ಸಹಾಯವಿಲ್ಲದೆ ಯಾವುದೂ ಸಾಧ್ಯವಿಲ್ಲ : ಇಂದಿನ ಸುಭಾಷಿತ

ಅಸಹಾಯಃ ಸಮರ್ಥೋsಪಿ ಜಾತು ಹಿತಸಿದ್ಧಯೇ| ವಹ್ನಿರ್ವಾತವಿಹೀನೋ ಹಿ ಬುಸಸ್ಯಾಪಿ ನ ದೀಪಕಃ

ಸಮರ್ಥನಾದರೂ ಸಹಾಯವಿಲ್ಲದಿದ್ದರೆ ಯಾರೂ ಏನನ್ನೂ ಮಾಡಲಾಗದು. ಬೆಂಕಿಯಂಥ ಬೆಂಕಿಗೇ ಸುಡಲು ಗಾಳಿಯ ಸಹಾಯ ಬೇಕು! ಗಾಳಿ ಇಲ್ಲದ ಕಡೆ ಹೊತ್ತಿಕೊಳ್ಳುವುದೂ ಇಲ್ಲ. ಆದ್ದರಿಂದ ಎಲ್ಲವನ್ನೂ ನಾವೊಬ್ಬರೇ ಮಾಡುತ್ತೇವೆ ಅನ್ನುವ ಒಣ ಜಂಭ ಸಲ್ಲದು.

Leave a Reply