ಹೆಂಗಸರಲ್ಲಿ ತಲೆ ನೋವಿನ ಹುಟ್ಟಿನ ಕಾರಣ ಓಶೋ ವಿವರಿಸುತ್ತಾರೆ… | ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಹೀಗೊಂದು ಕಥೆ,
ಈಡನ್ ನ ಉದ್ಯಾನವನದಿಂದ ಆ್ಯಡಂ ನನ್ನು ಕೂಗಿ ಕರೆದ ಭಗವಂತ,
“ ಆ್ಯಡಂ, ನಾನು ನಿನಗೆ ಚುಂಬಿಸುವುದನ್ನ ಕಲಿಸುತ್ತೇನೆ”
“ ಚುಂಬನ ಹಾಗೆಂದರೇನು?” ಆ್ಯಡಂ ಪ್ರಶ್ನೆ ಮಾಡಿದ.
“ ಈವ್ ಳ ಹತ್ತಿರ ಹೋಗಿ ಅವಳ ದೇಹಕ್ಕೆ ನಿನ್ನ ತುಟಿಗಳನ್ನು ಒತ್ತು”
ಭಗವಂತ ಹೇಳಿದಂತೆ ಮಾಡಿ, ಆ್ಯಡಂ ವಾಪಸ್ಸಾದ.
“ ನಾನು ನಿನಗೆ ಈಗ ಪ್ರೇಮಿಸುವುದನ್ನ ಕಲಿಸುತ್ತೇನೆ” ಹೇಳಿದ ಭಗವಂತ.
“ ಪ್ರೇಮ, ಹಾಗೆಂದರೇನು ?” ಆ್ಯಡಂ ಕೇಳಿದ.
ಭಗವಂತನಿಂದ ಪ್ರೇಮ ಹೇಗೆ ಮಾಡಬೇಕೆಂಬುದನ್ನು ಕಲಿತು ಆ್ಯಡಂ, ಈವ್ ಳ ಹತ್ತಿರ ಹೋದ.
ಹಾಗೆ ಹೋದ ಆ್ಯಡಂ, ಕೆಲವೇ ನಿಮಿಷಗಳಲ್ಲಿ ವಾಪಸ್ಸಾಗಿ, ಭಗವಂತನನ್ನು ಪ್ರಶ್ನೆ ಮಾಡಿದ.
“ ಭಗವಂತ ತಲೆ ನೋವು ಎಂದರೇನು ?”
ಹೀಗೆ ಶುರುವಾಯ್ತು ಜಗತ್ತಿನಲ್ಲಿ ಹೆಂಗಸರ ತಲೆ ನೋವಿನ ಕಥೆ.
ಆದ್ದರಿಂದ ತಲೆನೋವು ಎಂದಾಗ ಅವಳನ್ನ ಪೀಡಿಸ ಬೇಡಿ, ಇದು ಶುರುವಾದದ್ದು ಈವ್ ಳಿಂದ,
ಮೊದಲ ಬಾರಿ ಆ್ಯಡಂ ಆಕೆಯನ್ನ ಪ್ರೇಮಿಸಿದಾಗಿನಿಂದ!
Osho, Sufis : The people of the path – Talks on Sufism, Vol 1, Ch 12, Q3 (excerpt)