ಕುರುಕ್ಷೇತ್ರ ದಿನಚರಿ : ಆ 18 ದಿನಗಳಲ್ಲಿ ಏನೇನಾಯಿತು ಗೊತ್ತೆ?

ಕೌರವ – ಪಾಂಡವರ ನಡುವಿನ ಕುರುಕ್ಷೇತ್ರ ಯುದ್ಧ 18 ದಿನಗಳ ಕಾಲ ನಡೆಯಿತು. ಅಂತಿಮವಾಗಿ ಕೌರವರಿಗಿಂತ ಕಡಿಮೆ ಸಂಖ್ಯೆಯಲ್ಲಿದ್ದರೂ ಪಾಂಡವರೇ ವಿಜಯಿಗಳಾದರು. ಈ ಯುದ್ಧದ 18 ದಿನಗಳ ಪ್ರತಿದಿನದ ಕಾಲಾನುಕ್ರಮ ಸಾರಾಂಶ ಇಲ್ಲಿದೆ …

ದಿನ 1 : ಮೊದಲ ದಿನ ಕೌರವರ ಕೈಮೇಲಾಗಿ ಪಾಂಡವ ಸೇನೆಗೆ ದೊಡ್ಡ ನಷ್ಟ ಉಂಟಾಯಿತು.

ದಿನ 2 : ಎರಡನೇ ದಿನ ಪಾಂಡವರು ಚೇತರಿಸಿಕೊಂಡು, ದಿನಾಂತದಲ್ಲಿ ಕೌರವರ ಸೇನೆಯನ್ನು ಮಣಿಸಿದರು. ಈ ದಿನ ಕೌರವಸೇನೆ ಅಪಾರ ನಷ್ಟ ಅನುಭವಿಸಿತು

ದಿನ 3 : ಅಭಿಮನ್ಯು ಮತ್ತು ಘಟೋತ್ಕಚ ರಣಾಂಗಣದಲ್ಲಿ ಬಿರುಗಾಳಿ ಎಬ್ಬಿಸಿದರು.

ದಿನ 4 : ಶಾಂತಿ ಸಂಧಾನ ಮಾಡಿಕೊಳ್ಳುವಂತೆ ದುರ್ಯೋಧನನಿಗೆ ಭೀಷ್ಮ ಪಿತಾಮಹ ಸಲಹೆ ನೀಡಿದ

ದಿನ 5 : ದ್ರೋಣ ಸಾತ್ಯಕಿ ಮೇಲೆರಗಿ ಘಾಸಿಗೊಳಿಸಿದ. ನಡುವೆ ಬಂದ ಭೀಮ, ಸಾತ್ಯಕಿಯನ್ನು ರಕ್ಷಿಸಿದ

ದಿನ 6 : ಕೌರವರು ಹೀನಾಯ ಸೋಲು ಅನುಭವಿಸಿದರು

ದಿನ 7 : ದ್ರೋಣನ ವೀರಾವೇಶಕ್ಕೆ ಪಾಂಡವ ಸೇನೆ ಪತರಗುಟ್ಟಿತು. ಅವನು ಪಾಂಡವರ ಪಕ್ಷದಲ್ಲಿದ್ದ ವಿರಾಟರಾಜನ ಪುತ್ರನನ್ನು ಕೊಂದ.

ದಿನ 8 : ಭೀಮನೊಬ್ಬನೇ ಧೃತರಾಷ್ಟ್ರನ 17 ಪುತ್ರರನ್ನು ಕೊಂದುಹಾಕಿದ. ಶಕುನಿಯ ಸಹೋದರರು ಅರ್ಜುನನಿಂದ ಹತರಾದರು.

ದಿನ 9 : ರಣಕಲಿಯಂತೆ ಕಾದುತ್ತಿದ್ದ ಭೀಷ್ಮನೆದುರು ಶಿಖಂಡಿಯನ್ನು ಯುದ್ಧಕ್ಕೆ ಕಳಿಸಲಾಯಿತು

ದಿನ 10 : ಶಿಖಂಡಿಯೆದುರು ಯುದ್ಧ ಮಾಡಲು ಒಲ್ಲದ ಭೀಷ್ಮ, ಬಾಣಗಳಿಗೆ ಎದೆಯೊಡ್ಡಿದ. ಅನಂತರ ಶರಶಯ್ಯೆಯಲ್ಲಿ ಒರಗಿದ

ದಿನ 11 : ಅರ್ಜುನ ದ್ರೋಣರನ್ನು ಸೋಲಿಸಿದ

ದಿನ 12 : ಅರ್ಜುನ ಮತ್ತು ಭಗದತ್ತರ ನಡುವೆ ಭೀಕರ ಕಾಳಗ ನಡೆಯಿತು

ದಿನ 13 : ಚಕ್ರವ್ಯೂಹಕ್ಕೆ ಸಿಲುಕಿದ ಅಭಿಮನ್ಯು ವೀರಮರಣ ಹೊಂದಿದ

ದಿನ 14 : ಘಟೋತ್ಕಚನಿಂದಾಗ ಕರ್ಣ ತನ್ನ ವಾಸವೀ ಶಕ್ತಿಯನ್ನು ಕಳೆದುಕೊಂಡ

ದಿನ 15 : ದ್ರುಪದ ರಾಜನ ಮಗ ದೃಷ್ಟದ್ಯುಮ್ನ ದ್ರೋಣರನ್ನು ಕೊಂದ. ಮತ್ತು ಆ ಮೂಲಕ ದ್ರುಪದನ ಶಪಥ ಪೂರೈಸಿತು.

ದಿನ 16 : ಭೀಮ ದುಷ್ಯಾಸನನನ್ನು ಕೊಂದು ಅವನ ರಕ್ತವನ್ನು ದ್ರೌಪದಿಯ ಮುಡಿಗೇರಿಸಿ ಶಪಥ ಪೂರೈಸಿದ

ದಿನ 17 : ಪರಶುರಾಮರ ಶಾಪದಿಂದ ಶಸ್ತ್ರಪ್ರಯೋಗದ ಮಂತ್ರ ಮರೆತ ಕರ್ಣನನ್ನು ಅರ್ಜುನ ಕೊಂದ

ದಿನ 18 : ಭೀಮ ದುರ್ಯೋಧನನ ತೊಡೆಗೆ ತನ್ನ ಗದೆಯಿಂದ ಪ್ರಹಾರ ಮಾಡಿ ಅವನನ್ನು ಕೊಂದ

Leave a Reply