ಪರ್ಶಿಯಾದ ದಾರ್ಶನಿಕ ಕವಿ ಉಮರ್ ಖಯ್ಯಾಮನ ರುಬಾಯಿಗಳ ‘ಚಿತ್ರಿಕೆ ಗುಚ್ಛ’ ನಿಮಗಾಗಿ… | ಕನ್ನಡಕ್ಕೆ ಚಿದಂಬರ ನರೇಂದ್ರ
3. ಯಾರೂ ಹೇಳಲೇ ಇಲ್ಲ!

ನನ್ನ ಬರುವಿಕೆಯಿಂದ ಸ್ವರ್ಗದ ಬದುಕು ಏನೂ ಗಳಿಸಲಿಲ್ಲ,
ನನ್ನ ಹೋಗುವಿಕೆ ಸಗ್ಗದ ಘನತೆಯ ಕಳೆಯಲೂ ಇಲ್ಲ ;
ಯಾರೂ ಹೇಳಲೇ ಇಲ್ಲ ನನ್ನ ಕಿವಿಯಲ್ಲಿ ಬಂದು
ಯಾಕೆ ಬಂದಿದ್ದೆನೆ ನಾನು, ಯಾಕೆ ಬಿಟ್ಟು ಹೋಗುತ್ತಿದ್ದೇನೆ ಎಲ್ಲ.
4 ತುಂಬ ಖುಶಿ ನಿನ್ನದಾಗಬಹುದು

ಓ ಹೃದಯ ! ಸಿಕ್ಕು ಬಿಡಿಸುವಾಗಲೂ ನೀನು ನನ್ನ ಕೈ ಹಿಡಿಯಲಿಲ್ಲ ,
ಜನ ತಮ್ಮ ಸೂಕ್ಷ್ಮತೆಯಲ್ಲಿ ಬಯಸುವ ಲಕ್ಷ್ಯ ನೀನು ಮುಟ್ಟುವುದಿಲ್ಲ
ಬಾ, ಬಾಗಿಸು ವೈನ್ ಮತ್ತು ಬಟ್ಟಲು ತುಂಬ ಖುಶಿ
ನಿನ್ನದಾಗಬಹುದು, ಆಗಲಿಕ್ಕೂ ಇಲ್ಲ ಈ ಆನಂದ, ಇನ್ನು ಮೇಲೆಲ್ಲ.
ಹನ್ನೊಂದನೇ ಶತಮಾನದ ಪರ್ಶಿಯಾದ ದಾರ್ಶನಿಕ, ಕವಿ, ತತ್ವಜ್ಞಾನಿ, ಗಣಿತಜ್ಞ, ಖಗೋಳ ಶಾಸ್ತ್ರಜ್ಞ ಉಮರ್ ಖಯ್ಯಾಮ್ ನ ರುಬಾಯಿ ಗಳು ಜಗತ್ತಿನಾದ್ಯಂತ ಕಾವ್ಯಾಸಕ್ತರ ಮನಸೂರೆಗೊಂಡಿವೆ. ಕನ್ನಡಕ್ಕೆ ಈ ಮೊದಲು ಅನುವಾದಗೊಂಡಿರುವ ಉಮರ್ ಖಯ್ಯಾಮ್ ನ ರುಬಾಯಿಗಳು ಬಹುತೇಕ ಫಿಟ್ಸ್ ಜೆರಾಲ್ಡ್ ನ ಇಂಗ್ಲೀಷ್ ಅನುವಾದದ ಮೂಲಕ ಬಂದವು. ಪರ್ಷಿಯನ್ ವಿದ್ವಾಂಸ Peter Avery ಮತ್ತು ಕವಿ John Heath-Stubbs ಅವರ ಇಂಗ್ಲೀಷ್ ಅನುವಾದವನ್ನು ಆಧರಿಸಿ, ಚಿದಂಬರ ನರೇಂದ್ರ ಅರಳಿ ಮರಕ್ಕಾಗಿ ಈ ರುಬಾಯಿಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಗುಚ್ಛ 1 : ಇಲ್ಲಿ ನೋಡಿ: https://aralimara.com/2020/10/22/khayyam-2/