ವದನಂ ಪ್ರಸಾದ ಸದನಂ ಸದಯಂ ಹೃದಯಂ ಸುಧಾಮುಚೋ ವಾಚಃ ಕರಣಂ ಪರೋಪಕರಣಂ ಯೇಷಾಂ ಕೇಷಾಂ ನ ತೇ ವಂದ್ಯಾಃ
ಅರ್ಥ : ಮುಖದಲ್ಲಿ ನಗು, ಹೃದಯದಲ್ಲಿ ದಯೆ, ಮಾತಿನಲ್ಲಿ ಸ್ನೇಹ – ಸಕಾರಾತ್ಮಕತೆಯ ಜೀವದಾಯಿನಿಯಾಗಬಲ್ಲ ಅಮೃತ ಝರಿ, ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ – ಇವನ್ನೆಲ್ಲ ಹೊಂದಿರುವ ವ್ಯಕ್ತಿಯನ್ನು ಯಾರು ತಾನೆ ಗೌರವಿಸದೆ ಇರಲು ಸಾಧ್ಯ!?
ಸಮಾಜದಲ್ಲಿ ನಾವು ಗೌರವ ಬಯಸುವುದಾದರೆ ಈ ಗುಣಗಳನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ. ಪ್ರಜ್ಞಾಪೂರ್ವಕವಾಗಿ ಇವನ್ನೆಲ್ಲ ಮಾಡುತ್ತಾ ಹೋದರೆ ಮುಂದೊಮ್ಮೆ ಇವು ನಮ್ಮ ಸಹಜತೆಯೇ ಆಗಿಬಿಡುವವು.
Niswarth seve durase Ellada badhuku Asuye Ellada bandavya kapatavillada sneha eddare sarthaka E jeevana