ನಜ್ರಾನಿ ಹೇಳಿಕೆಯ ಅರ್ಥ…

ತಿಳುವಳಿಕೆ ಹಂತ ಹಂತವಾಗಿ ಆಗುವಂಥದಲ್ಲ ಅದು ಮಿಂಚಿನಂತೆ ಬಂದು ನಮ್ಮನ್ನು ತಟ್ಟುವಂಥದ್ದು. ತಿಳುವಳಿಕೆ, ಅರಿವು ಇಡಿಯಾಗಿ ಮಾತ್ರ ಸಾಧ್ಯವಾಗುವಂಥವು, ತುಣುಕುಗಳಲ್ಲಿ ಇವುಗಳು ದಕ್ಕುವುದಿಲ್ಲ |ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ

Osho states, “Understanding is not gradual, understanding is a sudden flash.”

ವಿಷಯ ‘ಬಹುತೇಕ ತಿಳಿದಿದೆ’ ಎಂದು ನೀವು ಹೇಳುವಿರಾದರೆ, ನಿಮ್ಮ ಮಾತು ಮೂರ್ಖತನದ್ದು. ನಜ್ರಾನಿಯ ಈ ಸಾಲನ್ನ ಬಹುವಾಗಿ ಇಷ್ಟಪಟ್ಟ ಒಬ್ಬ ಧರ್ಮಶಾಸ್ತ್ರಜ್ಞ, ಈ ಸಾಲು ಸುಲಭವಾಗಿ ಅರ್ಥವಾಗುವ ಹಾಗೆ ನಮ್ಮ ಸಾಮಾನ್ಯ ಬದುಕಿನ ಒಂದು ಉದಾಹರಣೆ ಕೊಡು ಎಂದು ನಜ್ರಾನಿಯನ್ನ ಕೇಳಿಕೊಂಡ.

ಖಂಡಿತ ಹೇಳುತ್ತೇನೆ ಎಂದ ನಜ್ರಾನಿ ವೃತ್ತದ ಉದಾಹರಣೆ ಕೊಟ್ಟ.

“ಬಹುತೇಕ ತಿಳಿದಿದೆ ಎನ್ನುವುದು ಒಂದು ಆಕಾರ ಬಹುತೇಕ ವೃತ್ತ ಎಂದಷ್ಟೇ ತಮಾಷೆಯ ವಿಷಯ”

ಕೆಲವು ಜನ ಹೀಗೆ ಮಾತನಾಡುವುದನ್ನ ನೀವು ಕೇಳಿರುತ್ತೀರಿ, “ವಿಷಯ ನಮಗೆ ಪೂರ್ತಿಯಾಗಿ ಅರ್ಥವಾಗಿಲ್ಲ ಆದರೆ ಸರಿ ಸುಮಾರು ಅರ್ಥ ಗೊತ್ತಾಗಿದೆ” ಇದು ಸಾಧ್ಯವಿಲ್ಲದ ಮಾತು.

ತಿಳುವಳಿಕೆ ಹಂತ ಹಂತವಾಗಿ ಆಗುವಂಥದಲ್ಲ ಅದು ಮಿಂಚಿನಂತೆ ಬಂದು ನಮ್ಮನ್ನು ತಟ್ಟುವಂಥದ್ದು. ತಿಳುವಳಿಕೆ, ಅರಿವು ಇಡಿಯಾಗಿ ಮಾತ್ರ ಸಾಧ್ಯವಾಗುವಂಥವು, ತುಣುಕುಗಳಲ್ಲಿ ಇವುಗಳು ದಕ್ಕುವುದಿಲ್ಲ. ನೀವು ಅರಿವನ್ನ ಒಂದೊಂದು ಮೆಟ್ಟಿಲಿನಂತೆ ಹತ್ತಿ ತಲುಪಲಾರಿರಿ. ಅರಿವನ್ನ ಚೂರು ಚೂರು ಶೇಖರಿಸಿ ಪೂರ್ಣ ಮಾಡಿಕೊಳ್ಳುವುದಕ್ಕಾಗುವುದಿಲ್ಲ. ಅರಿವನ್ನ ಪುಟ್ಟ ಪುಟ್ಟ ಭಾಗಗಳಾಗಿ ವಿಭಾಗಿಸಿ ಹಂಚಲಿಕ್ಕಾಗುವುದಿಲ್ಲ. ಅರಿವು ಇಡಿಯಾಗಿ ಮಾತ್ರ ನಿಮಗೆ ಸಾಧ್ಯವಾಗುವಂಥದು. ‘ಅರಿವು’ ನಿಮ್ಮದಾಗಿದೆ ಅಥವಾ ನಿಮ್ಮದಾಗಿಲ್ಲ ಎಂದು ಹೇಳಬಹುದೇ ಹೊರತು ನೀವು ಅರಿವಿನ ಸಮೀಪ ಇದ್ದೀರಿ ಎಂದು ಹೇಳಲಿಕ್ಕಾಗುವುದಿಲ್ಲ.

ಅರಿವು, ಜ್ಞಾನೋದಯ, ಎನ್ಲೈಟನ್ಮೆಂಟ್ ಹೇಗೆ ಕ್ಷಣಾರ್ಧದಲ್ಲಿ ಮಿಂಚಿನಂತೆ ಆವರಿಸಿಕೊಳ್ಳುತ್ತದೆ ಎನ್ನುವುದಕ್ಕೆ ಝೆನ್ ಮಾಸ್ಟರ್ ಗಳು ಹಲವಾರು ಉದಾಹರಣೆ ಕೊಡುತ್ತಾರೆ.

ಸಾಧನೆಯ ಹಾದಿಯಲ್ಲಿದ್ದ ಒಬ್ಬ ಝೆನ್ ಸನ್ಯಾಸಿ ಒಮ್ಮೆ ಮಾರ್ಕೆಟ್ ಮೂಲಕ ಹಾಯ್ದು ಹೋಗುವಾಗ ಮಾಂಸದ ಅಂಗಡಿಯೊಂದರಲ್ಲಿ ನಡೆಯುತ್ತಿದ್ದ ಸಂಭಾಷಣೆಯನ್ನು ಕಿವಿಗೊಟ್ಟು ಕೇಳಿದ.

ಗ್ರಾಹಕ : ನಿನ್ನ ಅಂಗಡಿಯಲ್ಲಿರುವ ಒಳ್ಳೆಯ ಮಾಂಸದ ತುಣುಕು ನನಗೆ ಬೇಕು

ಅಂಗಡಿಯವ: ನನ್ನ ಅಂಗಡಿಯಲ್ಲಿರೋದೆಲ್ಲ ಒಳ್ಳೆಯ ಮಾಂಸವೇ. ಇಲ್ಲಿಯ ಯಾವ ಮಾಂಸದ ತುಣುಕೂ ಕಳಪೆಯಲ್ಲ.

ಈ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದಂತಯೇ ಝೆನ್ ಸನ್ಯಾಸಿಗೆ ಜ್ಞಾನೋದಯವಾಯಿತು.

Osho, Sufis, the People of the Path – Talks on Sufism, Vol 1, Ch 7

Image : Belize’s famous Great Blue Hole is a massive underwater sinkhole that gives divers an ‘almost perfect circle’ to dive in

Leave a Reply