ಹೆಂಡತಿಯೋ ಪ್ರೇಯಸಿಯೋ! : ಝಿಝೆಕ್ ಹೇಳಿದ ಜೋಕು

ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ಒಮ್ಮೆ ಮಾರ್ಕ್ಸ್, ಏಂಗೆಲ್ಸ್ ಮತ್ತು ಲೆನಿನ್ ಗೆ ಒಂದೇ ಪ್ರಶ್ನೆ ಕೇಳಲಾಯಿತು, “ ನಿಮ್ಮ ಬದುಕಿನಲ್ಲಿ ಹೆಂಡತಿ ಇದ್ದರೆ ಒಳ್ಳೆಯದೋ ಅಥವಾ ಪ್ರೇಯಸಿ ?”

ಪ್ರೇಮದ ವಿಷಯದಲ್ಲಿ ಸಂಪ್ರದಾಯಬದ್ಧನಾದ ಮಾರ್ಕ್ಸ್, ನನಗೆ ಹೆಂಡತಿಯೇ ಇಷ್ಟ ಎಂದ. ಬದುಕನ್ನು ಅದರ ಎಲ್ಲ ವೈವಿಧ್ಯತೆಯೊಂದಿಗೆ ಸಂಭ್ರಮಿಸುವ ಮನಸ್ಥಿತಿಯ ಏಂಗೆಲ್ಸ್, ನನಗೆ ಪ್ರೇಯಸಿಯೇ ಇರಲಿ ಎಂದ. ಆದರೆ ಎಲ್ಲರಿಗೂ ಆಶ್ಚರ್ಯವಾದದ್ದು ಲೆನಿನ್ ನ ಉತ್ತರ ಕೇಳಿ. ಲೇನಿನ್ ನನಗೆ ಹಂಡತಿ ಮತ್ತು ಪ್ರೇಯಸಿ ಇಬ್ಬರೂ ಇದ್ದರೆ ಒಳ್ಳೆಯದು ಎಂದ.

ಹಾಗಾದರೆ ಲೆನಿನ್ ಲ್ಲಿ ಸುಪ್ತವಾಗಿ ಅಪಾರ ಲೈಂಗಿಕ ಆಸಕ್ತಿ ಇತ್ತೆ ಎಂದು ಜನ ತಲೆ ಕೆಡಿಸಿಕೊಳ್ಳುತ್ತಿರುವಾಗ, ಲೆನಿನ್ ಸಮಜಾಯಿಷಿ ಕೊಟ್ಟ.

ಬದುಕಿನಲ್ಲಿ ಹೆಂಡತಿ ಮತ್ತು ಪ್ರೇಯಸಿ ಇಬ್ಬರೂ ಇದ್ದರೆ, ಪ್ರೇಯಸಿಗೆ ಕರೆದಾಗ ಹೆಂಡತಿಯ ಜೊತೆ ಇರುವೆನೆಂದೂ, ಹೆಂಡತಿ ನೆನಪು ಮಾಡಿಕೊಂಡಾಗ ಪ್ರೇಯಸಿಯ ಮನೆಗೆ ಹೋಗುತ್ತಿರುವೆನೆಂದೂ ಹೇಳಿ ಇಬ್ಬರಿಂದಲೂ ತಪ್ಪಿಸಿಕೊಂಡು ಒಂದು ಏಕಾಂತದ ಜಾಗೆಗೆ ಹೋಗಿ I will learn, learn learn.

Leave a Reply