ಮೂಲ ~ ಯೂನುಸ್ ಎಮ್ರಿ | ಕನ್ನಡಕ್ಕೆ: ಸುನೈಫ್
ಕಂಗಳ ಕಾಂತಿ ಉಳಿದಿರುವುದು ನಿನ್ನ ಕಾಣಲು,
ಕೈಗಳು ಬಲ ಉಳಿಸಿಕೊಂಡಿರುವುದು ನಿನ್ನ ನೇವರಿಸಲು,
ನಾನಿಂದು ಹಿಡಿದ ಹಾದಿ ನಿನ್ನ ತಲುಪಲು,
ನಾಳೆಯೊಂದು ಬೆಳಗುವುದು ನಿನ್ನ ಸೇರಲು;
ನನ್ನ ಪ್ರೇಮದ ಕಾವು ನಿನಗರಿಯಲು!
ಈ ಪ್ರೇಮಕೆ ನಿನ್ನ ಸ್ವರ್ಗ ಸಮನಲ್ಲ,
ಅದು ನಿನ್ನ ಸ್ತುತಿಸುವ ಭಕ್ತರಿಗಿರಲಿ;
ಹೂರಿಯರ ತುಂಬಿಸಿಟ್ಟ ಮನೆ ಮಾತ್ರವದು,
ಅವರನ್ನಪ್ಪುವ ಬಯಕೆ ನನಗಿಲ್ಲ.
ಕರುಳ ಕುಡಿಗಳ ಮೋಹ ತೊರೆದು
ನಿನ್ನ ಮೋಹದ ಮೋಡಿಗೆ ಬಿದ್ದಿರುವೆನು.
ಯೂನುಸ್ ನಿನ್ನ ವಿರಹದಲ್ಲಿರುವನು,
ಹೇಳು, ಅವನಿಗಾಗಿ ನಿನ್ನ ಹಂಬಲ
ಅದಕೂ ಮಿಗಿಲೆಂದು!
ನಿನ್ನೆಲ್ಲ ಅನುಗ್ರಹಗಳು ವಿಶ್ವಾಸಿಗಳ ಮೇಲಿರಲಿ
ನನಗೆ ಚೂರು ಕರುಣೆ ತೋರು,
ಈ ದಾರಿಯ ಸುಗಮಗೊಳಿಸು.
Like this:
Like Loading...
Related