ನಾನು ಮತ್ತು ನೀನು ಎಂದರೇನು ? : ಸೂಫಿ ಶಬ್’ಸ್ತರಿ ಪದ್ಯ

ಶಬ್’ಸ್ತರಿ | ಅನುವಾದ : ಸುನೈಫ್

ನಾನು ಮತ್ತು ನೀನು ಎಂದರೇನು?
ಒಂದೇ ದೀಪದ ನೂರು ಬೆಳಕು
ತೂರಿ ಬಿಡುವ ಜಾಲರಿ ನಾವು

ನಾನು ಮತ್ತು ನೀನು
ಭೂಮಿ ಮತ್ತು ಸ್ವರ್ಗ
-ದ ನಡುವೆಯೊಂದು ಪರದೆ
ತೆರೆ ಸರಿಸಿ ನೋಡು, ಕಾಣುವುದು
ಎಲ್ಲ ಮತಗಳು ಬೆಸೆದುಕೊಂಡ ಬಗೆ

ಮತ್ತೆ ನೀನೇ ಕೇಳುವೆ:
ಮಸೀದಿ ಏನೆಂದು
ಸಿನಗಾಗ್ ಯಾಕೆಂದು, ಅಗ್ನಿಮಂದಿರ ಯಾರದೆಂದು…

Leave a Reply