ನೈತಿಕತೆ, ಸ್ವರ್ಗ, ನರಕ, ಇತ್ಯಾದಿ…

ನೀವು ಯಾರನ್ನ ಮಹಾ ನೈತಿಕ ಮನುಷ್ಯರೆಂದು ತಿಳಿದಿದ್ದೀರೋ ಅವರು ಕೇವಲ ತಮ್ಮ ಭಾವನೆಗಳನ್ನ ಅದುಮಿಟ್ಟುಕೊಂಡ ಮನುಷ್ಯರು, ಮಹಾ ಅಹಂಕಾರದ ಮತ್ತು ಎಲ್ಲ ಥರದ ಅದುಮಿಟ್ಟ ಭಾವನಗಳನ್ನ ತಮ್ಮೊಳಗೆ ತುಂಬಿಕೊಂಡು ನರಳುತ್ತಿರುವ ಮನುಷ್ಯರು… ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

The people you think are moral are just repressed people, egoistic, carrying all sorts of repressed desires in them. Once an opportunity is given to them, they will explode – Osho

ಯಾವುದನ್ನ ನೀವು ನೈತಿಕತೆ ಎಂದು ಹೊತ್ತು ಮೆರೆಯುತ್ತೀರೋ ಅದು ಕೇವಲ ಭಾವನೆಗಳ ಅದುಮಿಡುವಿಕೆಯೇ ಹೊರತು ಬೇರೇನಲ್ಲ.

ಭೂಮಿಯ ಮೇಲೆ ನೈತಿಕತೆಯ ಅತ್ಯುತ್ಕೃಷ್ಟ ಉದಾಹರಣೆಯಂತಿದ್ದ ಹೆಂಗಸೊಬ್ಬಳು ತನ್ನ ಸಾವಿನ ನಂತರ ತನ್ನನ್ನು ನರಕದಲ್ಲಿ ಕಂಡು ಆಶ್ಚರ್ಯಚಕಿತಳಾದಳು. ಕೂಡಲೇ ಗಾಬರಿಯಿಂದ ಸೆಂಟ್ ಪೀಟರ್ ಗೆ ಫೋನ್ ಮಾಡಿ ದೂರು ಸಲ್ಲಿಸಿದಳು. ಸ್ವರ್ಗದಲ್ಲಿ ತಾತ್ಕಾಲಿಕವಾಗಿ ಜಾಗ ಫುಲ್ ಆಗಿರುವುದರಿಂದ ಕೆಲ ಸಮಯ ಕಾಯುವಂತೆ ಸೆಂಟ್ ಪೀಟರ್ ಆ ಹೆಂಗಸಿಗೆ ಸಲಹೆ ನೀಡಿದರು.

ಎರಡು ವಾರಗಳ ನಂತರ ಆ ಹೆಂಗಸು, ಸೆಂಟ್ ಪೀಟರ್ ಗೆ ಮತ್ತೆ ಫೋನ್ ಮಾಡಿದಳು, “ ಇಲ್ಲಿ ನನಗೆ ಅಲ್ಕೋಹಾಲ್ ಕುಡಿಯಲು ಮತ್ತು ಸಿಗರೇಟು ಸೇದಲು ಕಲಿಸುತ್ತಿದ್ದಾರೆ. ಆದಷ್ಟು ಬೇಗೆ ನನ್ನ ಸ್ವರ್ಗಕ್ಕೆ ಕರೆಸಿಕೊಳ್ಳಿ” ಎಂದು ಆ ಹೆಂಗಸು ಅಂಗಲಾಚಿದಳು.
ಆದರೆ ಸೆಂಟ್ ಪೀಟರ್ , ಇನ್ನು ಕೆಲವೇ ದಿನಗಳಲ್ಲಿ ಸ್ವರ್ಗದಲ್ಲಿ ಜಾಗ ಖಾಲೀ ಆಗುವ ಸಾಧ್ಯತೆ ಇದೆಯೆಂದೂ ಅಲ್ಲಿಯವರೆಗೆ ಸಂಯಮ ಕಾಯ್ದುಕೊಳ್ಳಲು ಆ ಹೆಂಗಸಿಗೆ ಮನವಿ ಮಾಡಿದರು.

ಮತ್ತೆ ಎರಡು ವಾರದ ನಂತರ ಆ ಮಹಾ ನೈತಿಕ ಹೆಂಗಸು, ಸೆಂಟ್ ಪೀಟರ್ ಗೆ ಫೋನ್ ಮಾಡಿದಳು, “ ಹಲೋ ಪೀಟರ್, ನಾನು ಹಿಂದೆ ಮಾಡಿದ ಮನವಿಯನ್ನೆಲ್ಲ ಮರೆತು ಬಿಡು. ನಿನಗೂ ನಿಜವಾಗಿ ಖುಶಿ ಬೇಕಾಗಿದ್ದರೆ ಇಲ್ಲಿ ಬಾ. ಇಲ್ಲಿ ಯಾವುದಕ್ಕೂ ನಿರ್ಬಂಧವಿಲ್ಲ.”

ನೀವು ಯಾರನ್ನ ಮಹಾ ನೈತಿಕ ಮನುಷ್ಯರೆಂದು ತಿಳಿದಿದ್ದೀರೋ ಅವರು ಕೇವಲ ತಮ್ಮ ಭಾವನೆಗಳನ್ನ ಅದುಮಿಟ್ಟುಕೊಂಡ ಮನುಷ್ಯರು, ಮಹಾ ಅಹಂಕಾರದ ಮತ್ತು ಎಲ್ಲ ಥರದ ಅದುಮಿಟ್ಟ ಭಾವನಗಳನ್ನ ತಮ್ಮೊಳಗೆ ತುಂಬಿಕೊಂಡು ನರಳುತ್ತಿರುವ ಮನುಷ್ಯರು. ಇಂಥವರಿಗೆ ನೀವು ಕೇವಲ ಒಂದೇ ಒಂದು ಅವಕಾಶಕೊಟ್ಟು ನೋಡಿ ಹೇಗೆ ಸ್ಫೋಟಗೊಳ್ಳುತ್ತಾರೆಂದು. ಭಯ ಮತ್ತು ಅತಿಯಾಸೆ ಕಾರಣವಾಗಿ ಇಂಥ ಮನುಷ್ಯರು ತಮ್ಮೊಳಗಿನ ಸಹಜ ಭಾವನೆಗಳನ್ನು ಹತ್ತಿಕ್ಕಿ ನಾನಾ ವಿಧವಾದ ತೊಂದರೆಗಳಿಂದ ಬಳಲುತ್ತಿದ್ದಾರೆ.

Osho, Ecstasy : The Forgotten Language, Ch 1 (excerpt)

2 Comments

  1. ನೈತಿಕತೆ , ಸ್ವರ್ಗ , ನರಕ ಇತ್ಯಾದಿ -ಮನೋ ವಿಕಾಸಕ್ಕೆ ಕಾರಣವಾಗುವಂತ ಬರಹ , ತುಂಬಾ ಚೆನ್ನಾಗಿ ಬರೆದಿದ್ದೀರಿ,

  2. ಬುದ್ಧ ನ ಕುರಿತ ತಿಳುವಳಿಕೆ ನೀಡುವ ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಸಲಾಂ….

Leave a Reply