ಶಿಷ್ಯರ ಪ್ರಶ್ನೆಗಳಿಗೆ ರಮಣ ಮಹರ್ಷಿಗಳ ಉತ್ತರ

ಶಿಷ್ಯರ ಪ್ರಶ್ನೆಗಳಿಗೆ ರಮಣ ಮಹರ್ಷಿಗಳು ನೀಡಿದ ಉತ್ತರ ಇಲ್ಲಿವೆ…

ನನ್ನ ಆತ್ಮಜ್ಞಾನದಿಂದ ಬೇರೆಯವರಿಗೆ ಪ್ರಯೋಜನವುಂಟೆ?
ಹೌದು, ನಿಶ್ಚಿತವಾಗಿ, ಅದು ಅತ್ಯುತ್ತಮವಾದ ಪ್ರಯೋಜನ. ಆದರೆ ಬೇರೆಯವರು ಎಂಬುದಿಲ್ಲ ಸಹಾಯಮಾಡಲು. ಆತ್ಮಜ್ಞಾನಿಯು ಆತ್ಮವನ್ನೇ ನೋಡುತ್ತಾನೆ. ವಿವಿಧ ಆಭರಣಗಳಲ್ಲಿ ಅಕ್ಕಸಾಲಿಯು ಚಿನ್ನವನ್ನೆ ಕಾಣುವಂತೆ, ದೇಹವೇ ನೀನೆಂದು ಭ್ರಮಿಸಿದಾಗ ಮಾತ್ರ ಈ ಎಲ್ಲ ನಾಮರೂಪಗಳು, ದೇಹ ಬುದ್ದಿಯನ್ನು ಮೀರಿದಾಗ ಇವೆಲ್ಲವೂ ದೇಹಾತ್ಮಭಾವದೊಡನೆಯೇ ಅಳಿದುಹೋಗುತ್ತವೆ.


ಮರಗಿಡಗಳನ್ನು ಕುರಿತಂತೆಯೂ ಈ ಮಾತು ಸತ್ಯವೆ?
ನಿನ್ನ ಆತ್ಮವಿದ್ದರಲ್ಲವೇ ಅವೆಲ್ಲವೂ ಇರುವುದು?ಅದನ್ನು ಹುಡುಕು. ಅವುಗಳನ್ನು ನೋಡುತ್ತಿದ್ದೇನೆ ಎಂದು ನೀನು ಭಾವಿಸುತ್ತೀಯೆ. ಆತ್ಮನಿಂದಲೇ ಆಲೋಚನೆಯು ಹೊರಹೊಮ್ಮುತ್ತದೆ. ಈ ಚಿಂತನೆ ಎಲ್ಲಿಂದ ಹೊರಹೊಮ್ಮುತ್ತದೆ ಎಂಬುದನ್ನು ಶೋಧಿಸು, ಚಿಂತನೆಗಳು ಅಳಿಯುತ್ತವೆ ಆತ್ಮವೊಂದೇ ಉಳಿಯುತ್ತದೆ.

ಹುಲಿ, ಜಿಂಕೆ ಮೊದಲಾದ ಪ್ರಾಣಿಗಳನ್ನುಕೊಂದು ಅವುಗಳಚರ್ಮವನ್ನು ಆಸನಕ್ಕಾಗಿ ಬಳಸುವುದು ಸರಿಯೇ?
ಮನಸ್ಸು ಹುಲಿಯೇ? ಜಿಂಕೆಯೇ?
ಪ್ರತಿಯೊಂದೂ ಭ್ರಮೆ ಎಂದಾದರೆ ಪ್ರಾಣಿಗಳನ್ನೂ ಕೊಲ್ಲಬಹುದು!
ಭ್ರಮೆ ಎಂಬುದು ಯಾರಿಗೆ? ಅದನ್ನು ಹುಡುಕಿ, ಹಾಗೆ ನೋಡಿದರೆ ಪ್ರತಿಯೊಬ್ಬನೂ ತನ್ನನ್ನೇ ಕೊಂದುಕೊಳ್ಳುತ್ತಾನೆ (ಆತ್ಮಹನ್); ಬದುಕಿನ ಪ್ರತಿಕ್ಷಣವೂ ಹೀಗೆಯೇ.


ಆಸನಗಳಲ್ಲಿ ಯಾವುದು ಅತ್ಯುತ್ತಮ?
ಯಾವುದಾದರೂ ಸರಿ,ಪ್ರಾಯಶಃ ಸುಖಾಸನವು ಒಳ್ಳೆಯದು (ಸುಲಭವಾದ ಪದ್ಮಾಸನ). ಆದರೆ ಜ್ಞಾನಮಾರ್ಗದಲ್ಲಿ ಇವೆಲ್ಲ ಅಷ್ಟೇನೂ ಮುಖ್ಯವಲ್ಲ.
ಆಸನವು ಯೋಗಿಯ ಮನೋಧರ್ಮದ ಸೂಚಕವೆ?
ಹೌದು.

ಹುಲಿಯಚರ್ಮ, ಕಂಬಳಿ, ಜಿಂಕೆಯ ಚರ್ಮ ಇವುಗಳ ಲಕ್ಷಣ, ಪರಿಣಾಮಗಳೇನು?
ಕೆಲವು ಯೋಗಿಗಳು ಅದನ್ನೆಲ್ಲ ಸಂಶೋಧಿಸಿದ್ದಾರೆ. ವಿವರಗಳು ಯೋಗಶಾಸ್ತ್ರ ಗ್ರಂಥಗಳಲ್ಲಿ ದೊರೆಯುತ್ತವೆ. ಅವುಗಳ ಚುಂಬಕಶಕ್ತಿ (ಅಯಸ್ಕಾಂತಗುಣ) ಇತ್ಯಾದಿ. ಆದರೆ ಜ್ಞಾನಮಾರ್ಗಕ್ಕೆ ಇವು ಯಾವುದೂ ಪ್ರಕೃತವಲ್ಲ. ಆಸನ ಎಂಬುದು ನಿಜಕ್ಕೂ ಆತ್ಮದ ಆವಾಸ ಹಾಗೂ ಸ್ಥಿರತೆ. ಅದು “ಆಂತರಿಕ” ಉಳಿದವೆಲ್ಲ ಬಾಹ್ಯವಿಷಯಗಳು.

ಧ್ಯಾನಕ್ಕೆ ತುಂಬ ಪ್ರಶಸ್ತವಾದಕಾಲ ಯಾವುದು?
ಕಾಲ ಎಂದರೆ ಏನು?
ನೀವೇ ಹೇಳಿ?
ಕಾಲ ಎಂಬುದು ಕೇವಲಕಲ್ಪನೆ. ಸತ್ಯವು ಒಂದೇ. ನೀವು ಹೇಗೆ ಯೋಚಿಸುವಿರೋ ಅದು ಹಾಗೆ ತೋರುತ್ತದೆ. ಅದನ್ನು ನೀವು ಕಾಲ ಎಂದರೆ ಕಾಲ, ಅಸ್ತಿತ್ವ ಎಂದರೆ ಅಸ್ತಿತ್ವ, ಹೀಗೆಯೇ. ಕಾಲ ಎಂದು ಕರೆದಮೇಲೆ ಅದನ್ನು ಹಗಲು, ರಾತ್ರಿ, ತಿಂಗಳು, ವರ್ಷ, ನಿಮಿಷ ಇತ್ಯಾದಿ ವಿಭಾಗಿಸಲುತೊಡಗುತ್ತೀರಿ. ಜ್ಞಾನಮಾರ್ಗದಲ್ಲಿ ಕಾಲದಕಲ್ಪನೆ ಅನಗತ್ಯ. ಆದರೆ ಸಾಧಕರಿಗೆ ಪ್ರಾರಂಭದಲ್ಲಿ ಇಂಥ ಕೆಲವುನಿಯಮಗಳು, ಶಿಸ್ತು ಅವಶ್ಯಕ

ಜ್ಞಾನಮಾರ್ಗ ಎಂದರೇನು?
ಒಂದು ರೀತಿಯಲ್ಲಿ ಚಿತ್ತ ಏಕಾಗ್ರತೆ ಎಂಬುದು ಜ್ಞಾನ ಹಾಗೂ ಯೋಗಮಾರ್ಗಗಳಿಗೆ ಸಮಾನವಾದುದು. ಯೋಗವು ವಿಶ್ವಸತ್ಯದಲ್ಲಿ ವ್ಯಕ್ತಿಯ ಸಂಯೋಗವನ್ನು ಸಾಧಿಸಲು ಹೊರಡುತ್ತವೆ. ಈ ಪರಮಸತ್ಯವು ಹೊಸದಲ್ಲ, ಅದು ಈಗಲೂ ಇರಬೇಕು, ಇದ್ದೇಇದೆ. ಆದುದರಿಂದ ಜ್ಞಾನಮಾರ್ಗವು ಈ ವಿಯೋಗ ಹೇಗೆ ಉಂಟಾಯಿತು ಎಂಬುದನ್ನು ಹುಡುಕಲು ಯತ್ನಿಸುತ್ತಿದೆ. ವಿಯೋಗ ಈ ಪರಮಸತ್ಯದಿಂದ ಮಾತ್ರ.

Leave a Reply