ಮಥನ ಮತ್ತು ನಿರಂತರ ಸಂಘರ್ಷದಿಂದ ನಮ್ಮೊಳಗಿನ ದೀರ್ಘಕಾಲಿಕ ಅಂತಃಸತ್ವವನ್ನು ಕಂಡುಕೊಳ್ಳಬೇಕು. ಕೇವಲ ಮೇಲ್ನೋಟಕ್ಕೆ ಕಾಣುವ, ಬೇಗನೇ ಮಾಸಿಹೋಗುವ ರೂಪವಷ್ಟೇ, ದೇಹವಷ್ಟೇ ನಾವಲ್ಲ ಅನ್ನೋದನ್ನು ಈ ಸಂದೇಶ ಸರಳವಾಗಿ ಸಾರುತ್ತದೆ…
ಹಾಲಿಗೆ ಕಷ್ಟ ಕೊಟ್ಟರೆ ಮೊಸರು ಬರುತ್ತೆ.
ಮೊಸರನ್ನ ಸತಾಯಿಸಿದರೆ ಬೆಣ್ಣೆ ಬರುತ್ತೆ.
ಬೆಣ್ಣೆಗೆ ಬೆಂಕಿಯಿಟ್ಟರೆ ತುಪ್ಪ ಬರುತ್ತೆ.
ಹಾಲಿಗಿಂತ ಮೊಸರಿಗೆ ಬೆಲೆ ಜಾಸ್ತಿ, ಮೊಸರಿಗಿಂತ ಬೆಣ್ಣೆಗೆ ಬೆಲೆ ಜಾಸ್ತಿ, ಬೆಣ್ಣೆಗಿಂತ ತುಪ್ಪಕ್ಕೆ ಬೆಲೆ ಜಾಸ್ತಿ.
ಹಾಲು ಉಪಯೋಗಕ್ಕೆ ಬರುವ ವಸ್ತುವೇ, ಆದರೆ ಅದರ ಬಳಕೆ ಒಂದು ದಿನ ಮಾತ್ರ. ಆಮೇಲೆ ಅದು ಕೆಡುತ್ತೆ.
ಹಾಲಲ್ಲಿ ಒಂದು ಚುಕ್ಕೆ ಮಜ್ಜಿಗೆ ಹಾಕಿದರೆ ಅದು ಮೊಸರಾಗುತ್ತೆ, ಆದರೆ ಎರಡೇ ದಿನ ಚೆನ್ನಾಗಿರುತ್ತೆ.
ಮೊಸರನ್ನ ಸತಾಯಿಸಿದರೆ ಬೆಣ್ಣೆ ಬರುತ್ತೆ, ಆದರೆ ಅದು ಸಹ ಮೂರು ದಿನ ಚೆನ್ನಾಗಿರುತ್ತೆ.
ಬೆಣ್ಣೆಯನ್ನ ಕಾಯಿಸಿದಾಗ ತುಪ್ಪ ಬರುತ್ತೆ, ಆ ತುಪ್ಪ ಯಾವತ್ತೂ ಕೆಡುವುದಿಲ್ಲ.
ಒಂದು ದಿನದಲ್ಲಿ ಹಾಳಾಗೊ ಹಾಲಲ್ಲಿ ಯಾವತ್ತೂ ಕೆಡದಿರೊ ತುಪ್ಪ ಅಡಗಿರುತ್ತೆ.
ಅದೇ ರೀತಿ ನಿಮ್ಮ ಮನಸ್ಸಿನಲ್ಲಿ ಕೂಡ ಲೆಕ್ಕವಿಲ್ಲದಷ್ಟು ಶಕ್ತಿ, ಸಾಮರ್ಥ್ಯ ಅಡಗಿರುತ್ತೆ. ಅದಕ್ಕೆ ಒಳ್ಳೆಯ ಆಲೋಚನೆಗಳನ್ನ ತುಂಬಿ ನಿಮಗೆ ನೀವೇ ಚಿಂತನೆ ಮಾಡಿ.
ಯಾವುದೇ ಸಮಸ್ಯೆ, ಗುರಿ ಬಂದರೂ ಇದೇ ರೀತಿ ವಿಶ್ಲೇಷಣೆ ಮಾಡಿ..
ಆಗ ನೀವು ಜೀವನದಲ್ಲಿ ಯಾವತ್ತೂ ಸೋಲುವುದಿಲ್ಲ. ಧೈರ್ಯವಾಗಿ, ಸಮರ್ಥವಾಗಿ ಮುನ್ನುಗ್ಗುತ್ತೀರಿ….ಗೆಲವುವನ್ನ ಪಡೆಯುತ್ತೀರಿ!
(ವಾಟ್ಸಾಪ್ ಸಂದೇಶ)