ತ್ರಿವಿಧ ಪಾಪಮುಕ್ತಿಗೆ ತ್ರಿವಿಧ ತಪಸ್ಸು

ತ್ರಿವಿಧಪಾಪಗಳನ್ನು ತ್ಯಜಿಸಿ, ಕಾಯಿಕ, ವಾಚಿಕ, ಮತ್ತು ಮಾನಸಿಕ ಎಂಬ ಮೂರು ರೀತಿಯಲ್ಲೂ ತಪಸ್ಸನ್ನು ಮಾಡಬೇಕು… | ಸಂಗ್ರಹ ಮತ್ತು ಪ್ರಸ್ತುತಿ : ಶ್ರೀ ವಿ.ಎಂ.ಉಪಾಧ್ಯಾಯ

ಪರದ್ರವ್ಯೇಷ್ವಭಿಧ್ಯಾನಂ ಮನಸಾನಿಷ್ಟಚಿಂತನಂ|
ವಿತಥಾಭಿನಿವೇಶಶ್ಚ ತ್ರಿವಿಧಂ ಕರ್ಮಮಾನಸಂ||
ಅರ್ಥ : ಬೇರೆಯವರ ಸಂಪತ್ತನ್ನು ಕುರಿತು ಚಿಂತಿಸುವುದು, ಮನಸ್ಸಿನಲ್ಲಿ ಕೆಟ್ಟ ಯೋಚನೆ – ಯೋಜನೆಗಳನ್ನು ಮಾಡುವುದು, ತಾನಲ್ಲದ್ದನ್ನು ತಾನೆಂದು ಭಾವಿಸುವುದು, ಈ ಮೂರು ಮಾನಸಿಕ ಪಾಪಗಳು.
ಈ ಎಲ್ಲ ತ್ರಿವಿಧಪಾಪಗಳನ್ನು ತ್ಯಜಿಸಿ, ಕಾಯಿಕ, ವಾಚಿಕ, ಮತ್ತು ಮಾನಸಿಕ ಎಂಬ ಮೂರು ರೀತಿಯಲ್ಲೂ ತಪಸ್ಸನ್ನು ಮಾಡಬೇಕು.

ಮಾನಸಿಕ ತಪಸ್ಸು
ಮನಃಪ್ರಸಾದಃ ಸೌಮ್ಯತ್ವಂ ಮೌನಮಾತ್ಮವಿನಿಗ್ರಹಃ|
ಭಾವಸಂಶುದ್ಧಿರಿತ್ಯೇತತ್ ತಪೋ ಮನಸಮುಚ್ಯತೇ|| ಗೀತಾ
ಅರ್ಥ : ಸದಾ ಮನಸ್ಸನ್ನು ಉಲ್ಲಸಿತವಾಗಿ ಇಟ್ಟುಕೊಳ್ಳುವುದು, ಸೌಮ್ಯವಾಗಿರುವುದು, ಮೌನವಾಗಿರುವುದು, ಮನಸ್ಸನ್ನು ಸಾಮಾನ್ಯರೂಪವಾಗಿ ಎಲ್ಲದರಿಂದಲೂ ತಡೆಹಿಡಿಯುವುದು- ಆತ್ಮವಿನಿಗ್ರಹ, ಇತರರೊಡನೆ ವ್ಯವಹರಿಸುವಾಗ ಕಾಪಟ್ಯವಿಲ್ಲದಿರುವುದು-ಭಾವಸಂಶುದ್ಧಿ ಇವುಗಳನ್ನು ಮಾನಸಿಕ ತಪಸ್ಸು ಎನ್ನುತ್ತಾರೆ.

ಶಾರೀರಿಕ ತಪಸ್ಸು
ದೇವ ದ್ವಿಜ ಗುರು ಪ್ರಾಜ್ಞ ಪೂಜನಂ ಶೌಚಮಾರ್ಜವಂ|
ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ|| ಗೀತಾ
ಅರ್ಥ : ದೇವತೆಗಳು, ದ್ವಿಜರು, ಗುರು, ಮತ್ತು ಪ್ರಾಜ್ಞರ ಪೂಜೆಮಾಡುವುದು, ಶುಚಿಯಾಗಿರುವುದು, ಋಜುತ್ವದಿಂದ ಇರುವುದು, ಬ್ರಹ್ಮಚರ್ಯ, ಮತ್ತು ಅಹಿಂಸೆಯನ್ನು ಆಚರಿಸುವುದು, ಇವುಗಳನ್ನು ಶಾರೀರಿಕ ತಪಸ್ಸು ಎನ್ನುತ್ತಾರೆ.

ವಾಚಿಕ ತಪಸ್ಸು
ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಮ್ ಚ ಯತ್|
ಸ್ವಾ ಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ||ಗೀತಾ
ಅರ್ಥ : ಇತರರಿಗೆ ದುಃಖವನ್ನುಂಟುಮಾಡದ ಮಾತು, ಸತ್ಯ, ಕೇಳುಗರಿಗೆ ಪ್ರಿಯವೂ ಹಿತವೂ ಆದದ್ದನ್ನು ಹೇಳುವುದು, ಮತ್ತು ಸ್ವಾಧ್ಯಾಯಮಾಡುವುದು ಇವುಗಳನ್ನು ವಾಚಿಕ ತಪಸ್ಸು ಎನ್ನುತ್ತಾರೆ.

Leave a Reply