ಓಶೋ ಹೇಳಿದ ಅಸಂಬದ್ಧ ಕಥೆ

ಆತ್ಯಂತಿಕ ಸತ್ಯದ ಬಗ್ಗೆ ನೀವು ಏನೇ ಹೇಳಲು ಪ್ರಯತ್ನ ಮಾಡಿದ ಕ್ಷಣದಲ್ಲಿಯೇ ನಿಮ್ಮ ಮಾತು ಸುಳ್ಳಾಗುತ್ತದೆ… | ಓಶೋ ; ಕನ್ನಡಕ್ಕೆ : ಚಿದಂಬರ ನರೇಂದ್ರ

The moment you say something about the first principle, you go wrong – Osho

ಒಂದು ಸಂಗತಿಯನ್ನು ಅರಿಯಲು ನೀವು ಬುದ್ಧಿ-ಮನಸ್ಸುಗಳನ್ನ (mind) ಬಳಸಿದ ಕ್ಷಣದಲ್ಲಿಯೇ, ಆ ಸಂಗತಿಯನ್ನ ತಿಳಿದುಕೊಳ್ಳುವುದು ನಿಮಗೆ ಅಸಾಧ್ಯವಾಗಿಬಿಡುತ್ತದೆ. ಆಲೋಚನೆಯನ್ನ ಬಿಟ್ಟ ಕ್ಷಣದಲ್ಲಿಯೇ ಸತ್ಯ ನಿಮ್ಮನ್ನ ತುಂಬಿಕೊಳ್ಳುತ್ತದೆ.

ಇಲ್ಲೊಂದು ಸುಂದರ ಕಥೆಯಿದೆ.

ಬುದ್ಧ ಹುಟ್ಟಿದಾಗ ಅವನ ತಾಯಿ ಒಂದು ಮರದ ಕೆಳಗೆ ನಿಂತಿದ್ದಳು. ಬುದ್ಧ ಹುಟ್ಟಿದ್ದು ಅವನ ತಾಯಿ ನಿಂತ ಸ್ಥಿತಿಯಲ್ಲಿ, ಅತ್ಯಂತ ಅಲೌಕಿಕ ರೀತಿಯಲ್ಲಿ.

ತನ್ನ ತಾಯಿಯಿಂದ ಇಳಿದವನೇ ಬುದ್ಧ, ನೆಲದ ಮೇಲೆ ನಿಂತುಕೊಂಡ, ಏಳು ಅಡಿ ದೂರ ನಡೆದು, ಒಂದು ಕೈಯನ್ನು ನೆಲಕ್ಕೆ ಒತ್ತಿ ಇನ್ನೊಂದು ಕೈಯನ್ನು ಆಕಾಶದತ್ತ ಚಾಚಿ ಘೋಷಣೆ ಮಾಡಿದ, “ ಮೇಲಿನ ಮತ್ತು ಕೆಳಗಿನ ಆಕಾಶದಲ್ಲಿ ನಾನೊಬ್ಬನೇ ಪವಿತ್ರ”

ಯಾರೋ ಒಬ್ಬ, ಮಾಸ್ಟರ್ ಉನ್-ಮುನ್ ನ ಪ್ರಶ್ನೆ ಮಾಡಿದ, “ ಈ ಕಥೆಯ ಬಗ್ಗೆ ನೀನು ಏನು ಹೇಳುತ್ತೀ?”

“ ಬುದ್ಧ ಹುಟ್ಟಿದ ದಿನ ನಾನು ಅಲ್ಲೇ ಇದ್ದೆ ( ಆ ಮನುಷ್ಯನಿಗೆ ಆಶ್ಚರ್ಯ ಬುದ್ಧ ಹುಟ್ಟಿದಾಗ ಉನ್-ಮುನ್ ತಾನು ಅಲ್ಲಿದ್ದೆ ಎಂದು ಹೇಳಿದ್ದನ್ನ ಕೇಳಿ ), ಬುದ್ಧ ಅವನ ತಾಯಿಯಿಂದ ಇಳಿದು ಬರುತ್ತಿದ್ದಂತೆಯೇ, ನಾನು ಅವನನ್ನ ಹೊಡೆದು ಕೊಂದು, ಹಸಿದ ನಾಯಿಗೆ ಹಾಕಿಬಿಟ್ಟೆ. ಇಡೀ ಜಗತ್ತು ಸಮಾಧಾನದಿಂದ ನಿಟ್ಟುಸಿರು ಬಿಟ್ಟಿತು.”

ಪ್ರಶ್ನೆ ಕೇಳಿದ ಮನುಷ್ಯನಿಗೆ ಮಾಸ್ಟರ್ ಉನ್-ಮುನ್ ನ ಉತ್ತರದಿಂದ ಸಮಾಧಾನವಾಗಲಿಲ್ಲ. ಅವನು ಇದೇ ಪ್ರಶ್ನೆಯೊಂದಿಗೆ ಮಾಸ್ಟರ್ ಲಿನ್-ಚೀ ಹತ್ತಿರ ಹೋದ.

“ ತನ್ನ ಹುಟ್ಟಿದ ದಿನದ ಬಗ್ಗೆ ಬುದ್ಧ ಹೇಳಿದ್ದು ಸಂಪೂರ್ಣ ಸುಳ್ಳು, ಅವನಿಗೆ ಮೂವತ್ತು ಛಡೀ ಏಟು ಕೊಡುತ್ತೇನೆ ಹಾಗೆಯೇ ಝೆನ್ ಮಾಸ್ಟರ್ ಉನ್-ಮುನ್ ಹೇಳಿದ್ದು ಕೂಡ ಸತ್ಯಕ್ಕೆ ದೂರ, ಅವನೂ ಮೂವತ್ತು ಛಡಿ ಏಟುಗಳಿಗೆ ಅರ್ಹ. ಮತ್ತು ನಾನು ಈಗ ಹೇಳಿದ್ದರಲ್ಲಿ ಸಹ ಯಾವ ಸತ್ಯವಿಲ್ಲ ಹಾಗಾಗೆ ನಾನೂ ಮೂವತ್ತು ಛಡಿ ಏಟು ತಿನ್ನಲು ಸಿದ್ದ.”

ಮಾಸ್ಚರ್ ಲಿನ್-ಚೀ ಆ ಆಗಂತುಕನಿಗೆ ತಿಳಿ ಹೇಳಲು ಪ್ರಯತ್ನ ಮಾಡಿದ.

ಹೌದು, ಆತ್ಯಂತಿಕ ಸತ್ಯದ ಬಗ್ಗೆ ನೀವು ಏನೇ ಹೇಳಲು ಪ್ರಯತ್ನ ಮಾಡಿದ ಕ್ಷಣದಲ್ಲಿಯೇ ನಿಮ್ಮ ಮಾತು ಸುಳ್ಳಾಗುತ್ತದೆ. ಆತ್ಯಂತಿಕ ಸತ್ಯದ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ, ನಿಜ ನೀವು ಇದನ್ನ ಅನುಭವಿಸಬಹುದು . ಬುದ್ದಿ-ಮನಸ್ಸುಗಳನ್ನ ಕಳಚಿಟ್ಟು ಈ ಸತ್ಯವನ್ನ ಅನುಭವಿಸಿ.

Osho, The first principle – Talks on Zen, Ch.5 (excerpt)

1 Comment

  1. ತುಂಬಾ ಅರ್ಥಗರ್ಭಿತವಾಗಿದೆ. ಆದರೂ ಅತ್ಯಂತಿಕ ಸತ್ಯಗಳನ್ನು ಹೇಗೆ ಅನುಭವಿಸಬೇಕು ಎಂದು ಓಷೋ ಹೇಳಿದ್ದರ ಬಗ್ಗೆ ಗೊಂದಲವಿದೆ. ಯಾವುದು ಅತ್ಯಂತಿಕ ಸತ್ಯ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಹೇಗೆ?

Leave a Reply