ಹಣ ಬಂದರೂ ದುಃಖ, ಹೋದರೂ ದುಃಖ! : ಇಂದಿನ ಸುಭಾಷಿತ

ಇಂದಿನ ಸುಭಾಷಿತ

ಅರ್ಥಾನಾಂ ಅರ್ಜನೇ ದುಃಖಂ ಅರ್ಜಿತಾನಾಂ ಚ ರಕ್ಷಣೇ ಆಯೇ ದುಃಖಂ ವ್ಯಯೇ ದುಃಖಂ ಧಿಕ್ ಅರ್ಥಾಃ ಕಷ್ಟಸಂಶ್ರಯಾಃ

ಹಣ ಸಂಪಾದಿಸುವುದು ಕಷ್ಟ, ಗಳಿಸಿದ ಹಣವನ್ನು ರಕ್ಷಿಸುವುದು ಇನ್ನೂ ಕಷ್ಟ. ಆದಾಯ ಮತ್ತು ಖರ್ಚಿನ ನಿರಂತರ ಲೆಕ್ಕ ನೋವು ನೀಡುತ್ತಲೇ ಇರುತ್ತದೆ. ಹಣ ಎಷ್ಟೆಲ್ಲ ಕಷ್ಟಕ್ಕೆ ಕಾರಣವಾಗುತ್ತದೆ! (ಆದ್ದರಿಂದ ಹಣ ಸಂಪಾದನೆ ಮತ್ತು ಖರ್ಚಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಇರೋಣ)

Leave a Reply