ಲಿ ಪಂಚನಿವಾರಣಗಳು ಕ್ಷೀಣಿಸಿ, ಧ್ಯಾನದ ಅಂಗಗಳು ಸ್ಥಿರವಾಗಿ ಸಮಾಧಿ ಪಡೆಯುತ್ತಾರೆ.

ಬುದ್ಧಾನುಸತಿ ಧ್ಯಾನದಿಂದ ಲಾಭಗಳು :

1. ಭಕ್ತಿ (ಶ್ರದ್ಧೆ) ಹೆಚ್ಚಾಗಿ ಜಾಗ್ರತೆ, ಅರಿವು ಮತ್ತು ಪುಣ್ಯ ಪಡೆಯುತ್ತಾರೆ.
2. ಆನಂದದಿಂದ ತುಂಬಿ ಚಿಂತೆ, ಭಯದಿಂದ ಪಾರಾಗುತ್ತಾರೆ.
3. ಕಷ್ಟ ನೋವುಗಳನ್ನು ಸಹಿಸುತ್ತಾರೆ.
4. ಬುದ್ಧರ ಸನಿಹಾ ಭಾವದಿಂದ ದೇಹದಲ್ಲಿ ಕೆಲವು ಗುಣಗಳು ನೆಲಸಿ ಗೌರವಕ್ಕೆ ಅರ್ಹರಾಗುತ್ತಾರೆ.
5. ದೇವತೆಗಳು ಆಕಷರ್ಿತವಾಗುತ್ತಾರೆ.
6. ಸೋತಪನ್ನನಾಗುತ್ತಾನೆ ಮತ್ತು ಸುಗತಿ ಪಡೆಯುತ್ತಾರೆ.
ಒಬ್ಬ ಭಕ್ತ ಹೀಗೆ ಹೇಳುತ್ತಾನೆ ನಾನು ಬುದ್ಧರಿಗೆ ಅರಿತಷ್ಟು ಅವರನ್ನು ಪ್ರೀತಿಸುವೆ. ಪೂಜಿಸುವೆ, ಅವರನ್ನು ಪ್ರೀತಿಸಿ ಪೂಜಿಸಿದಷ್ಟು ಅವರನ್ನು ಇನ್ನೂ ಚೆನ್ನಾಗಿ ಅರಿಯುವೆ.
ಧಮ್ಮಪದದ ಈ ಗಾಧೆ ಭಕ್ತರಿಗೆ ಸ್ಫೂತರ್ಿ ನೀಡುತ್ತದೆ.
ಯಾರು ಪೂಜ್ಯರ್ಹರಾದ ಬುದ್ಧರನ್ನು… ಪೂಜಿಸುವವರು ಅವರು ಗಳಿಸಿದ ಪುಣ್ಯವನ್ನು ಯಾರಿಂದಲೂ ಅಳಿಯಲು ಸಾಧ್ಯವಿಲ್ಲ.

ಈ ಅನುಸ್ಸತಿಯಿಂದ ಸಾಮಿಪ್ಯ (ಉಪಚರ) ಸಮಾಧಿ ದೊರೆಯುತ್ತದೆ

Leave a Reply