ಮೂಲ: ಮನ್ಸೂರ್ ಅಲ್ ಹಲ್ಲಾಜ್ | ಕನ್ನಡಕ್ಕೆ : ಸುನೈಫ್
ನನ್ನೊಡೆಯನ ಕಂಡೆನು
ಹೃದಯದ ಕಂಗಳಲಿ
ನೀನಾರೆಂದು ಕೇಳಿದರೆ
ನೀನು ಅಂದು ಬಿಟ್ಟ
ಅದರ ಮೇಲೆ
ಎಲ್ಲಿ ಎಂದು ಕೇಳುವುದು ಹೇಗೆ
ಎಲ್ಲೆಂದರೆ ನೀನು ಇರುವಲ್ಲಿಯೇ
ನೀನೀಗ ಕಲ್ಪನೆಗೆ ಜಾರಬೇಡ
ಜಾರಿದರೆ ನೀನೆಲ್ಲಿರುವೆಯೆಂದು
ನಮಗೆಲ್ಲ ತಿಳಿದು ಬಿಡುತ್ತದೆ
ನೀನೆಂದರೆ ಎಲ್ಲೆಡೆಯೂ ಇರುವ
ಅವನೇ ಅಲ್ಲವೇ
ಆದರೂ ನೀನೆಲ್ಲೂ ಇಲ್ಲ ನೋಡು
ಹೇಳು, ಎಲ್ಲಿರುವೆ ನೀನು?
ನಾನು ಶರಣೆಂದರೆ
ನನ್ನ ಶರಣಾಗತಿಯೂ ಶರಣೆನ್ನುವುದು
ಮತ್ತು ನೀನು ಕಾಣಿಸಿಕೊಳ್ಳುವುದು
ನನ್ನ ಶರಣಾಗತಿಯಲ್ಲಿ