ಭಗವಂತನ ಸ್ವರೂಪ, ಸುಖದ ಸ್ವರೂಪ : ರಮಣರ ಜೊತೆ ಮಾತುಕಥೆ

ಒಬ್ಬ ಪರಿವಾಜ್ರಕಸಂನ್ಯಾಸಿ ರಮಣ ಮಹರ್ಷಿಗಳನ್ನು ಪ್ರಶ್ನೆ ಕೇಳಿ ತನ್ನ ಸಂದೇಹವನ್ನು ಪರಿಹರಿಸಿಕೊಳ್ಳಲು ಯತ್ನಿಸುತ್ತಿದ್ದ. ಈ ಸಂದರ್ಭದಲ್ಲಿ ನಡೆದ ಪ್ರಶ್ನೋತ್ತರ ಸಂವಾದದ ಒಂದು ತುಣುಕು ಇಲ್ಲಿದೆ…। ಆಕರ: ಶ್ರೀ ರಮಣರ ಜೊತೆ ಮಾತುಕತೆ; ಮುನಗಾಲ ವೆಂಕಟರಾಮಯ್ಯ

ಇಡಿಯ ವಿಶ್ವವೇ ಭಗವಂತನೆಂದು ಅರಿಯುವುದುಹೇಗೆ?
ಮಹರ್ಷಿ: ನಿನ್ನಲ್ಲಿ ವಿವೇಕದ ದೃಷ್ಟಿಯನ್ನು ಬೆಳೆಸಿಕೊಂಡರೆ ಸಮಸ್ತ ವಿಶ್ವವೇ ಭಗವಂತನೆಂದು ತಿಳಿಯುವೆ. ಬ್ರಹ್ಮವನ್ನು ತಿಳಿಯದೆ ಅವನ ಸರ್ವವ್ಯಾಪಕ ತತ್ತ್ವವನ್ನು ಹೇಗೆ ತಿಳಿಯುವೆ?

ಈ ಅನುಭವದ ಸ್ವರೂಪವೇನು?
ಮಹರ್ಷಿ: ಒಬ್ಬನು ಯಾವ ನೆಲೆಯಲ್ಲೇ ನಿಂತಿರಲಿ, ಅನುಭವವೂ ಆ ನೆಲೆಯಲ್ಲಿಯೇ ಇರುತ್ತದೆ. ಇದನ್ನು ವಿವರಿಸುವುದಾದರೆ- ಜಾಗೃತ್‍ ಸ್ಥಿತಿಯಲ್ಲಿ ಸ್ಥೂಲಶರೀರವು ನಾಮ ರೂಪಗಳನ್ನು ಧರಿಸುತ್ತದೆ. ಸ್ವಪ್ನಸ್ಥಿತಿಯಲ್ಲಿ ಮನೋದೇಹವು ವೈವಿಧ್ಯಪೂರ್ಣವಾದ ಮನಸ್ಸಿನ ಸೃಷ್ಟಿಯೇ ಆದ ನಾಮರೂಪಗಳನ್ನು ಅನುಭವಿಸುತ್ತದೆ. ಸುಷಿಪ್ತಿಯಲ್ಲಿ ಸ್ಥೂಲ ದೇಹದೊಡನೆ ಸಂಬಂಧವು ಕಳಚಿ ಹೋಗಿರುವುದರಿಂದ, ಇಂಥ ಅರಿವು ಇರುವುದಿಲ್ಲ. ಹಾಗೆಯೆ ಸಮಾಧಿ ಸ್ಥಿತಿಯಲ್ಲಿ ಬ್ರಹ್ಮವಸ್ತುವಿನೊಡನೆ ತಾದಾತ್ಮ್ಯ ಉಂಟಾಗಿ, ಸರ್ವವಸ್ತುವಿನಲ್ಲೂ ಸಮಭಾವವು ಸಿದ್ಧಿಸುತ್ತದೆ. ತನ್ನ ಆತ್ಮವಸ್ತುವಲ್ಲದೆ ಬೇರೆ ಏನೂ ಇಲ್ಲ ಎಂಬ ಅನುಭವ ಮೂಡುತ್ತದೆ.

ಸುಖದ ಸ್ವರೂಪವೇನು?
ಮಹರ್ಷಿ: ಸುಖವು ಬಾಹ್ಯಕಾರಣ ಹಾಗು ವಸ್ತುಗಳಲ್ಲಿ ಇದೆ ಎಂದು ಯಾರಾದರೂ ಭಾವಿಸಿದರೆ, ಅಂಥ ವಸ್ತುಗಳ ಸಂಗ್ರಹ ಹೆಚ್ಚಾದಾಗ ಸುಖವೂ ಅಧಿಕವಾಗಿ, ಈ ಸಂಗ್ರಹ ಕ್ಷೀಣಿಸಿದಾಗ ಸುಖವೂ ಕಡಿಮೆಯಾಗುತ್ತದೆ ಎಂದು ಭಾವಿಸುವುದು ಉಚಿತವಾಗುತ್ತದೆ. ಎಂದರೆ ಯಾವ ಬಾಹ್ಯವಸ್ತುವೂ ಇಲ್ಲದಿದ್ದರೆ ಅವನ ಸುಖ ಶೂನ್ಯ ಎಂದೇ ತಿಳಿಯಬೇಕಾಗುತ್ತದೆ. ಆದರೆ ಮಾನವನ ನಿಜವಾದಅನುಭವ ಏನು? ಈ ವಾದವನ್ನು ಅನುಭವ ಪುಷ್ಟೀಕರಿಸುತ್ತದೆಯೆ?
ಸುಷುಪ್ತಿಯಲ್ಲಿ ಮನುಷ್ಯನಿಗೆ ಯಾವವಸ್ತು ಸಂಗ್ರಹವೂ ಇರುವುದಿಲ್ಲ .ತನ್ನ ಸ್ವಂತದೇಹವೇ ಅಲ್ಲಿ ಇಲ್ಲ. ಆದರೆ ದುಃಖದಅನುಭವಕ್ಕೆ ಬದಲಾಗಿಆತನು ಸುಖಾನುಭವವನ್ನೇಮಾಡುವನಲ್ಲವೇ? ಪ್ರತಿಯೊಬ್ಬರಿಗೂ ಸುಖವಾಗಿ ನಿದ್ರಿಸುವಬಯಕೆ. ತೀರ್ಮಾನವೇನೆಂದರೆ ಸುಖ ಎನ್ನುವುದು ಮಾನವನಲ್ಲಿ ಸಹಜವಾಗಿಯೇ ಅಂತರ್ಗತವಾಗಿದೆ. ಅದು ಬಾಹ್ಯವಸ್ತು ಕಾರಣಗಳನ್ನು ಅವಲಂಬಿಸಿಲ್ಲ. ಅಖಂಡವೂ ಪರಿಶುದ್ಧವೂ ಆದ ಈ ಸುಖ ದಗಣಿಯ ಬಾಗಿಲು ತೆರೆಯಬೇಕಾದರೆ ಆತ್ಮಜ್ಞಾನವನ್ನು ಪಡೆದುಕೊಳ್ಳಬೇಕು.

Leave a Reply