ವಿಶ್ವಧರ್ಮ ಎನ್ನುವುದು ಅಸ್ತಿತ್ವಕ್ಕೆ ಬರುವುದಾದರೆ… : ವಿವೇಕ ವಿಚಾರ

ಇಷ್ಟ ಸಿದ್ಧಾಂತವೆಂದರೆ, ಮನುಷ್ಯನಿಗೆ ತನ್ನದೇ ಧರ್ಮವನ್ನು ಹುಡುಕಿಕೊಳ್ಳುವ ಅವಕಾಶವನ್ನು ಕೊಡುವುದು. ವಿಶ್ವಧರ್ಮದಲ್ಲಿ ಅದಕ್ಕೆ ಅವಕಾಶವಿರಬೇಕು” ~ ಸ್ವಾಮಿ ವಿವೇಕಾನಂದ


ಗತ್ತಿನಲ್ಲಿ ಎಂದಾದರೂ ಒಂದು ವಿಶ್ವಧರ್ಮ ಎನ್ನುವುದು ಅಸ್ತಿತ್ವಕ್ಕೆ ಬರುವುದಾದರೆ ಅದ ಕಾಲ ದೇಶಗಳ ಎಲ್ಲೆಯನ್ನು ಮೀರಿರುವಂಥದ್ದಾಗಿರಬೇಕು; ಅದು ತಾನು ಯಾವ ದೇವರನ್ನು ಕುರಿತು ಬೋಧಿಸುತ್ತದೆಯೋ ಆ ದೇವರಷ್ಟೇ ಅನಂತವಾಗಿರಬೇಕು. ಅದು ಬ್ರಾಹ್ಮಣ ಧರ್ಮ, ಬೌದ್ಧ ಧರ್ಮ, ಕ್ರೈಸ್ತ ಧರ್ಮ, ಮಹಮ್ಮದೀಯ ಧರ್ಮ ಎಂದು ಮಾತ್ರವಾಗಿರದೆ ಈ ಎಲ್ಲದರ ಮೊತ್ತವಾಗಿರಬೇಕು. ಹಾಗೆ ಆಗಿದ್ದೂ ಬೆಳವಣಿಗೆಗೆ ಅದರಲ್ಲಿ ಅನಂತ ಅವಕಾಶವಿರಬೇಕು. ಆ ಧರ್ಮ ತನ್ನ ವೈಶಾಲ್ಯದಿಂದ ತನ್ನ ಅನಂತ ಬಾಹುಗಳನ್ನು ಚಾಚಿ, ಯಾವ ಭೇದವೂ ಇಲ್ಲದಂತೆ ಎಲ್ಲರನ್ನೂ ಆಲಂಗಿಸಿಕೊಳ್ಳಬೇಕು.

ಆ ಧರ್ಮದ ಆಡಳಿತ ವ್ಯವಸ್ಥೆಯಲ್ಲಿ ತನ್ನನ್ನು ಒಪ್ಪದವರನ್ನು ಹಿಂಸಿಸುವುದಕ್ಕಾಗಲೀ, ಇತರ ಧರ್ಮಗಳ ವಿಷಯದಲ್ಲಿ ಅಸಹನೆಗಾಗಲೀ ಸ್ವಲ್ಪವೂ ಅವಕಾಶವಿರಕೂಡದು. ಪ್ರತಿಯೊಬ್ಬ ಪುರುಷನಲ್ಲಿಯೂ ಪ್ರತಿಯೊಬ್ಬಳು ಸ್ತ್ರೀಯಲ್ಲಿಯೂ ಇರುವ ದಿವ್ಯತೆಯನ್ನು ಅದು ಗುರುತಿಸಬೇಕು. ಅದರ ವ್ಯಾಪ್ತಿಯೆಲ್ಲವೂ ಅದರ ಶಕ್ತಿಯೆಲ್ಲವೂ ಮಾನವತೆ ತನ್ನ ನೈಜ, ದಿವ್ಯ ಸ್ವಭಾವವನ್ನು ಅರಿಯಲು ನೆರವಾಗುವಂತಿರಬೇಕು.

ಮಾನವ ವರ್ಗಕ್ಕೆ ಭಿನ್ನ ಧರ್ಮಗಳು ಏಕವಾದ ಒಂದೇ ಧರ್ಮದ ಅನಂತ ಅಭಿವ್ಯಕ್ತಿಗಳೆಂಬುದನ್ನು ಕಲಿಸಬೇಕು. ಇದರಿಂದ ಪ್ರತಿಯೊಬ್ಬರೂ ತಮಗೆ ಯಾವುದು ಉತ್ತಮ ಮಾರ್ಗವೋ ಅದನ್ನು ಆರಿಸಿಕೊಳ್ಳುವರು. ಇಷ್ಟ ಸಿದ್ಧಾಂತವೆಂದರೆ, ಮನುಷ್ಯನಿಗೆ ತನ್ನದೇ ಧರ್ಮವನ್ನು ಹುಡುಕಿಕೊಳ್ಳುವ ಅವಕಾಶವನ್ನು ಕೊಡುವುದು. ವಿಶ್ವಧರ್ಮದಲ್ಲಿ ಅದಕ್ಕೆ ಅವಕಾಶವಿರಬೇಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.