ನೋಡುವ ದೃಷ್ಟಿ ಬದಲಾದಂತೆ ನೀವು ನೋಡುತ್ತಿರುವ ದೃಶ್ಯದ ಅರ್ಥವೂ ಬದಲಾಗುತ್ತದೆ. ಇದನ್ನ ಅರ್ಥ ಮಾಡಿಸುವ ಕ್ಲಾಸಿಕ್ ಸೋವಿಯತ್ ಜೋಕ್ ಹೀಗಿದೆ… | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಅಧ್ಯಕ್ಷ ಬ್ರೆಝ್ನಿವ್ ತೀರಿಕೊಂಡಾಗ ಅವನನ್ನ ನರಕಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಬ್ರೆಝ್ನಿವ್ ಹಿರಿಯ ನಾಯಕನಾಗಿದ್ದರಿಂದ ನರಕದಲ್ಲಿ ಅವನಿಗೆ ಇಷ್ಟವಾದ ಜಾಗ ಆಯ್ಕೆ ಮಾಡಿಕೊಳ್ಳಲು ಅವನಿಗೆ ಅವಕಾಶ ಮಾಡಿಕೊಡಲಾಗುತ್ತದೆ. ನರಕದ ಗೈಡ್ ಬ್ರೆಝ್ನಿವ್ ಗೆ ಎಲ್ಲ ಜಾಗ ತೋರಿಸುತ್ತಾ ಹೋಗುತ್ತಾನೆ. ಒಂದು ಜಾಗೆಯಲ್ಲಿ ರೂಮಿನ ಬಾಗಿಲು ತೆರೆದಾಗ ಅಲ್ಲಿ ಸೋಫಾದ ಮೇಲೆ ಅಧ್ಯಕ್ಷ ಕ್ರುಶ್ಚೇವ್, ಮರ್ಲೀನ್ ಮನ್ರೋ ಜೊತೆ ಚಕ್ಕಂದ ಆಡುತ್ತ ಕುಳಿತಿರುತ್ತಾನೆ. ಮರ್ಲೀನ್, ಕ್ರುಶ್ಚೇವ್ ನ ತೊಡೆಯ ಮೇಲೆ ಕುಳಿತುಕೊಂಡು ಅವನನ್ನು ಚುಂಬಿಸುತ್ತಿರುತ್ತಾಳೆ.
ಈ ದೃಶ್ಯ ನೋಡಿದ ಬ್ರೆಝ್ನಿವ್ ಖುಶಿಯಿಂದ ಚೀರುತ್ತಾನೆ, “ ನನಗೆ ಈ ಜಾಗ ಬೇಕು.”
“ ಅಷ್ಟು ಉತ್ಸಾಹ ಬೇಡ ಬ್ರೆಝ್ನಿವ್, ಇದು ಕ್ರುಶ್ಚೇವ್ ನ ನರಕದ ಜಾಗೆ ಅಲ್ಲ ಬದಲಾಗಿ ಮರ್ಲೀನ್ ಮನ್ರೋಳಿಗೆ ನೀಡಲಾಗಿರುವ ಶಿಕ್ಷೆಯ ಜಾಗ”… ನರಕದ ಗೈಡ್ ಸಮಾಧಾನದಿಂದ ಉತ್ತರಿಸುತ್ತಾನೆ.
————-
ಈ ಜೋಕನ್ನು ಬಹುಶಃ ಅಮೇರಿಕಾ ಅಥವಾ ಪಶ್ಚಿಮ ಯುರೋಪಿನಲ್ಲಿ ಸೃಷ್ಟಿಸಲಾಗಿದೆ. ಅಮೇರಿಕಾದವರು ಈ ರೀತಿ ಸಾಂಸ್ಕೃತಿಕ ಆಕ್ರಮಣ ಮಾಡುವುದರಲ್ಲಿ ಎತ್ತಿದ ಕೈ