ಇಂದಿನ ಸುಭಾಷಿತ
ಯೇಷಾಂ ಬಾಹುಬಲಂ ನ ಅಸ್ತಿ ಯೇಷಾಂ ನ ಅಸ್ತಿ ಮನೋಬಲಂ । ತೇಷಾಂ ಚಂದ್ರಬಲಂ ದೇವಃ ಕಿಂ ಕರೋತಿ ಅಂಬರೇ ಸ್ಥಿತಂ
ನಮ್ಮಲ್ಲಿ ತೋಳ್ಬಲ(ದೈಹಿಕ ಶಕ್ತಿ)ವೇ ಇಲ್ಲದಿದ್ದರೆ, ಅಥವಾ ಮನೋಬಲವೇ ಇಲ್ಲದೆ ಇರುವಾಗ, ಆಕಾಶದಲ್ಲಿ ಮನೆ ಮಾಡಿಕೊಂಡಿರುವ ಚಂದ್ರ ತಾನೇ ಹೇಗೆ ನಮಗೆ ಒಳಿತು ಮಾಡಬಲ್ಲ? (ನಮ್ಮ ನಮ್ಮ ವಿಧಿಗೆ ನಮ್ಮ ಬಾಹುಬಲ – ಮನೋಭವಗಳೇ ಮುಖ್ಯ ಹೊರತು ಗ್ರಹ ಗತಿಗಳಲ್ಲ)