ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಜಗತ್ತಿನ ಮೊದಲ ಗಗನ ಯಾತ್ರಿ ರಷ್ಯಾದ ಯೂರಿ ಗಗಾರಿನ್, ಅಂತರಿಕ್ಷಕ್ಕೆ ಹೋಗಿ ಬಂದ ಮೇಲೆ ರಷ್ಯಾದ ಕಮ್ಯುನಿಸ್ಟ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ನಿಕಿಟ ಕ್ರುಶ್ಚೇವ್ ನ ಭೇಟಿಮಾಡಿ ಅವನಿಗೆ ಗೌಪ್ಯವಾಗಿ ಒಂದು ಸಂಗತಿ ತಿಳಿಸುತ್ತಾನೆ :
“ ನಿನಗೆ ಗೊತ್ತಾ ಕಾಮ್ರೇಡ್, ನಾನು ಅಂತರಿಕ್ಷದಲ್ಲಿ ಸ್ವರ್ಗ, ದೇವರು ಮತ್ತು ದೇವದೂತರನ್ನ ನೋಡಿದೆ, ಕ್ರಿಶ್ಚಿಯನ್ನರು ದೇವರ ಬಗ್ಗೆ ಹೇಳೋದು ನಿಜ ಸಂಗತಿ !” ಈ ಮಾತು ಕೇಳಿದ ಕೂಡಲೇ ಕ್ರುಶ್ಚೇವ್, ಯೂರಿಯ ಕಿವಿಯಲ್ಲಿ ಪಿಸು ನುಡಿದ : “ ನನಗೆ ಗೊತ್ತು ಯೂರಿ, ಆದರೆ ಬೇರೆ ಯಾರಿಗೂ ಈ ವಿಷಯ ಹೇಳಬೇಡ !”
ಒಂದು ವಾರದ ನಂತರ, ಯೂರಿ ಗಗಾರಿನ್, ವ್ಯಾಟಿಕನ್ ಸಿಟಿ ಗೆ ಭೇಟಿ ಕೊಟ್ಟು ಪೋಪ್ ರನ್ನು ಭೇಟಿ ಮಾಡಿ ಅವರಿಗೆ ಗುಟ್ಟಾಗಿ ಹೇಳಿದ : “ ನಿಮಗೆ ಗೊತ್ತಾ ಫಾದರ್, ನಾನು ಅಂತರಿಕ್ಷದಲ್ಲಿ ಎಲ್ಲ ಕಡೆ ಹುಡುಕಾಡಿದೆ, ನನಗೆ ಯಾವ ಸ್ವರ್ಗ, ದೇವರು ಮತ್ತೂ ದೇವದೂತರೂ ಕಾಣಿಸಲಿಲ್ಲ !” ಯೂರಿಯ ಮಾತನ್ನ ಪೋಪ್ ಅರ್ಧದಲ್ಲೇ ತಡೆದರು ; “ಯೂರಿ, ನನಗೆ ಈ ವಿಷಯ ಗೊತ್ತು ಆದರೆ ನೀನು ಈ ಸಂಗತಿ ಯಾರಿಗೂ ಹೇಳಬೇಡ !”