ನೀಲಿ ಶಾಯಿಯ ಕೆಂಪು ಪತ್ರ!? : ಜಿಜೆಕ್ ಹೇಳಿದ ಜೋಕು

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಹಿಂದಿನ ಪ್ರಜಾಸತ್ತಾತ್ಮಕ ಜರ್ಮನ್ ಗಣರಾಜ್ಯದ ಕೆಲಸಗಾರನೊಬ್ಬನಿಗೆ ಸೈಬೇರಿಯಾದಲ್ಲಿ ಕೆಲಸ ಸಿಗುತ್ತದೆ. ಸೈಬೇರಿಯಾದಲ್ಲಿ ಆಗ ಇದ್ದ ಕಠಿಣ ಸೆನ್ಸಾರ್ ನಿಯಮಗಳು, ಪತ್ರಗಳನ್ನು ಕದ್ದು ಓದುವ ಪದ್ಧತಿ ಎಲ್ಲ ಬಲ್ಲ ಆ ಕೆಲಸಗಾರ, ತನ್ನ ಗೆಳೆಯನ ಜೊತೆ ಒಂದು ಕೋಡ್ ನಿಶ್ಚಯ ಮಾಡಿಕೊಳ್ಳುತ್ತಾನೆ.

ನೀಲಿ ಶಾಯಿಯಲ್ಲಿ ಬರೆದ ಪತ್ರವಾದರೆ ಆ ಪತ್ರದಲ್ಲಿ ಬರೆದಿರುವುದೆಲ್ಲ ನಿಜ ಮತ್ತು ಕೆಂಪು ಶಾಯಿಯಲ್ಲಿ ಬರೆದ ಪತ್ರವಾದರೆ ಆ ಪತ್ರದ ವಿಷಯವೆಲ್ಲ ಸುಳ್ಳು. ಒಂದು ತಿಂಗಳಾದ ಮೇಲೆ ಜರ್ಮನಿಯ ಕೆಲಸಗಾರ, ಸೈಬೇರಿಯಾದಿಂದ ತನ್ನ ಗೆಳೆಯನಿಗೆ ಪತ್ರ ಬರೆಯುತ್ತಾನೆ ಮತ್ತು ಆ ಪತ್ರವನ್ನ ನೀಲಿ ಶಾಯಿಯಲ್ಲಿ ಬರೆಯಲಾಗಿರುತ್ತದೆ.

“ಇಲ್ಲಿ ಎಲ್ಲ ಅದ್ಭುತವಾಗಿದೆ, ಅಂಗಡಿಗಳು ಸರಿ ರಾತ್ರಿಯವರೆಗೆ ತೆರೆದಿರುತ್ತವೆ, ಊಟ ತಿಂಡಿಗೆ ಯಾವ ತೊಂದರೆಯೂ ಇಲ್ಲ. ಇಲ್ಲಿನ ಟಾಕೀಸ್ಗಳಲ್ಲಿ ವೆಸ್ಟರ್ನ್ ಸಿನೇಮಾಗಳೇ ಹೆಚ್ಚು. ಸುಂದರ ಹೆಂಗಸರು ರಿಲೇಶನ್’ಶಿಪ್ ಗಾಗಿ ಹೇರಳವಾಗಿ ಸಿಗುತ್ತಾರೆ ಆದರೆ ಇಲ್ಲಿ ಕೆಂಪು ಶಾಯಿ ಮಾತ್ರ ಸಿಗ್ತಾ ಇಲ್ಲ.

Leave a Reply