ಅದು ನೀನೇ ಆಗಿರಬೇಕು! ; ರಮದಾನ್ ಕಾವ್ಯ ವ್ರತ | ಸೂಫಿ Corner

ಮೂಲ: ಆಲಾ ಅಲ್ ದೌಲ್ ಸಿಮ್ನಾನಿ | ಕನ್ನಡಕ್ಕೆ: ಸುನೈಫ್
ನಾನು ಇದ್ದೆನೆಂಬುದು ಹೌದು,
ಈಗ ನಾನೆಂಬುದಿಲ್ಲ
'ನಾನು' ಇರುವುದೇ ಆದರೆ
ಅದು ಖಂಡಿತಾ ನೀನೇ ಆಗಿರಬೇಕು

ಚಾರವೊಂದು ನನ್ನನಪ್ಪಿ
ಬೆಚ್ಚಗಿರಿಸುತ್ತದೆಯಾದರೆ
ಆ ಕೌದಿ ಖಂಡಿತಾ ನೀನೇ ಆಗಿರಬೇಕು

ನಿನ್ನ ಪ್ರೇಮದ ದಾರಿಯಲ್ಲಿ
ಉಳಿಯಲಿಲ್ಲ ಏನೊಂದೂ;
ದೇಹವೂ ಇಲ್ಲ, ಆತ್ಮವೂ ಇಲ್ಲ

ದೇಹವಿದೆಯೆಂದರೆ
ಆತ್ಮವಿದೆಯಾದರೆ
ಸಂಶಯವೇ ಇಲ್ಲ
ಅದು ಖಂಡಿತಾ ನೀನೇ ಆಗಿರಬೇಕು

Leave a Reply