“ಮನಸ್ಸಿನ ಕನ್ನಡಿ ಸ್ವಚ್ಛವಾಗಿರಬೇಕು. ಆಗ ನಾನಲ್ಲದೆ ಬೇರೆ ದೇವರಿಲ್ಲ ಎಂಬ ಸತ್ಯವು ಗೋಚರಿಸುತ್ತದೆ. ನಾನು ನೀನೆಂಬ ವ್ಯತ್ಯಾಸವೇ ಇಲ್ಲವಾಗುತ್ತದೆ. ಲೋಕವೇ ನಾನೆಂಬ ಅರಿವಾಗುತ್ತದೆ” ಅನ್ನುತ್ತಾಳೆ ಲಲ್ಲಾ | ಅಲಾವಿಕಾ
ಮನಸ್ಸಿನ ಕನ್ನಡಿ ಶುದ್ಧವಾಗಿದ್ದರೆ ಅದರಲ್ಲಿನ ಪ್ರತಿಬಿಂಬವೂ ಸ್ಪಷ್ಟವಾಗಿ ಗೋಚರಿಸುತ್ತದೆ. ಜಗತ್ತು ಭಗವಂತನ ಕನ್ನಡಿಯಾದರೆ, ಅದರಲ್ಲಿ ಮೂಡುವ ಪ್ರತಿಬಿಂಬ ಸ್ವತಃ ಭಗವಂತನೇ. ನಾವು ಕೂಡಾ ಜಗತ್ತಿನ ಭಾಗವೇ ಆಗಿರುವುದರಿಂದ, ನಮ್ಮ ಮನಸ್ಸು ಕೂಡಾ ಭಗವಂತನ ಕನ್ನಡಿಯೇ. ಮತ್ತು ಅದರಲ್ಲಿ ಕಾಣುವ ಬಿಂಬ, ಸ್ವಯಂ ಭಗವಂತನದು! ನಮ್ಮ ನಮ್ಮ ಬಿಂಬ ನಮಗೆ ಸ್ಪಷ್ಟವಾಗಿ ಕಂಡರೆ, ಆ ಬಿಂಬ ಭಗವಂತನೇ ಆಗಿರುವುದು – ಇದು ಲಲ್ಲಾ ಮಾತಿನ ಅರ್ಥ.
ಎಲ್ಲಿಯವರೆಗೆ ನಾನು, ನನ್ನದು ಎಂಬ ಭಾವ ಇರುವುದೋ, ಅಲ್ಲಿಯವರೆಗೆ ಕಷ್ಟ – ಸಂಕಟಗಳು ತಪ್ಪುವುದಿಲ್ಲ. “ಎಲ್ಲವೂ ಭಗವಂತನೇ, ನಾನು ಕೂಡಾ…” ಎನ್ನುವ ಅರಿವು ನಮ್ಮನ್ನು ನಿರುಮ್ಮಳವಾಗಿ ಇಡಬಲ್ಲದು. – ಇದು ಲಲ್ಲಾ ಮಾತಿನ ವಿಸ್ತೃತಾರ್ಥ.
ಲಲ್ಲೇಶ್ವರಿ, ಲಾಲ್ ಡೇಡ್ ಎಂದೆಲ್ಲ ಕರೆಸಿಕೊಳ್ಳುವ ಲಲ್ಲಾ, ಒಬ್ಬ ಕಾಶ್ಮೀರಿ ಅನುಭಾವಿ. ಈಕೆಯ ಕುರಿತು ಹೆಚ್ಚಿನ ಓದಿಗೆ ಇಲ್ಲಿ ನೋಡಿ : https://atomic-temporary-140769010.wpcomstaging.com/2019/03/08/lalla/

